ಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೊಂಡಗಳದ್ದೇ ಕಾರುಬಾರು

ಕಳೆದ ಎರಡು ದಿನಗಳಿಂದ ಸುರಿದ ಬಾರೀ ಮಳೆಯಿಂದ ಉಡುಪಿ ಬ್ರಹ್ಮಾವರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಮತ್ತು ಸೇತುವೆಗಳಲ್ಲಿ ಹಲವಾರು ಕಡೆ ದೊಡ್ಡ ದೊಡ್ಡ ಹೊಂಡಗಳು ಉಂಟಾಗಿವೆ.

ವಾಹನ ಸವಾರರಿಗೆ ಅದರಲ್ಲಿ ಮಳೆ ನೀರು ತುಂಬಿ ಹೊಂಡದ ಆಳ ಗೊತ್ತಾಗದೆ ಅಪಘಾತ ಸಂಭವಿಸುವ ಪರಿಸ್ಥಿತಿ ಉದ್ಭವಿಸಿದೆ. ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದೇ ಮತ್ತು ಅಲ್ಲಲ್ಲಿ  ಹೊಂಡಗಳಲ್ಲಿ ನೀರು ತುಂಬಿ ಘನ ವಾಹನಗಳು ಹೋಗುವಾಗ ಪಾದಾಚಾರಿಗಳಿಗೆ ಮತ್ತು ಇನ್ನೊಂದು ಮಗ್ಗುಲಲ್ಲಿ ಸಂಚರಿಸುವ ದ್ವಿಚಕ್ರ, ಕಾರು ವಾಹನ ಸವಾರರಿಗೆ ನೀರು ಸಿಂಪಡಣೆಯಾಗಿ ಅಪಘಾತ ಸಂಭವಿಸುವ ಸಾಧ್ಯತೆಗಳು ಹೆಚ್ಚು. 

ಟೋಲ್ ಸಂಗ್ರಹಣೆ ಮಾತ್ರ .. ನಿರ್ವಹಣೆ  ಇಲ್ಲ. ಹೆಚ್ಚಿನ ಅವಘಡ ಆಗುವ ಮುನ್ನವೇ ಹೊಂಡ ಗಳನ್ನು ಮುಚ್ಚಿ ನೀರು ಸರಾಗವಾಗಿ ಹರಿದು ಹೋಗಲು ಅಧಿಕಾರಸ್ಥರು ವ್ಯವಸ್ಥೆ ಮಾಡುವುದು ಒಳಿತು.  

 
 
 
 
 
 
 
 
 
 
 

Leave a Reply