ಪುತ್ತಿಗೆ ಪರ್ಯಾಯ ಉತ್ಸವ ಪುರ ಪ್ರವೇಶ ಪೂರ್ವಭಾವಿ ಸಭೆ

ಇದೇ ಜನವರಿ 8ರಂದು ಪುತ್ತಿಗೆ ಶ್ರೀಪಾದರಾದ ಪರಮಪೂಜ್ಯ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ತಮ ಶಿಷ್ಯ ಸುಶ್ರೀಂದ್ರ ತೀರ್ಥ ಶ್ರೀಪಾದರೊಂದಿಗೆ ಭಾರತದ ತೀರ್ಥಕ್ಷೇತ್ರ ಸಂಚಾರಗೈದು ಉಡುಪಿ ಕ್ಷೇತ್ರಕ್ಕೆ ಪುರ ಪ್ರವೇಶ ಗೈ ಯಲ್ಲಿದ್ದಾರೆ ಎಂದು ಸ್ವಾಗತ ಸಮಿತಿಯ ಅಧ್ಯಕ್ಷರಾದ Dr.ಎಚ್ ಎಸ್ ಬಲ್ಲಾಳ್ ಸಮಿತಿಯ ಪೂರ್ವ ಭಾವಿ ಸಭೆಯಲ್ಲಿ ತಿಳಿಸಿದರು ಪುರ ಪ್ರವೇಶ ಮೆರವಣಿಗೆಯು ಜೋಡುಕಟ್ಟೆಯಿಂದ ಕೆಎಂ ಮಾರ್ಗವಾಗಿ ತ್ರಿವೇಣಿ ವೃತ್ತದಲ್ಲಿ ತಿರುಗಿ ಕನಕದಾಸ ರಸ್ತೆಯ ಮೂಲಕ ಉಡುಪಿ ರಥಬೀದಿಯನ್ನು ತಲುಪಲಿದ್ದು ಈ ಮೆರವಣಿಗೆಯಲ್ಲಿ ವಿವಿಧ ಸಮಾಜದ ಸಂಘಟನೆಗಳ ಪಾಲ್ಗೊಳ್ಳುವಿಕೆಯು ಇರುತ್ತದೆ ಸಾಂಪ್ರದಾಯಿಕ ಟಾಬ್ಲೊ ವೇದಘೋಷ ,ಭಜನೆ ಗಣ್ಯಮಾನ್ಯರ ಉಪಸ್ಥಿತಿಯೊಂದಿಗೆ ಭಾವಿ ಪರ್ಯಾಯ ಪುತ್ತಿಗೆ ಮಠದ ಸಂಸ್ಥಾನ ಮೂರ್ತಿ ಉಪೇಂದ್ರ ವಿಠಲ ದೇವರ ಮೆರವಣಿಗೆಯು ಸಂಪನ್ನಗೊಳ್ಳಲಿದೆ ಎಂದು ತಿಳಿಸಿದರು. ಸಮಿತಿಯ ಕಾರ್ಯಾಧ್ಯಕ್ಷರಾದ ಮಾಜಿ ಶಾಸಕ ಶ್ರೀ ರಘುಪತಿ ಭಟ್ ಮೆರವಣಿಗೆಯ ಬಗ್ಗೆ ಹಾಗೂ ಸಭಾ ಕಾರ್ಯಕ್ರಮದಲ್ಲಿ ಭಾವಿ ಪರ್ಯಾಯ ಶ್ರೀಪಾದರಿಗೆ ನಡೆಯುವ ಅಭಿನಂದನಾ ಕಾರ್ಯಕ್ರಮದ ಕುರಿತು ತಿಳಿಸುತ್ತಾ ಸ್ವಾಗತ ಸಮಿತಿ ಹಾಗೂ ನಗರಸಭೆಯ ಸಹಯೋಗದಲ್ಲಿ ಪೌರಾಭಿನಂದನೆ ಕಾರ್ಯಕ್ರಮ ಶ್ರೀಪಾದರಿಗೆ ನಡೆಯಲಿದೆ ಎಂದು ತಿಳಿಸಿದರು ಶ್ರೀಮಠದ ದಿವಾನರಾದ ಶ್ರೀ ನಾಗರಾಜ ಆಚಾರ್ಯ ಕರ್ನಾಟಕ ಬ್ಯಾಂಕ್ ಎಜಿಎಂ ರಾಜಗೋಪಾಲ್ ಕೋಶಾಧಿಕಾರಿ ರಂಜನ್ ಕಲ್ಕುರ ಸಂಚಾಲಕ ಶ್ರೀ ಮಟ್ಟಾರು ರತ್ನಾಕರ ಹೆಗ್ದೆ, ದಿನೇಶ್ ಪುತ್ರನ್ ಹೊರೆ ಕಾಣಿಕೆ ಸಮಿತಿಯ ಬೈಕಾಡಿ ಸುಪ್ರಸಾದ ಶೆಟ್ಟಿ ಮುಂತಾದ ಗಣ್ಯರು ಸ್ವಾಗತ ಸಮಿತಿಯ ಹೆಚ್ಚಿನ ಸದಸ್ಯರು ಉಪಸ್ಥಿತರಿದ್ದರು. ಶ್ರೀಪಾದರ ಸಾಗರೋತ್ತರ ಕಾರ್ಯದರ್ಶಿ ಎಂ ಪ್ರಸನ್ನಚಾರ್ಯ ಧನ್ಯವಾದವಿತ್ತರು .ಸಂಚಾಲಕ ರಮೇಶ್ ಭಟ್ ಕೆ ಸ್ವಾಗತಿಸಿ ನಿರೂಪಿಸಿದರು

 
 
 
 
 
 
 
 
 
 
 

Leave a Reply