ರಾಷ್ಟ್ರ ಪಕ್ಷಿ ನವಿಲಿನ ರಕ್ಷಣೆ

ಮೊನ್ನೆ ಭಾನುವಾರದಂದು ಸುಮಿತ್ ಮಲ್ಪೆಯವರ ಮನೆಯ ಪಕ್ಕದಲ್ಲಿ ರಾಷ್ಟ್ರೀಯ ಪಕ್ಷಿ ನವಿಲೊಂದು ಕಾಲು ಮುರಿದುಕೊಂಡು ನಡೆಯಲಾರದ ಸ್ಥಿತಿಯಲ್ಲಿ ಬಿದ್ದಿತ್ತು. ಪಾಪ ಅಲ್ಲಿ ಆಟವಾಡುತ್ತಿದ್ದ ಯಾರೋ ಹುಡುಗರು ಅದರ ಕಾಲಿನ ಗಾಯಕ್ಕೆ ಬಟ್ಟೆ ಕಟ್ಟಿ ಸ್ವಲ್ಪ ಮಟ್ಟಿಗೆ ಆರೈಕೆ ಮಾಡಿ ಬಿಟ್ಟಿದ್ದರು. ಇದನ್ನು ನೋಡಿದ ಅವರು ನೆರೆಮನೆಯ ಹುಡುಗನಿಂದ ಅದನ್ನು ಹಿಡಿಸಿ ಒಂದು ಗೂಡಿಗೆ ಹಾಕಿದರು. ಆನಂತರ ತಮಾಗೆ ಕೈಗೆ ಸಿಕ್ಕಿದ ನಂಬರ್ “ವನ್ ವನ್ ಟು” (112 ) ಸಂಖ್ಯೆಗೆ ಕರೆ ಮಾಡಿದಾಗ ಅವರು‌‌ ಪಶು ಸಂಗೋಪನೆ ಇಲಾಖೆಯ ಮೊಬೈಲ್ ಸಂಖ್ಯೆ ನೀಡಿದರು. ಅವರು ನೀಡಿದ ಇಲಾಖೆಯ ಮೊಬೈಲ್ ಸಂಖ್ಯೆಗೆ ಕರೆ ಮಾಡಿದಾಗ ಅವರು ಇದು ಪಶು ಸಂಗೋಪನ ಇಲಾಖೆಗೆ ಬರುವಂತ ವಿಚಾರ ಅಲ್ಲ ನೀವು ಸಾಧ್ಯವಾದರೆ ಅರಣ್ಯ ಇಲಾಖೆಗೆ ಕರೆ ಮಾಡಿ ಎಂಬುದಾಗಿ ಮಾಹಿತಿಯನ್ನು ನೀಡಿದರು. ಅದರಂತೆ ಅವರು ಅರಣ್ಯ ಇಲಾಖೆಗೆ ಕರೆ ಮಾಡಿದಾಗ ಅರಣ್ಯ ಇಲಾಖೆಯಿಂದ ಅದರ ಆಫೀಸರ್ ಒಬ್ಬರ ಸಂಖ್ಯೆ ನಮಗೆ ಸಿಕ್ಕಿತು. ಆ ಆಫೀಸರ್ ನಂಬರ್ ಗೆ ಕರೆ ಮಾಡಿದಾಗ ಅವರು ಉಡುಪಿಯ ಹತ್ತಿರದ ಆಫೀಸ್ ನ ಸಿಬ್ಬಂದಿಯ ಸಂಖ್ಯೆಯನ್ನು ನೀಡಿದರು. ಅವರಿಂದ ಪಡೆದ ಸಂಖ್ಯೆಗೆ ಕರೆ ಮಾಡಿದಾಗ ಅಲ್ಲಿಯ ಸಿಬ್ಬಂದಿ, ನಾವು ಈ ದಿನ ಇಲ್ಲಿ ಇಲಾಖೆಯ ವತಿಯಿಂದ ನಡೆಯುತ್ತಿರುವಂತಹ ರಕ್ತದಾನ ಶಿಬಿರದಲ್ಲಿ ಇರುವುದರಿಂದ ಸ್ವಲ್ಪ ತಡವಾಗ ಬಹುದು ಎಂಬುದಾಗಿ ತಿಳಿಸಿದರು.

        ಹೀಗೆ ಒಬ್ಬರಿಂದ ಒಬ್ಬರಿಗೆ ಕರೆ ಮಾಡುವಾಗ ಸುಸ್ತಾಗಿ ಹೋಯಿತು. ತಾವು ಹೇಗಾದರೂ ಮಾಡಿ ಆ ನವಿಲನ್ನು ರಕ್ಷಣೆ ಮಾಡಲೇ ಬೇಕು ಎನ್ನುವ ಯೋಚನೆಯಲ್ಲಿ ಇರುವಾಗ ನೆನಪಿಗೆ ಬಂದದ್ದೇ ಸಮಾಜ ಸೇವಕ ಸದಾ ಒಂದಲ್ಲ ಒಂದು ರೀತಿಯ ಸಮಾಜಮುಖಿಯ ಕಾರ್ಯದಲ್ಲಿ ಹೆಸರುವಾಸಿಯಾದಂತ ಕೊಡವೂರಿನ ನಗರಸಭಾ ಸದಸ್ಯರಾದ ವಿಜಯ ಕೊಡವೂರು ರವರು. 

          ಯಾವುದೇ ಸಂದರ್ಭದಲ್ಲಿ ತಕ್ಷಣಕ್ಕೆ ಸ್ಪಂದಿಸಬಲ್ಲಂತ ಆಪತ್ಬಾಂಧವ ಇವರು. ತಾವು ಕರೆ ಮಾಡಿದಾಗ ಅವರು ಕೊಡವೂರಿನ ಒಂದು ಸಾವಿನ ಮನೆಯಲ್ಲಿ ಇದ್ದರು. ಹೀಗೆ ಮೊದಲು ಕರೆ ಮಾಡಿದ “ವನ್ ವನ್ ಟು” (112) ಒಂದು ಕರೆಯಿಂದ 5 ಇಲಾಖೆಯ ಸಂಪರ್ಕ ಮಾಡಿದರೂ ಕೂಡ ಫಲಿತಾಂಶ ಶೂನ್ಯ ವಾಗಿತ್ತು. ನಾನು ಇವರನ್ನು ಸಂಪರದಕಿಸುವಾಗ ಕೊಡವೂರಿನ ಒಂದು ಸಾವಿನ ಮನೆಯಲ್ಲಿದ್ದರು. ಆದರು ಸಹ ಮಾಡಿದ ಒಂದೇ ಕರೆಗೆ ತಕ್ಷಣ ಸ್ಪಂದಿಸಿ ಅರಣ್ಯ ಇಲಾಖೆ ಸಹಿತವಾಗಿ ಪಶು ವೈದ್ಯರನ್ನು ಸಂಪರ್ಕಿಸಿ ತಾವು ಕೂಡ ತಕ್ಷಣ ನಮ್ಮ ಸ್ಥಳಕ್ಕೆ ಬಂದೇ ಬಿಟ್ಟರು. ಆದರೆ ತಾಂತ್ರಿಕ ಸಮಸ್ಯೆಗಳಿಂದಾಗಿ ಅರಣ್ಯ ಇಲಾಖೆಯ ಸಿಬ್ಬಂದಿ ತಕ್ಷಣಕ್ಕೆ ಬಾರದಿದ್ದರು ಸ್ವಲ್ಪ ಹೊತ್ತಿನ ಬಳಿಕ ಬಂದು ನವಿಲನ್ನು ತೆಗೆದುಕೊಂಡು ಹೋಗಿ ಸೂಕ್ತ ಚಿಕಿತ್ಸೆ ಕೊಡಿಸುವಲ್ಲಿ ಯಶಸ್ವಿಯಾಯಿತು. ಇದೆಲ್ಲಾ ಮುಗಿಯುವ ಹೊತ್ತಿಗೆ ನಮ್ಮ ಅರ್ಧದಿನ ಮುಗಿದೇ ಹೋಗಿತ್ತು. ಆದರೂ ಕೂಡಾ ಆ ನವಿಲಿನ ಜೀವ ಉಳಿಸಿದೆವು ಎನ್ನುವ ಸಾರ್ಥಕ ಭಾವ ನಮ್ಮದಾಗಿತ್ತು.

     ಹೀಗೆ ಸರಕಾರದ ವನ್ ವನ್ ಟು (112 ) ಸಂಖ್ಯೆಯಿಂದ ತಕ್ಷಣಕ್ಕೆ ಸಮಸ್ಯೆ ಬಗೆಹರಿಯದಿದ್ದಾಗ ನಮಗೆ ನಿಜವಾಗಿ ವನ್ ವನ್ ಟು ಆಗಿ ಕಂಡು ಬಂದದ್ದು ಈ ವಿಜಯಣ್ಣ. 

            ಇದೇ ರೀತಿ ಮುಂದಿನ ದಿನಗಳಲ್ಲಿ ಕೂಡ ತಾವು ಸಮಾಜಮುಖಿ ಸೇವೆಯಿಂದಾಗಿ ಮತ್ತಷ್ಟು ಜನರ ಪ್ರೀತಿ ವಿಶ್ವಾಸ ಗಳಿಸುವಂತಾಗಲಿ. ಸ್ವಾರ್ಥಿಗಳೇ ತುಂಬಿರುವ ಇಂದಿನ ಸಮಾಜದಲ್ಲಿ ನಿಮ್ಮಂತಹ ನಿಸ್ವಾರ್ಥ ಸೇವಕರು ಮತ್ತಷ್ಟು ಹುಟ್ಟಿ ಹುಟ್ಟಿಕೊಳ್ಳಲಿ ಎಂಬುದು ನಮ್ಮ ಆಶಯ.

                   ✒️…….ಸುಮಿತ್ ಮಲ್ಪೆ

 
 
 
 
 
 
 
 
 
 
 

Leave a Reply