ಶ್ರೀ ನಾರಾಯಣಗುರುಗಳ ತತ್ವದ ಪಾಲನೆಯಲ್ಲಿ ಗುರು ಬೆಳದಿಂಗಳು ಸಂಸ್ಥೆ ನಿಸ್ವಾರ್ಥತೆ ಮೆರೆದಿದೆ : ಮೂಲ್ಕಿ ಸೀಮೆ ಅರಸ ದುಗ್ಗಣ್ಣ ಸಾವಂತ

ಪಡುಪಣಂಬೂರು : ಎಲ್ಲರನ್ನೂ ಸಮಾನರಾಗಿ ಕಂಡು ಶಿಕ್ಷಣ ಹಾಗೂ ಸಂಘಟನೆಯ ಮೂಲಕ ಅಭಿವೃದ್ಧಿ ಕಾಣುವ ಎನ್ನುವ ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವವನ್ನು ಕುದ್ರೋಳಿಯ ಗುರು ಬೆಳದಿಂಗಳು ಸೇವಾ ಸಂಸ್ಥೆ ಮೂಲಕ ಅಕ್ಷರಶಃ ಪಾಲನೆಯಾಗುತ್ತಿದೆ ಎಂದು ಮೂಲ್ಕಿ ಸೀಮೆಯ ಅರಸ ದುಗ್ಗಣ್ಣ ಸಾವಂತರು ಹೇಳಿದರು.

ಬ್ರಹ್ಮಶ್ರೀ ನಾರಾಯಣ ಗುರುವರ್ಯರ 167ನೇ ಜನ್ಮದಿನ ಪ್ರಯುಕ್ತ ಕುದ್ರೋಳಿ ಗುರು ಬೆಳದಿಂಗಳು ಸೇವಾ ಸಂಸ್ಥೆಯಿಂದ ಪಡುಪಣಂಬೂರಿನಲ್ಲಿರುವ ಮೂಲ್ಕಿಯ ಅರಮನೆಯ ಚಂದ್ರನಾಥ ಸ್ವಾಮಿ ಬಸದಿ ವಠಾರದಲ್ಲಿ ಇಂದು ಔಷಧೀಯ ಸಸ್ಯಗಳ ನೆಡುವ ಮೂರನೇ ಕಾರ್ಯಕ್ರಮದಲ್ಲಿ ಗಿಡಗಳನ್ನು ನೆಡುವ ಮೂಲಕ ಚಾಲನೆ ನೀಡಿ ಮಾತನಾಡಿದರು.

ಚರ್ಚ್, ಬಸದಿ, ಮಸೀದಿ, ದೇವಸ್ಥಾನದಲ್ಲಿ ಔಷಧೀಯ ಗಿಡಗಳನ್ನು ನೆಡುವ ಮೂಲಕ ನಾವೆಲ್ಲರೂ ಒಂದೇ ಎನ್ನುವ ಗುರುಗಳ ತತ್ವ ಪರಿಪಾಲನೆಯಾಗುತ್ತಿರುವುದು ಉತ್ತಮ ಬೆಳವಣಿಗೆ ಎಂದರು. ಪಣಂಬೂರು ಎಸಿಪಿ ಮಹೇಶ್ ಕುಮಾರ್ ಮಾತನಾಡಿ, ಧರ್ಮ ಧರ್ಮಗಳ ನಡುವಿನ ಸೌಹಾರ್ದ ಕಾಪಾಡಲು ಗುರುಬೆಳದಿಂಗಳು ಸಂಸ್ಥೆಯ ಇಂತಹ ಕಾರ್ಯಕ್ರಮ ಅರ್ಥಪೂರ್ಣವಾಗಿದೆ ಎಂದು ಶ್ಲಾಘಿಸಿದರು.

 ಗುರು ಬೆಳದಿಂಗಳು ಸಂಸ್ಥೆ ಅಧ್ಯಕ್ಷ ಪದ್ಮರಾಜ್ ಆರ್. ಮಂಗಳೂರು ಮಹಾನಗರ ಪಾಲಿಕೆ ಸದಸ್ಯ ಅನಿಲ್‌ಕುಮಾರ್, ಹಳೆಯಂಗಡಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಚಂದ್ರಶೇಖರ್ ನಾನಿಲ್, ಬಹರೆನ್ ಬಿಲ್ಲವಾಸ್ ಸ್ಥಾಪಕಾಧ್ಯಕ್ಷ ರಾಜ್‌ಕುಮಾರ್, ಉದ್ಯಮಿ ವಿವೇಕ್‌ರಾಜ್ ಪೂಜಾರಿ, ಏಸ್ ಪ್ರಮೋಟರ್ಸ್‌ನ ಗುರುಮೂರ್ತಿ ರಾವ್, ಮೂಲ್ಕಿ ಅರಮನೆಯ ಗೌತಮ್ ಜೈನ್, ಪ್ರಿಯದರ್ಶಿನಿ ಕೋಅಪರೇಟಿವ್ ಸೊಸೈಟಿ ಅಧ್ಯಕ್ಷ ಎಚ್. ವಸಂತ ಬೆರ್ನಾಡ್, ರಾಷ್ಟ್ರೀಯ ಬಿಲ್ಲವ ಮಹಾಮಂಡಲದ ಕೋಶಾಧಿಕಾರಿ ಯೋಗೀಶ್ ಕೋಟ್ಯಾನ್, ಉದ್ಯಮಿ ಮೋಹನ್ ಕೋಟ್ಯಾನ್, ವಕೀಲ ಚಂದ್ರಶೇಖರ ಜಿ, ದಿನೇಶ್ ಸುವರ್ಣ, ಮೂಲ್ಕಿ ಲಯನ್ಸ್ ಕ್ಲಬ್‌ನ ಮಾಜಿ ಅಧ್ಯಕ್ಷ ವೆಂಕಟೇಶ ಹೆಬ್ಬಾರ್, ಯುವವಾಹಿನಿ ಕೇಂದ್ರ ಸಮಿತಿ ಉಪಾಧ್ಯಕ್ಷ ಉದಯ ಅಮೀನ್ ಮಟ್ಟು, ಮೂಲ್ಕಿ ಸುವರ್ಣ ಆರ್ಟ್ಸ್‌ನ ಚಂದ್ರಶೇಖರ ಸುವರ್ಣ, ನಿವೃತ್ತ ಶಿಕ್ಷಕ ಕೃಷ್ಣಮೂರ್ತಿ ಹೆಬ್ಬಾರ್, ಪುಣ್ಯಭೂಮಿ ತುಳುನಾಡ ಸೇವಾ ಫೌಂಡೇಶನ್‌ನ ಸ್ಥಾಪಕಾಧ್ಯಕ್ಷ ಚಂದ್ರಶೇಖರ ಪೂಜಾರಿ, ರಾಜೇಶ್ ಸುವರ್ಣ ಬಂಟ್ವಾಳ ಮೊದಲಾದವರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply