ಕೊಡವೂರಿನಲ್ಲಿ ವಿವೇಕಾನಂದ ಮಾರ್ಗ ರಸ್ತೆ ಉದ್ಘಾಟನೆ

ಉಡುಪಿ: ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದ ಹತ್ತಿರದ ಅತ್ತಲಾಡಿ ಪರಿಸರದ ಜನರು ಸುಮಾರು 25 ವರ್ಷಗಳಿಂದ ಆಗ್ರಹಿಸುತ್ತಿದ ಸಂಪರ್ಕ ರಸ್ತೆಯ ಬಗ್ಗೆ ಸ್ಥಳೀಯ ನಗರಸಭಾ ಸದಸ್ಯ ವಿಜಯ ಕೊಡವೂರು ಬಹಳ ಮುತುವರ್ಜಿ ವಹಿಸಿಕೊಂಡು ಪರಿಸರದ ಜನರನ್ನು ಒಗ್ಗೂಡಿಸಿ ಶ್ರಮದಾನದ ಮೂಲಕ ರಸ್ತೆ ನಿರ್ಮಿಸಿ, ವಿವೇಕಾನಂದ ಮಾರ್ಗ ಎಂದು ಹೆಸರಿಟ್ಟಿದ್ದಾರೆ. ರಸ್ತೆಯನ್ನು ಸೋಮವಾರ ಹಿರಿಯ ಸಾಮಾಜಿಕ ಮುಂದಾಳು ಕೆ.ಕಾಳು ಸೇರಿಗಾರ್ ಭಾನುವಾರ ಉದ್ಘಾಟಿಸಿದರು.

ನಗರಸಭಾ ಸದಸ್ಯ ವಿಜಯ ಕೊಡವೂರು ಮಾತನಾಡಿ ಈ ಸಂಪರ್ಕ ರಸ್ತೆ ಇಲ್ಲಿನ ಇಂದ್ರಾಣಿ ನದಿ ತೀರದ ಜನರಿಗೆ ಬಹಳಷ್ಟು ಉಪಯುಕ್ತವಾಗಲಿದ್ದು,ಇಲ್ಲಿನ ಜನರು ಹಲವಾರು ವರುಷದಿಂದ ಅನುಭವಿಸುತ್ತಿದ ಸಂಕಷ್ಟಕ್ಕೆ ಪೂರ್ಣವಿರಾಮ ಬಿದ್ದಾಂತಾಗಿದೆ ಎಂದರು. ಹಾಗೆಯೇ ರಸ್ತೆಗೆ ಜಾಗ ಬಿಟ್ಟು ಕೊಟ್ಟವರಿಗೆ,ರಸ್ತೆ ನಿರ್ಮಾಣದಲ್ಲಿ ತೊಡಗಿಸಿಕೊಂಡವರಿಗೆ ಕ್ರತಜ್ಞತೆ ಸಲ್ಲಿಸಿದರು.

ಸ್ಥಳೀಯ ಪರಿಸರದ ನಿವಾಸಿಗಳಾದ ಸುರೇಶ್ ಕೊಡವೂರು, ಭಾಸ್ಕರ್ ಕೆ ಸೇರಿಗಾರ್,ಯಾದವ್ ಎಸ್ ಸೇರಿಗಾರ್,ರವಿ ಗಾಣಿಗ,ಹರೀಶ್ ಕೊಡವೂರು,ಕ್ರಷ್ಣ ಪೂಜಾರಿ,ಗಣೇಶ್ ಸೇರಿಗಾರ್,ಶಿವ ದೇವಾಡಿಗ, ಉಮೇಶ್ ಕೊಡವೂರು ಉದಯ ಪೂಜಾರಿ ಉಪಸ್ಥಿತರಿದ್ದರು.ಸತೀಶ್ ಕೊಡವೂರು ಸ್ವಾಗತಿಸಿ ನಿರೂಪಿಸಿದರು.

 
 
 
 
 
 
 
 
 
 
 

Leave a Reply