ಕೊಡವೂರು ಕಲ್ಮತ್ ಮಸೀದಿ, ಬಿಜೆಪಿ ಸರಕಾರದಿಂದಲೇ ಗಜೆಟ್ ನೋಟಿಫೀಕೇಶನ್~ಹುಸೇನ್ ಕೋಡಿಬೆಂಗ್ರೆ

ಉಡುಪಿ, ಜೂ.24: ಕೊಡವೂರು ಗ್ರಾಮದ ಸರ್ವೆ ನಂ 53/6ರಲ್ಲಿ 0.67 ಸೆಂಟ್ಸ್ ಜಾಗ ಕೊಡವೂರು ಕಲ್ಮತ್ ಮಸೀದಿ ಹೆಸರಿಗೆ 2020ರಲ್ಲಿ ಈಗಿನ ಬಿಜೆಪಿ ಸರಕಾರ ಇರುವ ಸಂದರ್ಭ ದಲ್ಲಿಯೇ ಗಜೆಟ್ ನೋಟಿಫಿಕೇಶನ್ ಆಗಿದೆ ಎಂದು ಮಸೀದಿ ಪರ ಕಾನೂನು ಹೋರಾಟ ಮಾಡುತ್ತಿರುವ ಅಸೋಸಿಯೇಶನ್ ಫಾರ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್ ಇದರ ಜಿಲ್ಲಾಧ್ಯಕ್ಷ ಹುಸೇನ್ ಕೋಡಿಬೆಂಗ್ರೆ ತಿಳಿಸಿದ್ದಾರೆ.

ಜಿಲ್ಲಾಡಳಿತ ಮತ್ತು ಕಂದಾಯ ಇಲಾಖೆಯಿಂದ ಎಲ್ಲ ರೀತಿಯ ಕಾನೂನಾತ್ಮಕ ಪ್ರಕ್ರಿಯೆ ಮಾಡಿಯೇ ಗಜೆಟ್ ನೋಟೀಫಿಕೇಶನ್ ಮಾಡಲಾಗಿದೆ. ಇದಕ್ಕೆ ಬೇಕಾದ ಎಲ್ಲ ದಾಖಲೆಗಳು ವಕ್ಫ್ ಇಲಾಖೆ ಹಾಗೂ ಬೋರ್ಡ್ ಮತ್ತು ಕಂದಾಯ ಇಲಾಖೆಯಲ್ಲಿವೆ ಎಂದು ಅವರು ತಿಳಿಸಿದ್ದಾರೆ.

ಇಷ್ಟೆಲ್ಲ ಕಾನೂನೂ ಪಾಲನೆ ಮಾಡಿಯೂ ಮಸೀದಿಗೆ ಸಂಬಂಧಪಡದವರು ಕಾನೂನು ಬಾಹಿರವಾಗಿ ಮನವಿ ಕೊಟ್ಟಿದ್ದಾರೆ. ಈ ಕಾನೂನು ಬಾಹಿರ ನಡೆಗೆ ಉಡುಪಿ ಜಿಲ್ಲಾಧಿಕಾರಿ ಹಾಗೂ ಸ್ಥಳೀಯ ಶಾಸಕರು ಸಾಥ್ ನೀಡಿದ್ದಾರೆ.

ಆ ಮೂಲಕ ಕಂದಾಯ ಸಚಿವ ಆರ್.ಅಶೋಕ್ ಈ ವಕ್ಫ್ ಆಸ್ತಿಯನ್ನು ಸರಕಾರದ ಹೆಸರಿಗೆ ಮಾಡಿಕೊಂಡಿರುವುದು ಖಂಡನೀಯ. ಮುಂದಿನ ದಿನಗಳಲ್ಲಿ ಇದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲಿ ದ್ದೇವೆ. ಇದರಲ್ಲಿ ನಮಗೆ ಖಂಡಿತವಾಗಿಯೂ ನ್ಯಾಯ ಸಿಗುವ ಆಶಯ ಇದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 
 
 
 
 
 
 
 
 
 
 

Leave a Reply