ಉಡುಪಿ ಅಂಚೆ ವಿಭಾಗದಿಂದ ಲೈಂಗಿಕ ದೌರ್ಜನ್ಯ ತಡೆ ಮಾಹಿತಿ ಶಿಬಿರ

ಸ್ತ್ರೀಯನ್ನು ಪೂಜಿಸುವ, ಗೌರವಿಸುವ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಆಕೆ ಕೆಲಸ ಮಾಡುವ ಕಚೇರಿಯಲ್ಲಿ ಯಾವುದೇ ದೌರ್ಜನ್ಯ ನಡೆಯದಂತೆ ನೋಡಿಕೊಳ್ಳುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ಅದರೊಂದಿಗೆ ಪ್ರತಿಯೊಬ್ಬ ಉದ್ಯೋಗಸ್ಥ ಮಹಿಳೆ ಕೂಡಾ ತನ್ನ ಮಿತಿಯನ್ನು ಅರಿತುಕೊಂಡು ಪುರುಷ ಸಹೋದ್ಯೋಗಿಗಳೊಂದಿಗೆ ಶಿಸ್ತು ಸಂಯಮದಿಂದ ವ್ಯವಹರಿಸಿ ಸಕಾರಾತ್ಮಕ ಭಾವನೆ ಬೆಳೆಸಿಕೊಳ್ಳಬೇಕು. ಪುರುಷ ಸಹೋದ್ಯೋಗಿಗಳು ಮಹಿಳೆಯರಿಗೆ ಗೌರವ ನೀಡುವುದರೊಂದಿಗೆ ಸೌಹಾರ್ದಯುತ ವಾತಾವರಣ ರೂಪಿಸಿಕೊಂಡಾಗ ಕಚೇರಿ ಕೆಲಸಗಳು ಸುಗಮವಾಗಿ ಸಾಗುವುದರೊಂದಿಗೆ ಸರ್ವರಿಗೂ ನೆಮ್ಮದಿ ಸಿಗುತ್ತದೆ ಎಂದು ಮಕ್ಕಳ ಹಕ್ಕುಗಳ ಜಾಗತಿಕ ರಾಯಭಾರಿ ,ಶಿಕ್ಷಣ ತಜ್ಞೆ, ಮಹಿಳಾಪರ ಹೋರಾಟಗಾರ್ತಿ ವನಿತಾ ಎನ್ ತೊರ್ವಿ ಅಭಿಪ್ರಾಯಪಟ್ಟರು. ಉಡುಪಿ ಅಂಚೆ ವಿಭಾಗ ಆಯೋಜಿಸಿದ್ದ ಲೈಂಗಿಕ ದೌರ್ಜನ್ಯ ತಡೆ ಮಾಹಿತಿ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ಅವರು ಮಹಿಳಾಪರ ಕಾನೂನುಗಳ ಬಗ್ಗೆ ಮಾಹಿತಿ ನೀಡಿದರು. ಅವರನ್ನು ಅಂಚೆ ಅಧೀಕ್ಷಕರಾದ ನವೀನ್ ಚಂದರ್ ಹಾಗೂ ಸಹಾಯಕ ಅಂಚೆ ಅಧೀಕ್ಷಕರಾದ ಕೃಷ್ಣರಾಜ ವಿಠಲ ಭಟ್ ಗೌರವಿಸಿದರು.ಆಶಾ ಲತಾ ಮತ್ತು ಮೇಘನಾ ಶೆಣೈ ಪ್ರಾರ್ಥನೆ ಹಾಗೂ ಸ್ವಾಗತ ನಡೆಸಿಕೊಟ್ಟರು. ಪೂರ್ಣಿಮಾ ಜನಾರ್ದನ್ ಕಾರ್ಯಕ್ರಮ ನಿರ್ವಹಿಸಿ ಉಡುಪಿ ಪ್ರಧಾನ ಅಂಚೆ ಕಚೇರಿಯ ಅಂಚೆ ಪಾಲಕ ಗುರು ಪ್ರಸಾದ್ ವಂದಿಸಿದರು.

 
 
 
 
 
 
 
 
 
 
 

Leave a Reply