ಎಂ. ಜಿ. ಎಂ ಸಂಧ್ಯಾ ಕಾಲೇಜು: ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಘಟಕದ ಉದ್ಘಾಟನೆ ಮತ್ತು ಪ್ರತಿನಿಧಿಗಳ ಪ್ರಮಾಣ ವಚನ

 ಎಂ.ಜಿ. ಎಂ ಸಂಧ್ಯಾ ಕಾಲೇಜಿನಲ್ಲಿ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಘಟಕದ ಉದ್ಘಾಟನೆ ಮತ್ತು ಪ್ರತಿನಿಧಿಗಳ ಪ್ರಮಾಣ ವಚನ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಡಾ. ಕೃಷ್ಣಮೂರ್ತಿ ಪ್ರಭು ಅವರು ಮಾತನಾಡಿ ಕಾಲೇಜಿನಲ್ಲಿ ಇಂಥ ಕಾರ್ಯಕ್ರಮಗಳು ಜರುಗಿದಾಗ ಮಾತ್ರ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗಿರುತ್ತದೆ. ಜನ್ನನ ಕಥೆಯೊಂದನ್ನು ಹೇಳಿ ಮಕ್ಕಳ ಬದುಕಿನ ವಿಚಾರವನ್ನು ವಿಸ್ತರಿಸಿದರು. ಮಕ್ಕಳೆ, ನಿಮ್ಮ ಬದುಕಿನ ಭವಿಷ್ಯದಲ್ಲಿ ಎದುರಾಗುವ ಸಮಸ್ಯೆಗಳನ್ನು ಇಂದಿನಿಂದಲೇ ತಯಾರಾಗಿರಬೇಕು. ನಮ್ಮ ಬದುಕಿನ ಬುದ್ಧಿವಂತಿಕೆ ನಮ್ಮ ಕೈಯಲ್ಲಿ ಲ್ಯಾಂಪಿನ ಹಾಗೆ ಇರುತ್ತದೆ. ಆ ಲ್ಯಾಂಪಿನ ಬೆಳಕು ಯಾವತ್ತು ಇರಬೇಕು ಎಂದರೆ ಎಣ್ಣೆ ಹಾಕಬೇಕು. ಇಲ್ಲವೆಂದರೆ ಆರುತ್ತದೆ. ನಮ್ಮ ಜ್ಞಾನ ಯಾವತ್ತು ಇರಬೇಕು ಎಂದರೆ ನಾವು ಪ್ರತಿನಿತ್ಯ ಅಧ್ಯಯನ ಮಾಡಬೇಕು. ಸದಾ ಜಾಗೃತರಾಗಿರಬೇಕು. ಓದಿನ ಜೊತೆಗ ನಾಯಕ್ತ್ವದ ಗುಣವನ್ನು ಬೆಳೆಸಿಕೊಳ್ಳುವ ಅವಶ್ಯಕತೆ ಇವತ್ತಿನ ಸಮಾಜದಲ್ಲಿ ಬದುಕುವಾಗ ನಿಜವಾಗಿಯೂ ಅವಶ್ಯಕತೆ ಇದೆ. ಜೊತೆಗೆ ಕಾಲೇಜು ಜೀವನದಲ್ಲಿ ಶಿಸ್ತು, ಬದ್ಧತೆ ಇದ್ದಾಗ ಮಾತ್ರ ಮುಂದೆ ಭವಿಷ್ಯದಲ್ಲಿ ಒಳ್ಳೆಯ ನಾಯಕನಾಗಿ ಸಾಧಕನಾಗಿ ಬದುಕಬಹುದು ಎಂದರು. ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಘಟಕದ ಮುಖ್ಯಸ್ಥರಾದ ಡಾ. ಎಂ. ವಿಶ್ವನಾಥ ಪೈ ಅವರು ಪ್ರಾಸ್ತಾವಿಕ ಮಾತನಾಡಿ ಶುಭಹಾರೈಸಿ, ವಿದ್ಯಾರ್ಥಿ ಪ್ರತಿನಿಧಿಗಳಿಗೆ ಪ್ರಮಾಣ ವಚನ ಬೋಧಿಸಿದರು. ಪ್ರತಿನಿಧಿಗಳಾದ ಸಶಾಂಕ ಆರ್.‌ ರಾವ್, ನಿಹಾರಿಕಾ‌ ಜೆ. ಶೆಟ್ಟಿ, ತನುಷ್‌ ಬಿ. ಪೂಜಾರಿ, ಚೈತಾಲಿ ಜಿ. ಕೋಟ್ಯಾನ್, ನಿಶ್ಮಿತಾ‌ ಶೆಟ್ಟಿ ಆಯ್ಕೆಯಾದ ಪ್ರತಿನಿಧಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದರು. ಡಾ. ಲಕ್ಷ್ಮೀನಾರಾಯಣ ಕಾರಂತ, ಡಾ. ಮಾಲತಿ ದೇವಿ ಮತ್ತು ಡಾ. ಮಲ್ಲಿಕಾ ಶೆಟ್ಟಿಯವರು ಮಾತನಾಡಿ ಮಕ್ಕಳಿಗೆ ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ ಕಾಲೇಜಿನ ಪ್ರಾಚಾರ್ಯರಾದ ಡಾ. ದೇವಿದಾಸ ಎಸ್.‌ ನಾಯ್ಕರು ಮಾತನಾಡಿ ನಾಯಕತ್ವದ ಗುಣ ನಮ್ಮ ಮಕ್ಕಳಲ್ಲಿ ಕಾಲೇಜು ದಿನದಿಂದಲೇ ಜಾಗೃತಗೊಳ್ಳಬೇಕು. ಸುಸಂಬದ್ಧ ಸಮಾಜವನ್ನು ನಿರ್ಮಾಣದಲ್ಲಿ ಇಂದಿನ ಮಕ್ಕಳ ಅವಶ್ಯಕತೆ ತುರ್ತಾಗಿದೆ. ಮಕ್ಕಳಲ್ಲಿ ಜ್ಞಾನಾಧಾರಿತವಾದ ನಾಯಕತ್ವ ಬೆಳೆಯಬೇಕು. ಬದುಕಿನ ಜ್ಞಾನವೆನ್ನುವುದು ಒಂದೆರಡು ದಿನಗಳಲ್ಲಿ ಸಂಪಾದಿಸುವಂಥ ಸುಲಭ ಸಾಧನವಲ್ಲ. ನಿರಂತರ ಶ್ರಮದಿಂದ ಬರುವಂಥಹದ್ದು. ಹಾಗೇ ಒಳ್ಳೆಯ ನಾಯಕ್ವ ಗುಣವೂ ಕೂಡ. ಈ ಕಾರ್ಯಕ್ರಮವನ್ನು ಧನ್ಯ ನಿರೂಪಿಸಿದರು. ಸಶಾಂಕ ಸ್ವಾಗತಿಸಿದರು. ಶ್ರೀಕರ ಟಿ. ಎಸ್‌, ಅತಿಥಿ ಪರಿಚಯ. ನಿಹಾರಿಕ ವಂದಿಸಿದರು.

 
 
 
 
 
 
 
 
 
 
 

Leave a Reply