ಕೊಡವೂರು ಹಳೆವಿದ್ಯಾರ್ಥಿ ಸಂಘ, ಯುವಕ ಸಂಘ: ಕ್ರೀಡಾಕೂಟ

ಕೊಡವೂರು ಹಳೆವಿದ್ಯಾರ್ಥಿ ಸಂಘ ಹಾಗೂ ಯುವಕ ಸಂಘದ 59 ನೇ ವಾರ್ಷಿಕ ಕ್ರೀಡಾಕೂಟವು ಜ.8 ರಂದು ಸ್ಥಳೀಯ ಶಾಲಾ ಮೈದಾನದಲ್ಲಿ ಜರುಗಿತು. ನ್ಯಾಯವಾದಿ ಅನಿಲ್ ಕುಮಾರ್ ಪಾರಿವಾಳವನ್ನು ದಿಗಂತಕ್ಕೆ ಹಾರಿ ಬಿಡುವುದರ ಮೂಲಕ ಕ್ರೀಡಾ ಕೂಟಕ್ಕೆ ಚಾಲನೆ ನೀಡಿ ಕ್ರೀಡೆ ನಮ್ಮನ್ನು ದೈಹಿಕವಾಗಿ ಮಾನಸಿಕವಾಗಿ ಕ್ರಿಯಾಶೀಲರನ್ನಾಗಿಸಿ ಶಿಸ್ತುಬದ್ಧ ಜೀವನ ನಮ್ಮಲ್ಲಿ ರೂಪುಗೊಳ್ಳುವಂತೆ ಮಾಡುತ್ತದೆ. ಮತ್ತು ಸಾಮಾಜಿಕ ಸ್ವಾಸ್ಥ್ಯಕ್ಕೆ ಕ್ರೀಡೆ ಪೂರಕವಾಗಿರುತ್ತದೆ.

 

ಹಾಗೆಯೇ ಕ್ರೀಡೆ ಸೋಲು ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸುವಂತೆ ಮಾಡಿ ಆತ್ಮಸ್ಥೈರ್ಯವನ್ನು ಉದ್ದೀಪನಗೊಳಿಸುತ್ತದೆ ಎಂದರು. ಮತ್ಸ್ಯೋದ್ಯಮಿ ಸುಧಾಕರ್ ಎ.ಕುಂದರ್,ನಗರಸಭಾ ಸದಸ್ಯ ವಿಜಯ ಕೊಡವೂರು, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಪೈ, ಶ್ರೀ ಶಂಕರನಾರಾಯಣ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಟಿ.ರಾಘವೇಂದ್ರ ರಾವ್, ಶಾಲಾ ಮುಖ್ಯ ಶಿಕ್ಷಕಿ ಪುಷ್ಪಾವತಿ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಕೃಷ್ಣ ದೇವಾಡಿಗ,ಉದ್ಯಮಿ ಭಾಸ್ಕರ್ ಪಾಲನ್, ಯುವಕ ಸಂಘದ ಗೌರವಾಧ್ಯಕ್ಷ ಪ್ರಭಾತ್ ಕೋಟ್ಯಾನ್, ಸ್ಥಳೀಯ ಗಣ್ಯರಾದ ಶಿವಾನಂದ ಕುಂದರ್, ರಮೇಶ್ ಅಮೀನ್, ಶೇಖರ್ ಮಾಬ್ಯಾನ್, ಸುರೇಶ್ ಸೇರಿಗಾರ್, ಅಶೋಕ್ ಶೆಟ್ಟಿಗಾರ್, ಸುಧಾ ನಾರಾಯಣ ಶೆಟ್ಟಿ, ಚಂದ್ರಾವತಿ ಕಾನಂಗಿ, ಆಶಾ ಚಂದ್ರಶೇಖರ್, ಶೈಲಜ,ಶರತ್ ಚಂದರ್ ಉಪಸ್ಥಿತರಿದ್ದರು.ನೂರಕ್ಕೂ ಅಧಿಕ ಪುರುಷ ಮತ್ತು ಮಹಿಳಾ ಕ್ರೀಡಾಳುಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು.

 

ಕ್ರೀಡಾಕೂಟ ಆರಂಭದ ಮುನ್ನ ಸ್ಥಳೀಯ ದೇವಾಲಯದಿಂದ ಶಾಲಾ ಮೈದಾನದವರೆಗೆ ಕ್ರೀಡಾ ಪಥ ಸಂಚಲನ ನಡೆಯಿತು. ನಗರಸಭೆಯ ವಿಪಕ್ಷ ನಾಯಕ ರಮೇಶ್ ಕಾಂಚನ್ ಮಹಿಳೆಯರ ಕ್ರೀಡಾ ಸ್ಪರ್ಧೆಗಳ ‌ಸಂದರ್ಭದಲ್ಲಿ ಆಗಮಿಸಿ ಶುಭ ಹಾರೈಸಿದರು
ಯುವಕ ಸಂಘದ ಅಧ್ಯಕ್ಷ ದೀಪಕ್.ವಿ ದೇವಾಡಿಗ ಸ್ವಾಗತಿಸಿದರು. ಕಾರ್ಯದರ್ಶಿ ಜಗದೀಶ್ ಶೆಟ್ಟಿ ವಂದಿಸಿದರು. ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಸತೀಶ್ ಕೊಡವೂರು ನಿರೂಪಿಸಿದರು. ಕ್ರೀಡಾಳುಗಳಿಗೆ,ಕ್ರೀಡಾಭಿಮಾನಿಗಳಿಗೆ ಮಧ್ಯಾಹ್ನ ಊಟ ಸಾಯಂಕಾಲ ಲಘು ಉಪಹಾರದ ವ್ಯವಸ್ಥೆಯನ್ನು ಸಂಘದ ವತಿಯಿಂದ ಏರ್ಪಡಿಸಲಾಯಿತು.

 
 
 
 
 
 
 
 
 
 
 

Leave a Reply