ರಾಷ್ಟ್ರೀಯ ಶಿಕ್ಷಣ ನೀತಿ- 2020 ಪರಿಚಯಾತ್ಮಕ ಉಪನ್ಯಾಸ ಕಾರ್ಯಕ್ರಮ

ಉಡುಪಿ : “ರಾಷ್ಟ್ರೀಯ ಶಿಕ್ಷಣ ನೀತಿ – 2020 ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಿದೆ. ದೇಶದಲ್ಲೇ ಮೊದಲು ಎನಿಸಿಕೊಂಡು ಕರ್ನಾಟಕದಲ್ಲಿ ಜಾರಿಯಾಗಿರುವ ಪ್ರಸ್ತುತ ಶಿಕ್ಷಣ ನೀತಿ ಜ್ಞಾನ, ಕೌಶಲ್ಯ, ತಂತ್ರಜ್ಞಾನ, ಉದ್ಯೋಗಾಧಾರಿತ ಕಲಿಕೆ ಮತ್ತು ಆರೋಗ್ಯ ಎಂಬ ಪಂಚಸೂತ್ರಗಳನ್ನು ಹೊಂದಿದೆ” ಎಂದು ಉಡುಪಿಯ ಡಯಟ್‌ನ ಉಪನ್ಯಾಸಕ ಚಂದ್ರ ನಾಯ್ಕ್ ಅಭಿಪ್ರಾಯಪಟ್ಟರು.

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಡಾ.ಜಿ.ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ, ಉಡುಪಿ,ಜಿಲ್ಲಾ ಪಂಚಾಯತ್, ಉಡುಪಿ ಹಾಗೂ ನೋಡಲ್ ಸಂಸ್ಥೆ, ಡಯಟ್ ಇವರ ಸಂಯುಕ್ತಾಶ್ರಯದಲ್ಲಿ ನಡೆದ

ರಾಷ್ಟ್ರೀಯ ಶಿಕ್ಷಣ ನೀತಿ- 2020 ಪರಿಚಯಾತ್ಮಕ ಉಪನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ. ಭಾಸ್ಕರ ಶೆಟ್ಟಿ ಎಸ್ ಹೊಸ ಶಿಕ್ಷಣ ನೀತಿ ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಹೊಸ ಯುಗವೊಂದರ ಆರಂಭವಾಗಿದೆ ಎಂದು ಅಭಿಪ್ರಾಯಪಟ್ಟರು.

ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಸೋಜನ್ ಕೆ.ಜಿ, ಇಂಗ್ಲೀಷ್ ಸಹಪ್ರಾಧ್ಯಾಪಕರು ಕಾಲೇಜಿಗೆ ನೂತನವಾಗಿ ಸೇರಿದ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಶಿಕ್ಷಣ ನೀತಿ -2020 ರ ಕುರಿತು ಪರಿಚಯಾತ್ಮಕ ಉಪನ್ಯಾಸ ನೀಡಿದರು. 

ಡಯಟ್ ಉಪನ್ಯಾಸಕ ಗಣೇಶ್ ಭಾಗವತ್ ಉಪಸ್ಥಿತರಿದ್ದರು. ಸಮಾಜಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ರಾಜೇಂದ್ರ ಕೆ, ನಿರೂಪಿಸಿ, ಅಂತಿಮ ವರ್ಷದ ವಿದ್ಯಾರ್ಥಿನಿ ಸಭಾ ಪ್ರಾರ್ಥಿಸಿ ವಂದಿಸಿದರು.

 
 
 
 
 
 
 
 
 
 
 

Leave a Reply