ಉಪಾಧ್ಯಾಯ ಮೂಡುಬೆಳ್ಳೆಯವರಿಗೆ ಪಿ.ಹೆಚ್.ಡಿ

ಖ್ಯಾತ ಕಲಾವಿದ, ರಾಷ್ಟ್ರಪ್ರಶಸ್ತಿ ಪುರಸ್ಕೃತ ಉಪಾಧ್ಯಾಯ ಮೂಡುಬೆಳ್ಳೆಯವರು ಬರೆದ ‘ರಂಗೋಲಿ ಮಂಡಲಗಳ ಸಾಮಾಜಿಕ ಪ್ರಭಾವ’ ಎಂಬ ವಿಷಯದ ಕುರಿತಾದ ಸಂಶೋಧನಾ ಪ್ರಬಂಧಕ್ಕೆ ಯೋಗ ಯೂನಿವರ್ಸಿಟಿ ಆಫ್ ದಿ ಅಮೇರಿಕಾಸ್, ಪ್ಲೋರಿಡಾ, ಯು.ಎಸ್.ಎ. ಇವರು ಡಾಕ್ಟರೇಟ್ ಪದವಿ ನೀಡಿದ್ದಾರೆ.

ಸಾವಿರಗಟ್ಟಲೆ ರಂಗೋಲಿ ಮಂಡಲಗಳನ್ನು ಬರೆದು ದಾಖಲೆ ಮಾಡಿರುವ ಉಪಾಧ್ಯಾಯರು ಪೂಜಾ ಮಂಡಲಗಳನ್ನು ಹುಟ್ಟುಹಾಕಿ ಆ ಮೂಲಕ ಭಕ್ತ ಜನರಲ್ಲಿ ಭಾವುಕತೆ ಮೂಡಿಸಿದವರು. ಮಂಡಲರಚನೆಯಲ್ಲಿ ವಿಶೇಷ ಸಾಧನೆ ಮಾಡಿ ‘ಮಂಡಲ ಬ್ರಹ್ಮ’, ‘ರಂಗೋಲಿ ರತ್ನ’ ಮುಂತಾಗಿ ಅನೇಕ ಬಿರುದುಗಳನ್ನು ಪಡೆದವರು. ಜೀವಮಾನದ ಕಲಾಸಾಧನೆಗಾಗಿ ಕರ್ನಾಟಕ ಲಲಿತಕಲಾ ಅಕಾಡೆಮಿಯ ಗೌರವ ಪ್ರಶಸ್ತಿ ಪಡೆದವರು. ಈ ಪ್ರಬಂಧದಲ್ಲಿ ಸಾಮಾನ್ಯ ರಂಗೋಲಿ ಹಾಗೂ ಮಂಡಲಗಳಿಗಿರುವ ವ್ಯತ್ಯಾಸ ಹಾಗೂ ಪೂಜಾ ಮಂಡಲಗಳು ಮಾಡಿರುವ ಕ್ರಾಂತಿಯ ಬಗ್ಗೆ ವಿಶ್ಲೇಶಿಸಲಾಗಿದೆ.

 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 

Leave a Reply