ಹಡಿಲು ಭೂಮಿ ಕೃಷಿ ಅಂದೋಲನ”ದಡಿ ಬೆಳೆದ ಭತ್ತ ಅಕ್ಕಿ ಮಾಡುವ ಬಗ್ಗೆ ಶಾಸಕ ರಘುಪತಿ ಭಟ್ ಚರ್ಚೆ

ಉಡುಪಿ : ಕೇದಾರೋತ್ಥಾನ ಟ್ರಸ್ಟ್ ಮೂಲಕ ಉಡುಪಿ ವಿಧಾನಸಭಾ ಕ್ಷೇತ್ರದಾದ್ಯಂತ ಸುಮಾರು 1500 ಎಕರೆ ಹಡಿಲು ಭೂಮಿಯಲ್ಲಿ ಸಾವಯವ ಕೃಷಿ ಮಾಡಲಾಗಿದೆ. 

ಗದ್ದೆಗಳಲ್ಲಿ ಬೆಳೆದ ಭತ್ತದ ಪೈರು ಕೊಯ್ಲಿನ ನಂತರದ ತಯಾರಿಗಾಗಿ ಅಕ್ಕಿ ಮಾಡುವ ಬಗ್ಗೆ ಧಾನ್ಯಲಕ್ಷ್ಮಿ ರೈಸ್ ಮಿಲ್ ಗೆ ಸೆ.12ರಂದು ಶಾಸಕ ಶ್ರೀ ಕೆ. ರಘುಪತಿ ಭಟ್ ಭೇಟಿ ನೀಡಿ ಮಿಲ್ ಮಾಲಕ ಮಧ್ವಮೂರ್ತಿ ಆಚಾರ್ಯ ಹಾಗೂ ರಾಘವೇಂದ್ರ ಆಚಾರ್ಯ ಅವರೊಂದಿಗೆ ಚರ್ಚಿಸಿದರು.

ಕೇದಾರೋತ್ಥಾನ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಮುರಳಿ ಕಡೆಕಾರ್, ಕೋಶಾಧಿಕಾರಿ ರಾಘವೇಂದ್ರ ಕಿಣಿ ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply