ಗ್ರಾಮ ಸಭೆಯಿಂದ ಗ್ರಾಮಕ್ಕೆ ನ್ಯಾಯ – ವಿಜಯ್ ಕೊಡವೂರು

ಉಡುಪಿ : ಕೊಡುವೂರು ವಾರ್ಡ್ನಲ್ಲಿ 15ನೆಯ ಗ್ರಾಮ ಸಭೆ ವಿಪ್ರ ಶ್ರೀ ಸಭಾಭವನದಲ್ಲಿ ನಡೆಸಲಾಯಿತು.

ನಗರಸಭಾ ಸದಸ್ಯ ವಿಜಯ್ ಕೊಡವೂರು ಮುಂದಾಳತ್ವದಲ್ಲಿ ಹಿರಿಯರನ್ನು ಮುಂದಿಟ್ಟು ಮಾರ್ಗದರ್ಶನದ ಮುಖಾಂತರ ಹದಿನೈದು ಬಾರಿ ಗ್ರಾಮ ಸಭೆ ನಡೆಸಲಾಯಿತು. ನೆರೆ ಬಂದು ಒಂದು ವರ್ಷ ತುಂಬುವ ದಿನದಂದು ನೆರೆಯಿಂದ ಅನುದಾನ ಬಿಡುಗಡೆಯಾಗಿದೆ ಮನೆ ನಿರ್ಮಾಣದ ಕಾಮಗಾರಿ ಮತ್ತು ಸಂಧ್ಯಾ ಸುರಕ್ಷಾ, ವ್ಯದಾಪ್ಯ ವೇತನ ಮತ್ತು ಮನೆಯ ಹಕ್ಕು ಪತ್ರದ ಬಗ್ಗೆ ಮತ್ತು ನಗರಸಭೆಯ ಯೋಜನೆಗಳ ಮಾಹಿತಿಯನ್ನು ಪ್ರಶ್ನೋತ್ತರ ರೂಪದಲ್ಲಿ ನೆರವೇರಿಸಲಾಯಿತು.

ಊರಿನ ನಾಗರಿಕರು ಅತಿ ಹೆಚ್ಚು ಸಂಖ್ಯೆಯಲ್ಲಿ ಬಂದು ತಮ್ಮ ತಮ್ಮ ಸಮಸ್ಯೆಯನ್ನು ತಿಳಿಸುವಂತಹ ಕಾರ್ಯ ನಡೆಯಿತು.

ಈ ಸಂದರ್ಭದಲ್ಲಿ ಗ್ರಾಮ ಲೆಕ್ಕಾಧಿಕಾರಿ ಕಾರ್ತಿಕೇಯ ಭಟ್ ಮತ್ತು ನಗರಸಭೆಯ ಸಂಘಟನಾಧಿಕಾರಿ ನಾರಾಯಣ್ ಮತ್ತು ಗುರುಪ್ರಸಾದ್ ಉಪಸ್ಥಿತರಿದ್ದು ನಾಗರಿಕರಿಗೆ ಮುಕ್ತವಾಗಿ ಮಾತುಕತೆಗೆ ಸಿಗುವ ವ್ಯವಸ್ಥೆ ಒದಗಿತು. 

15 ನೆಯ ಗ್ರಾಮ ಸಭೆಯ ಮುಖಾಂತರ ಕೊಡವೂರು ಶಂಕರನಾರಾಯಣ ದೇವಸ್ಥಾನದ ಮುಂಬಾಗದಲ್ಲಿ ಮತ್ತು ರಿಕ್ಷಾ ನಿಲ್ದಾಣಕ್ಕೆ ಹೂವಿನ ಗಿಡ ನೆಡಬೇಕು ಎಂದು ರಮೇಶ್ ಕೊಪ್ಪಳ್ ತೋಟ ಇವರು 50 ಹೂವಿನ ಚಟ್ಟಿಯನ್ನು ವಿತರಿಸಿದರು. ಕೊಡವೂರು ದೇವಸ್ಥಾನ ಮತ್ತು ರಿಕ್ಷಾ ನಿಲ್ದಾಣಕ್ಕೆ ಹೂವಿನ ಚಟ್ನಿಯನ್ನು ವಿತರಿಸಲಾಯಿತು.

ನಗರ ಸಭಾ ಸದಸ್ಯರು ಮಾತನಾಡಿ ಕೊಡವೂರುನಲ್ಲಿ ಒಟ್ಟು 15 ನೆಯ ಗ್ರಾಮ ಸಭೆ ನಡೆಸಲಾಯಿತು,ಎಲ್ಲಾ ಗ್ರಾಮ ಸಭೆಯಲ್ಲಿ ಒಂದು ವಿಷಯವನ್ನು ಮುಂದೆ ಇಟ್ಟು, ಆ ಸಮಸ್ಯೆಗೆ ಉತ್ತರಿಸುವುದು ನನ್ನ ಜವಾಬ್ದಾರಿ ಆಗಿದೆ. ನಾನು ಈ ಕೆಲಸ ಮಾಡಬೇಕು ಅನ್ನುವ ದೃಷ್ಟಿಯಿಂದ ಪ್ರೀತಿಯಿಂದ ವಿಶ್ವಾಸದಿಂದ ನನ್ನನ್ನು ಪ್ರಥಮ ಪ್ರಜೆಯನ್ನಾಗಿ ಪ್ರಪ್ರಥಮ ಪ್ರಜೆಯನ್ನಾಗಿ ಜನರು ಅತಿ ಹೆಚ್ಚು ಮತದಾನವನ್ನು ಕೊಟ್ಟು ನನ್ನನ್ನು ಆಯ್ಕೆ ಮಾಡಿದ್ದಾರೆ ಇದಕ್ಕೆ ನ್ಯಾಯ ಕೊಡುವ ದೃಷ್ಟಿಯಿಂದ ಸಮಿತಿಯ ಮುಖಾಂತರ ಕೆಲಸವಾಗುತ್ತಿದೆ.

 ಉದ್ಯೋಗ ನೀಡುವ ಸಮಿತಿ, ರಕ್ತ ನಿಧಿ ಸಮಿತಿ, ಕೃಷಿಕರ ಸಮಿತಿ, ಸ್ವಂತ ಉದ್ಯೋಗ ಸಮಿತಿ, ದಿವ್ಯಾಂಗ ರಕ್ಷಣಾ ಸಮಿತಿ, ಮಹಿಳೆಯರ ರಕ್ಷಣೆಗಾಗಿ ಸಮಿತಿ, ಹೀಗೆ 15 ಸಮಿತಿಯನ್ನು ರಚಿಸಿ ಕೊಡವೂರು ವಾರ್ಡ್ ಅನ್ನು ಮಾದರಿ ಮಾಡಬೇಕು ಎನ್ನುವ ದೃಷ್ಟಿಯಿಂದ ಎಲ್ಲಾ 28 ಸಂಘ ಸಂಸ್ಥೆಗಳ ಸಹಕಾರದಿಂದ ಪ್ರತೀ ಭಾನುವಾರ ಸ್ವಚ್ಚತಾ ಸಮಿತಿ ರಚಿಸಿ ಕೊಡವೂರು ವಾರ್ಡ್ ಅನ್ನು ಸ್ವಚ್ಛವಾಗಿ ಇಡುವ ಸಮಿತಿ ಈ ವಾರ್ಡ್ ನಲ್ಲಿ ಇದೆ ಎಂದರು.

ಈ ಮುಖಾಂತರ ಕೊಡವೂರು ವಾರ್ಡ್ ಮಾದರಿ ಗ್ರಾಮ ಆಗ್ಬೇಕು ಅನ್ನೋ ದೃಷ್ಟಿಯಿಂದ ಇದು ನಗರಸಭಾ ಸದಸ್ಯ ಒಬ್ಬನ ಯೋಚನೆ ಕಲ್ಪನೆಯಲ್ಲ ಈ ಊರಿನ ಪ್ರಜ್ಞಾವಂತ ನಾಗರಿಕರ ಮತ್ತು ಜವಾಬ್ದಾರಿಯುತ ಸಂಘ ಸಂಸ್ಥೆಗಳ ಒಂದು ಯೋಚನೆಯಾಗಿದೆ ಅದನ್ನು ಈ ಭಾಗದಲ್ಲಿ ನಿಂತು ಮಾಡುವುದು ನನ್ನ ಕರ್ತವ್ಯ ಎಂದು ಈ ಗ್ರಾಮ ಸಭೆಗೆ ಬಂದಿರುವ ಎಲ್ಲಾ ನಾಗರಿಕರಿಗೆ ಮತ್ತು ಎಲ್ಲಾ ಅಧಿಕಾರಿಗಳಿಗೆ ತಿಳಿಸಿದರು.

ಈ ವೇಳೆ ಕಡಿಮೆ ವೆಚ್ಚದಲ್ಲಿ ಅಫಿದವಿಟ್ ಮಾಡಿಕೊಡುತ್ತಿರುವ ಲಕ್ಷ್ಮೀ ಮತ್ತು ಕೊಡವೂರು ಸೇವಾ ಕೇಂದ್ರದಲ್ಲಿ ದಿನನಿತ್ಯ ಸೇವೆ ಮಾಡುತ್ತಿರುವ ವಾಣಿ ಇವರಿಗೆ ಗೌರವಿಸುವ ಕಾರ್ಯ ನಡೆಯಿತು. ವಿನಯ್ ಗರ್ಡೆ ಎಲ್ಲರನ್ನೂ ಸ್ವಾಗತಿಸಿ ಅಮಿತ್ ಗರ್ಡೆ ಧನ್ಯವಾದ ಸಲ್ಲಿಸಿದರು.

 
 
 
 
 
 
 
 
 
 
 

Leave a Reply