ಮಂಗಳೂರು : ಕಾಟಿಕಂಬ್ಲ ಟ್ಯಾಂಕ್ ನಿರ್ಮಾಣಕ್ಕೆ ಗುದ್ದಲಿ ಪೂಜೆ

ಮಂಗಳೂರು : ಪ್ರಧಾನಿ ನರೇಂದ್ರ ಮೋದಿಯ ನೇತೃತ್ವದ ಕೇಂದ್ರ ಸರ್ಕಾರದ ಮಹತ್ವ ದ ಯೋಜನೆಗಳಲ್ಲೊಂದಾದ ಜಲ ಜೀವನ ಮಿಷನ್ ಯೋಜನೆಯಡಿಯಲ್ಲಿ ಪ್ರತಿ ಮನೆಗೆ ಕುಡಿಯುವ ನೀರಿಗೆ ನಳ್ಳಿ ನೀರು ಅನುಷ್ಠಾನಗೊಳಿಸುವ ಆಶಯದಿಂದ ಪಡುಪೆರಾರ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾಟಿಕಂಬ್ಲದಲ್ಲಿ 2.92 ಕೋಟಿ ರೂಪಾಯಿ ವೆಚ್ಚದಲ್ಲಿ ಟ್ಯಾಂಕ್ ನಿರ್ಮಾಣಕ್ಕೆ ಮಂಗಳೂರು ನಗರ ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕ ಡಾ.ವೈ ಭರತ್ ಶೆಟ್ಟಿ ಗುದ್ದಲಿ ಪೂಜೆ ನೆರವೇರಿಸಿದರು.

ನಿಕಟ ಪೂರ್ವ ಜಿಲ್ಲಾ ಪಂಚಾಯತ್ ಸದಸ್ಯ ಜನಾರ್ದನ ಗೌಡ ಮುಚ್ಚೂರು, ಪಂಚಾಯತ್ ಅಧ್ಯಕ್ಷೆ ಅಮಿತಾ ಮೋಹನ್ ಶೆಟ್ಟಿ, ಉಪಾಧ್ಯಕ್ಷರು ಸೇಸಮ್ಮ, ಪಂ.ಅ.ಅಧಿಕಾರಿ ಉಗ್ಗಪ್ಪ ಮೂಲ್ಯ, ಪಂಚಾಯತ್ ಚುನಾಯಿತ ಸದಸ್ಯರಾದ ಅರುಣ್ ಕೋಟ್ಯಾನ್, ವಿದ್ಯಾಜೋಗಿ, ಮೋಹಿನಿ, ಸೀತಾರಾಮ, ಜಯಂತ್ ಸಾಲ್ಯಾನ್, ಬಬಿತ, ದೇವಪ್ಪ ಶೆಟ್ಟಿ, ಗಣೇಶ್, ಮೀನಾಕ್ಷಿ, ಯಶವಂತ ಪೂಜಾರಿ, ಸುಜಾತ ಸಫಲಿಗ, ಬಿ.ಎಸ್ ಗಣೇಶ್ ಸಫಲಿಗ ಅಳಿಕೆ, ವಿನೋದ್, ವನಿತಾ, ಭಾ.ಜ.ಪಾ ಎಡಪದವು ಮಹಾಶಕ್ತಿ ಕೇಂದ್ರ ಕಾರ್ಯದರ್ಶಿ ಅನಿಲ್ ಕುಮಾರ್, ಭಾ.ಜ.ಪ ಯುವಮೋರ್ಚಾ ಪ್ರಮು ಅಣೂಜ್, ಭಾ.ಜ.ಪ ಮಂಡಲದ ಸದಸ್ಯ ಕಾಶೀನಾಥ್ ಕಾಮತ್, ಮತ್ತು ಪಡುಪೆರಾರ ಬಾ.ಜ.ಪ. ಶಕ್ತಿ ಕೇಂದ್ರದ ಅಧ್ಯಕ್ಷ ಶೇಖರ್ ಸಪಲಿಗ, ಮೂಡುಪೆರಾರ ಶಕ್ತಿಕೇಂದ್ರ ಅಧ್ಯಕ್ಷ ಗುರುಪ್ರಸಾದ್ ಶೆಟ್ಟಿ, ಹಾಗೂ ಊರಿನ ಗಣ್ಯ ವ್ಯಕ್ತಿಗಳು, ಮತ್ತು ಅಪಾರ ಸಂಖ್ಯೆಯಲ್ಲಿ ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply