ವೈದ್ಯಕೀಯ ಪ್ರತಿನಿಧಿ ಸಂಘ ಮತ್ತು ಜಯಂಟ್ಸ್ ಗ್ರೂಪ್ ವತಿಯಿಂದ 19 ನೇ ವರ್ಷದ ವೈದ್ಯರ ದಿನಾಚರಣೆ

ಬ್ರಹ್ಮಾವರ: – ಕರ್ನಾಟಕ ವೈದ್ಯಕೀಯ ಮತ್ತು ಮಾರಾಟ ಪ್ರತಿನಿಧಿಗಳ ಸಂಘ ಉಡುಪಿ ಮತ್ತು ಜಯಂಟ್ಸ್ ಗ್ರೂಪ್ ಆಫ್ ಬ್ರಹ್ಮಾವರ ಇದರ ವತಿಯಿಂದ 19 ನೇ ವಷ೯ದ ವೈದ್ಯರ ದಿನಾಚರಣೆ ಕಾರ್ಯಕ್ರಮ ಆದಿತ್ಯವಾರ ಸಾಸ್ತಾನ ಶಿವ ಕೃಪಾ ಕಲ್ಯಾಣ ಮಂಟಪದಲ್ಲಿ ನಡೆಯಿತು.

ಮುಖ್ಯ ಅತಿಥಿ ರೆಡ್ ಕ್ರಾಸ್ ಸೊಸೈಟಿ ಕುಂದಾಪುರ ಅಧ್ಯಕ್ಷ ಜಯಕರ ಶೆಟ್ಟಿ ಮಾತನಾಡಿ, ವೈದ್ಯರ ಸೇವೆ ಎಲ್ಲರ ಸೇವೆಗಿಂತ ಅತ್ಯಂತ ಶ್ರೇಷ್ಠವಾದದ್ದು, ಕೋವಿಡ್ ಸಂದರ್ಭದಲ್ಲಿ ತನ್ನ ಕುಟುಂಬವನ್ನು ಬದಿಗಿರಿಸಿ ಜನರ ಸೇವೆಗಾಗಿ ಹಗಲಿರುಳು ಶ್ರಮಿಸಿದ್ದಾರೆ ಎಂದ ಅವರು ವೈದ್ಯರ ದಿನಾಚರಣೆ ಅಥ೯ಪೂಣ೯ವಾಗಿದೆ ಎಂದರು.

ಹಿರಿಯ ವೈದ್ಯ ಡಾ. ಕೆ.ಪಿ ಶೆಟ್ಟಿ ಶುಭ ಹಾರೈಸಿದರು.ಈ ವೇಳೆ ಸಾರ್ಥಕ ವೈದ್ಯಕೀಯ ಸೇವೆ ಸಲ್ಲಿಸಿದ ಹಿರಿಯ ವೈದ್ಯ ಡಾ. ಎಂ.ರಾಜಗೋಪಾಲ ಅಡಿಗ ಹಾಗೂ ಬಹುಮುಖ ಪ್ರತಿಭೆಯ ಹಿರಿಯ ವೈದ್ಯ ಡಾ. ಹೇಮಂತ್ ಕುಮಾರ್ ರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ.ಹೇಮಂತ್ ಕುಮಾರ್, ವೈದ್ಯರು ಕೋವಿಡ್ ಸಂದರ್ಭದಲ್ಲಿ ತನ್ನ ಕುಟುಂಬದ ಆರೋಗ್ಯದ ಯೋಚನೆ ಒಂದೆಡೆಯಾದರೆ ಮತ್ತೊಂದೆಡೆ ತನ್ನ ವೃತ್ತಿ ಧರ್ಮ ಈ ಬಗ್ಗೆ ಆಯ್ಕೆಯಲ್ಲಿ ನಾವೆಲ್ಲರೂ ತನ್ನ ವೃತ್ತಿ ಧಮ೯ ಮರೆಯದೆ ಸೇವೆ ಮಾಡುತ್ತಿದ್ದೆವೆ. ವೈದ್ಯರು ರೋಗಿಗಳ ಎದುರು ನಗುತಾ ಮಾತನಾಡಿದರೂ ಆ ನಗುವಿನ ಹಿಂದೆ ನೋವಿದೆ ವೈದ್ಯರ ಮೇಲೆ ನಡೆಯುತ್ತಿರುವ ಹಲ್ಲೆ ಖಂಡನೀಯ ಎಂದರು.

ಜಯಂಟ್ಸ್ ಫೆಡರೇಶನ್ ಮಾಜಿ ಅಧ್ಯಕ್ಷ ಮಧುಸೂಧನ್ ಹೇರೂರು, ಅಧ್ಯಕ್ಷ ಪೂಜಾರಿ ಮೂಡುಕುಕ್ಕುಡೆ, ವೈದ್ಯಕೀಯ ಪ್ರತಿನಿಧಿ ಸಂಘದ ಅಧ್ಯಕ್ಷ ಅಣ್ಣಯ್ಯದಾಸ್, ಕಾರ್ಯದರ್ಶಿ ಪ್ರಸನ್ನ ಕಾರಂತ್, ಔಷಧ ಉದ್ಯಮಿ ವಿಫ್ನೇಶ್ವರ ಅಡಿಗ ಮುಂತಾದವರಿದ್ದರು.ಮಾಧವ ಉಪಾಧ್ಯ ಮತ್ತು ಅನಂತ ಕೃಷ್ಣ ಹೊಳ್ಳ ಪರಿಚಯಿಸಿದರು.ಸತೀಶ್ ಹೆಗ್ಡೆ ಸನ್ಮಾನ ಪತ್ರ ವಾಚಿಸಿದರು.ಮಧುಸೂಧನ್ ಹೇರೂರು ಪ್ರಸ್ತಾವಿಕ ಮಾತನಾಡಿದರು.ಸುಂದರ ಪೂಜಾರಿ ಸ್ವಾಗತಿಸಿದರು.ರಾಘವೇಂದ್ರ ಪ್ರಭು ಕರ್ವಾಲು ನಿರೂಪಿಸಿ, ಪ್ರಸನ್ನ ಕಾರಂತ್ ವಂದಿಸಿದರು.

 
 
 
 
 
 
 
 
 
 
 

Leave a Reply