Janardhan Kodavoor/ Team KaravaliXpress
28.6 C
Udupi
Thursday, August 11, 2022
Sathyanatha Stores Brahmavara

ಕಾಪು ಪುರಸಭೆ~ಅಧ್ಯಕ್ಷ ಅನಿಲ್ ಕುಮಾರ್,ಉಪಾಧ್ಯಕ್ಷೆ ಮಾಲಿನಿ

ಕಾಪು : ಕಾಪು ಪುರಸಭೆ ಎರಡನೇ ಅವಧಿಯ ನೂತನ ಅಧ್ಯಕ್ಷರಾಗಿ ಬಿಜೆಪಿಯ ಅನಿಲ್ ಕುಮಾರ್  ಆಯ್ಕೆಯಾಗಿದ್ದು, ಉಪಾಧ್ಯಕ್ಷೆ ಯಾಗಿ ಕಾಂಗ್ರೆಸ್ ಪಕ್ಷದ ಮಾಲಿನಿ ಆಯ್ಕೆಯಾಗಿದ್ದಾರೆ. ಕಾಪು ಪುರಸಭೆಯಲ್ಲಿ ತಹಶಿಲ್ದಾರ್ ಮುಹಮ್ಮದ್ ಇಸಾಕ್ ಬುಧವಾರ  ಚುನಾವಣಾ ಪ್ರಕ್ರಿಯೆ ನಡೆಸಿದರು.​ 

ಕಾಪು ಪುರಸಭೆಯಲ್ಲಿ ಒಟ್ಟು 23 ಸದಸ್ಯ ಬಲ ಹೊಂದಿದ್ದು, ಕಾಂಗ್ರೆಸ್ 12 ಬಿಜೆಪಿಯ 11 ಮಂದಿ ಸದಸ್ಯರು ಇದ್ದಾರೆ.​ ​ಹಿಂದುಳಿದ ವರ್ಗ ಎ.ಮೀಸಲಾ ಗಿರುವ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಿಂದ ಅನಿಲ್ ಕುಮಾರ್,​ ​ಕಾಂಗ್ರೆಸ್ನಿಂದ ಶಾಬು ಸಾಹೇಬ್ ಹಾಗು ಅಶ್ವಿನಿ ನಾಮ ಪತ್ರ ಸಲ್ಲಿಸಿ ದ್ದರು

ಅಂತಿಮವಾಗಿ ಅಶ್ವಿನಿ ನಾಮ ಪತ್ರ ಹಿಂಪಡೆದಿದ್ದಾರೆ. ಅನಿಲ್ ಕುಮಾರ್ ಹಾಗು ಶಾಬು ಸಾಹೇಬ್ ಕಣದಲ್ಲಿದ್ದು ,ಸಂಸದೆ,ಶಾಸಕರ ಮತದ ಬಲದಿಂದ ಬಿಜೆಪಿ ಪಕ್ಷದ ಅನಿಲ್ ಕುಮಾರ್ 13 ಮತಗಳನ್ನು ಪಡೆದು ಅಧ್ಯಕ್ಷರಾಗಿ ಆಯ್ಕೆಯಾದರೆ,​ ​ಕಾಂಗ್ರೆಸ್ ಪಕ್ಷದ ಶಾಬು11 ಮತ ಪಡೆದರು. ಪರಿಶಿಷ್ಟ ಜಾತಿ ಮಹಿಳೆ ಮೀಸಲಟಗಿರುವ ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಿಂದ ಸೂಕ್ತ ಅಭ್ಯರ್ಥಿ ಇಲ್ಲದ ಕಾರಣ ಕಾಂಗ್ರೆಸ್ ಪಕ್ಷದ ಮಾಲಿನಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!