ಹೆಬ್ರಿಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಿಂದ ತುಳುನಾಡ ಸಂಸ್ಕೃತಿಗೆ ಅಪಮಾನ – ವಿಖ್ಯಾತ್‌ ಶೆಟ್ಟಿ

ಉಡುಪಿ: ದೈವಸ್ಥಾನದಲ್ಲಿ ಇರಬೇಕಾದ ಪವಿತ್ರ ಕಡ್ಸಲೆಯನ್ನು ತನ್ನ ಪಕ್ಷದ ನಾಯಕನಿಗೆ ನೀಡು ವುದರ ಮೂಲಕ ತುಳುನಾಡ ಸಂಸ್ಕೃತಿಗೆ ಅವಮಾನ ಮಾಡಿದ್ದಾರೆ ಎಂದು ಉಡುಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ವಿಖ್ಯಾತ್‌ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದೈವಸ್ಥಾನದಲ್ಲಿ ಇರಬೇಕಾದ ಪವಿತ್ರ ಕಡ್ಸಲೆ ಯನ್ನು ತನ್ನ ಪಕ್ಷದ ನಾಯಕನ ಮನವೊಲಿಸಲು ಬಳಸಿರುವುದು ಅಕ್ಷಮ್ಯ ಅಪರಾಧ, ಹಿಂದೂ ಧರ್ಮ ಹಿಂದೂ ಸಂಸ್ಕೃತಿಗೆ ನಿರಂತರವಾಗಿ ಅಪಮಾನ ಮಾಡುವುದು ಕಾಂಗ್ರೆಸ್ಸಿನ ಚಾಳಿ ಯಾಗಿ ಬಿಟ್ಟಿದೆ. 

ಮಂಜುನಾಥ ಪೂಜಾರಿ ಅವರು ಈ ರೀತಿಯ ಮೂರ್ಖತನದ ವರ್ತನೆ ಪ್ರದರ್ಶಿಸುವುದು ಇದೇ ಮೊದಲಲ್ಲ, ಆದರೆ ಈ ಬಾರಿಯ ಅವರ ನಡೆ ಮೂರ್ಖತನದ ಪರಮಾವಧಿ. ಉಡುಗೊರೆ ನೀಡಲು ಬೇಕಾದಷ್ಟು ಆಯ್ಕೆಗಳಿದ್ದರೂ, ಕಡ್ಸಲೆ ಯನ್ನೆ ಆರಿಸಿ ಕೊಂಡು, ಉದ್ದೇಶ ಪೂರ್ವಕವಾಗಿ ತುಳುನಾಡ ಸಂಸ್ಕೃತಿಯನ್ನು ಅಪಮಾನಿಸಿ ದ್ದಾರೆ.

ಮಂಜುನಾಥ್ ಪೂಜಾರಿ ತುಳುನಾಡಿನವ ರಾಗಿದ್ದು, ಅವರಿಗೆ ಕಡ್ಸಲೆಯ ಮಹತ್ವ ತಿಳಿದಿ ಲ್ಲದಿರುವುದು ದುರಾದೃಷ್ಟ.

ದೈವಾರಾಧನೆ ತುಳುನಾಡಿನ ಹೆಮ್ಮೆಯ ಸಂಸ್ಕೃತಿ, ತಮ್ಮ ಈ ನೀಚ ನಡೆ ಇಡೀ ತುಳು ನಾಡಿನ ಜನರ ಧಾರ್ಮಿಕ ನಂಬಿಕೆಗೆ ಧಕ್ಕೆ ತಂದಿದೆ. ತಕ್ಷಣ ಮಂಜುನಾಥ್ ಪೂಜಾರಿ ಅವರು ಬಹಿರಂಗವಾಗಿ ಕ್ಷಮೆಯಾಚಿಸಬೇಕು, ಇಲ್ಲವಾದಲ್ಲಿ ತಮ್ಮ ವಿರುದ್ಧ ತುಳುನಾಡಿನ ಜನತೆ ಸಿಡಿದೆಳಲಿದ್ದಾರೆ ಎಂದು ಹೇಳಿದ್ದಾರೆ.

 
 
 
 
 
 
 
 
 
 
 

Leave a Reply