ಮಹಾರಾಷ್ಟ/ ಕೇರಳದಿಂದ ರೈಲಿನಲ್ಲಿ ಆಗಮಿಸುವ ಪ್ರಯಾಣಿಕರ RTPCR  ಪರೀಕ್ಷೆಗೆ ನೋಡಲ್ ಅಧಿಕಾರಿ ನೇಮಕ

ಉಡುಪಿ: ಉಡುಪಿ ಜಿಲ್ಲೆಗೆ ಮಹಾರಾಷ್ಟ ಮತ್ತು ಕೇರಳದಿಂದ ರೈಲು ಮಾರ್ಗದ ಮೂಲಕ
ಆಗಮಿಸುತ್ತಿರುವ ಪ್ರಯಾಣಿಕರ RTPCR ವರದಿಯನ್ನು ರೈಲು ನಿಲ್ದಾಣಗಳಲ್ಲಿ ಸಂಗ್ರಹಿಸಲು ನೋಡಲ್ ಅಧಿಕಾರಿಗಳನ್ನು ನೇಮಿಸಿದ್ದು, ಉಡುಪಿ ರೈಲ್ವೆ ನಿಲ್ದಾಣಕ್ಕೆ ನೋಡಲ್ ಅಧಿಕಾರಿ ಯನ್ನಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ. ರೋಶನ್ ಕುಮಾರ್ ಶೆಟ್ಟಿ (ಮೊ.98454 32303 ) ಹಾಗೂ ಮೇಲ್ವಿಚಾರಕರಾಗಿ ಪದವಿ
ಪೂರ್ವ ಶಿಕ್ಷಣ ಇಲಾಖೆಯ ಕ್ರೀಡಾ ಸಂಯೋಜಕ ದಿನೇಶ್ (98861 13207 ) ಮತ್ತು ಬೈಂದೂರು ಮೂಕಾಂಬಿಕಾ ರೈಲ್ವೆ ನಿಲ್ದಾಣಕ್ಕೆ ನೋಡಲ್ ಅಧಿಕಾರಿಯನ್ನಾಗಿ ಬೈಂದೂರು ನ ತಾಲೂಕು ಕ್ರೀಡಾಧಿಕಾರಿ ಪ್ರಭಾಕರ್ (ಮೊ.79751 85766 ) ಅವರನ್ನು ನೇಮಕ ಮಾಡಿ ಜಿಲ್ಲಾಧಿಕಾರಿ ಜಿ.ಜಗದೀಶ್ ಆದೇಶ ಹೊರಡಿಸಿದ್ದಾರೆ.

ಈ ಅಧಿಕಾರಿಗಳು ಮಹಾರಾಷ್ಟ ಮತ್ತು ಕೇರಳದಿಂದ ರೈಲು ಮಾರ್ಗದ ಮೂಲಕ ಆಗಮಿಸುವ ಪ್ರಯಾಣಿಕರು 72 ಗಂಟೆಯ ಮುಂಚಿನ RTPCR ನೆಗೆಟಿವ್ ವರದಿ ಹೊಂದಿರುವ ಬಗ್ಗೆ ಖಚಿತ ಪಡಿಸಿಕೊಳ್ಳಬೇಕು. ಒಂದು ವೇಳೆ ವರದಿ ಇಲ್ಲದೇ ಇದ್ದಲ್ಲಿ ಅಂತಹ ಪ್ರಯಾಣಿಕರನ್ನು ಕಡ್ಡಾಯ ವಾಗಿ ರೈಲ್ವೆ ಸ್ಟೇಶನ್ ನಲ್ಲಿ RAT ಪರೀಕ್ಷೆ ನಡೆಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿ ಕಾರಿಗಳು ಆದೇಶಿಸಿದ್ದಾರೆ.

 
 
 
 
 
 
 
 
 
 
 

Leave a Reply