ಕೋಟದ ಪಂಚವರ್ಣ ಯುವಕ ಮಂಡಲದಿಂದ ಪರಿಸರ ಸ್ನೇಹಿ ಕಾರ್ಯ

ಕೋಟ : ಕೋಟ ಪಂಚವರ್ಣ ಯುವಕ ಮಂಡಲದ 84ನೇ ಭಾನುವಾರದ ಪರಿಸರ ಸ್ನೇಹಿ ಕಾರ್ಯಕ್ರಮದ ಸಲುವಾಯ ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ ಕುಂದರ್ ಮಾರ್ಗದರ್ಶನದಲ್ಲಿ ವಿವಿಧ ಸಂಘ ಸಂಸ್ಥೆಗಳಿಗೆ ಗಿಡ ವಿತರಣೆ ಕಾರ್ಯಕ್ರಮ ಗಿಳಿಯಾರು ಯುವಕ ಮಂಡಲ, ಮಣೂರು ಫ್ರೆಂಡ್ಸ್,, ವಿಪ್ರ ಮಹಿಳಾ ಬಳಗ ಸಾಲಿಗ್ರಾಮ ಸಹಬಾಗಿತ್ವದಲ್ಲಿ ಮಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಆಡಳಿತ ಮಂಡಳಿಯ ಸಹಯೋಗದೊಂದಿಗೆ ಭಾನುವಾರ ಮಣೂರು ಮಹಾಲಿಂಗೇಶ್ವರ ದೇವಸ್ಥಾನ ವಠಾರದಲ್ಲಿ ನಡೆಯಿತು.

ಮಣೂರು ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಕಾರ್ಯದರ್ಶಿ ಅರುಣಾಚಲ ಮಯ್ಯ ಗಿಡ ವಿತರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಮ್ಮೂರ ಪರಿಸರ ಉಳಿಸುವಲ್ಲಿ ಯುವಕ ಮಂಡಲಗಳ ಪಾತ್ರ ಗಣನೀಯವಾದದ್ದು ಈ ವಿಚಾರದಲ್ಲಿ ಸ್ಥಳೀಯ ಉದ್ಯಮಿಗಳ ಹಸಿರು ಕ್ರಾಂತಿಗಾಗಿ ಪಣತೊಟ್ಟಿರುವುದು ಶ್ಲಾಘನೀಯ ಎಂದು ಹೇಳಿದರು.

ಮನುಷ್ಯನ ಜೀವಾಳ ಹಸಿರು ಅದರಿಂದಲೇ ಉಸಿರು ಎನ್ನುವುದನ್ನು ಮನಗಂಡು ನಮ್ಮ ನಮ್ಮ ಮನೆ ಹಿತಲಿನಲ್ಲಿ ಒಂದೊಂದು ಸಸ್ಯಗಳನ್ನು ನೆಟ್ಟರೆ ಅದು ನಮ್ಮ ಜೀವತ ಅವಧಿಯವೆರೆಗೂ ನಮ್ಮನ್ನು ಬದುಕಿಸಬಲ್ಲದು. ಅದಕ್ಕಾಗಿ ಈ ಕೆಲಸಕ್ಕೆ ಪ್ರತಿಯೊಬ್ಬರು ಕೈ ಹಾಕಬೇಕು ಈ ನಿಟ್ಟಿನಲ್ಲಿ ಪಂಚವರ್ಣ ಯುವಕ ಮಂಡಲದ ಈ ಸರಣಿ ಕಾರ್ಯ ಪ್ರಶಂಸನೀಯ. ಇಂತಹ ಸಂಘಟನೆಗಳು ಎಲ್ಲಾ ಭಾಗಗಳಲ್ಲಿ ಹುಟ್ಟಿಕೊಳ್ಳಲಿ ಎಂದು ಹಾರೈಸಿದರು.

ಶ್ರೀ ದೇವಳದ ಅಧ್ಯಕ್ಷ,ಪಂಚವರ್ಣ ಯುವಕ ಮಂಡಲದ ಗೌರವಾಧ್ಯಕ್ಷ ಸತೀಶ್ ಎಚ್ ಕುಂದರ್, ಟ್ರಾವೆಲಿಂಕ್ಸ್ ಫ್ರೆಂಡ್ಸ್ ನ ಅಶೋಕ್ ಶೆಟ್ಟಿ, ಧ.ಗ್ರಾ.ಯೋಜನೆಯ ಸೇವಾ ಪ್ರತಿನಿಧಿ ಶಾಂತಾ ಆಚಾರ್ಯ, ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಮೃತ್ ಜೋಗಿ, ಸ್ಥಳೀಯರಾದ ನಾಗಪ್ಪಯ್ಯ ಶೆಣೈ, ಕೋಟ ಗ್ರಾ.ಪಂ.ಸದಸ್ಯ ಶಿವರಾಮ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಪಂಚವರ್ಣ ಕಾರ್ಯಾಧ್ಯಕ್ಷ ರವೀಂದ್ರ ಕೋಟ ಸಂಯೋಜಿಸಿದರು.

 
 
 
 
 
 
 
 
 
 
 

Leave a Reply