ಸಂಹಿತಾ ಜಿಪಿ ಗೆ ‘ಕೆಳದಿ ಚೆನ್ನಮ್ಮ ಅಸಾಧಾರಣ ಬಾಲಪ್ರತಿಭೆ ಪ್ರಶಸ್ತಿ’ 

ಕರ್ನಾಟಕ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ,ಇಲಾಖೆ ಜಿಲ್ಲಾಮಟ್ಟದಲ್ಲಿ ಕೊಡಮಾಡುವ ಮಕ್ಕಳ ಅಸಾಧಾರಣ ಸಾಧನೆಗಾಗಿ (​2019-20ನೇಸಾಲಿನ) ‘ಕೆಳದಿ ಚೆನ್ನಮ್ಮ ಅಸಾಧಾರಣ ಬಾಲಪ್ರತಿಭೆ ಉಡುಪಿ ಜಿಲ್ಲಾ ಪ್ರಶಸ್ತಿ’ಯನ್ನು ಪರ್ಕಳದ ಬಹುಮುಖಪ್ರತಿಭೆ ಸಂಹಿತಾ ಜಿ ಪಿ ಇವರಿಗೆ ನೀಡಿದೆ.​10ಸಾವಿರ ನಗದಿನೊಂದಿಗೆ ಪ್ರಶಸ್ತಿಪತ್ರ ನೀಡಿದೆ ಪ್ರಶಸ್ತಿ ಪಡೆದ ಸಂಹಿತಾ ಜಿ ಪಿ ಪರ್ಕಳ ನಿವಾಸಿ ಯಾಗಿದ್ದು ಮಣಿಪಾಲ ಮಾಧವಕೃಪಾ ಶಾಲೆಯಲ್ಲಿ ೮ನೇತರಗತಿಯಲ್ಲಿ ಓದುತ್ತಿದ್ದು ಝೀ-ಕನ್ನಡದ ‘ಕನ್ನಡ ಕಣ್ಮಣಿ’ ಶೋ ವಿಜೇತೆ ಯಾಗಿದ್ದಾಳೆ.
ನಾಟಕ, ಭಾಷಣ, ಸಂಗೀತ, ಚಿತ್ರಕಲೆ ಕ್ಷೇತ್ರದಲ್ಲಿ  ಬಹುಮುಖಸಾಧನೆ ಮಾಡಿರುವ ಸಂಹಿತಾ ಈಗಾಗಲೇ ಹಲವು ಬಹುಮಾನಗಳನ್ನು ಗಳಿಸಿದ್ದಾಳೆ. ಚಿತ್ರದುರ್ಗದ ಮುರುಘಾಮಠದ ಶರಣಸಂಸ್ಕೃತಿಉತ್ಸವ, ತರಳಬಾಳುಹುಣ್ಣಿಮೆ ಉತ್ಸವ, ಆದಿಚುಂಚನಗಿರಿಯಲ್ಲಿ ನಡೆದ ಮಕ್ಕಳ ಸಾಹಿತ್ಯಸಮ್ಮೇಳನ ಸೇರಿದಂತೆ ಹಲವು ಪ್ರತಿಷ್ಠಿತ ಕಾರ್ಯಕ್ರಮದಲ್ಲಿ ತನ್ನ ಪ್ರತಿಭೆ ಮೆರೆದಿದ್ದಾಳೆ. ಅದಮಾರು ಪೂರ್ಣಪ್ರಜ್ಞ ಕಾಲೇಜಿನಲ್ಲಿ ಶಿಕ್ಷಕರಾಗಿರುವ ಪ್ರಭಾಕರ ಜಿಪಿ ಮತ್ತು ಮಣಿಪಾಲ ವಿವಿ ಉದ್ಯೋಗಿ ಕಲ್ಪನಾ ದಂಪತಿಗಳ ಪುತ್ರಿ​.​
 
 
 
 
 
 
 
 
 
 
 

Leave a Reply