ಕಾರ್ಮೆಲ್ ಆಂಗ್ಲ ಮಾಧ್ಯಮ ಶಾಲೆ ಕೆಮ್ಮಣ್ಣಿನಲ್ಲಿ ದ್ವಿತೀಯ ಸೋಪಾನ ಪರೀಕ್ಷೆ

ತಾರೀಕು 2.09.2023 ರಂದು ಕಲ್ಯಾಣ ಪುರ ಸ್ಥಳೀಯ ಸಂಸ್ಥೆಯು ಕಾರ್ಮೆಲ್ ಆಂಗ್ಲ ಮಾಧ್ಯಮ ಶಾಲೆ ಕೆಮ್ಮಣ್ಣಿನಲ್ಲಿ ದ್ವಿತೀಯ ಸೋಪಾನವನ್ನು ನಡೆಸಿತು .ಬೆಳಿಗ್ಗೆ 9:00 ಧ್ವಜ ವಂದನೆಯನ್ನು ನಡೆಸಲಾಯಿ. ಉದ್ಘಾಟನಾ ಸಮಾರಂಭದಲ್ಲಿ ಕಾರ್ಮೆಲ್ ಆಂಗ್ಲ ಮಾಧ್ಯಮ ಶಾಲೆಯ ಹೆಡ್ಮಿಸ್ಟರ್ ಸಿಸ್ಟರ್ ಸಿಲಿಯಾನ ಅಧ್ಯಕ್ಷತೆಯನ್ನು ಮತ್ತು ಉದ್ಘಾಟನೆಯನ್ನು ಮಾಡಿದರು, ಅತಿಥಿಯಾಗಿ ಕಾರ್ಮೆಲ್ ಕನ್ನಡ ಮಾಧ್ಯಮ ಶಾಲೆಯ ಹೆಡ್ ಮಿಸ್ಟರ್ ಸಿಸ್ಟರ್ ವಿನ್ನಿ ಡಿಸೋಜ, ಕಾರ್ಮೆಲ್ ಕನ್ನಡ ಮಾಧ್ಯಮ ಶಾಲೆಯ ಗೈಡ್ ಕ್ಯಾಪ್ಟನ್ ಶ್ರೀಮತಿ ಅನುಸೂಯರವರು ಸ್ವಾಗತ ಭಾಷಣವನ್ನು, ದಿಕ್ಸೂಚಿಯ ಭಾಷಣವನ್ನು ಕಲ್ಯಾಣಪುರ ಸ್ಥಳೀಯ ಸಂಸ್ಥೆ ಕಾರ್ಯದರ್ಶಿ ಫ್ಲೋರಿನ್ ಡಿಸಿಲ್ವ ನೆರವೇರಿಸಿದರು, ಕಾರ್ಮೆಲ್ ಅಂಗ್ಲ ಮಾಧ್ಯಮ ಶಾಲೆಯ ಗೈಡ್ ಕ್ಯಾಪ್ಟನ್ ಶ್ರೀಮತಿ ಅಶ್ವಿನಿ ಉಪಾಧ್ಯಾಯ ಧನ್ಯವಾದ ಸಮರ್ಪಣೆ ನಡೆಸಿಕೊಟ್ಟರು .ನಂತರ ಸ್ಕೌಟ್ 5 ತಂಡ ,5 ಗೈಡ್ಸ್ ತಂಡಗಳನ್ನು ಮಾಡಿ ಪ್ರತಿಯೊಂದು ತಂಡಕ್ಕೆ ಹತ್ತು ವಿಷಯದ ಬಗ್ಗೆ ಮೌಖಿಕ ಪರೀಕ್ಷೆಯನ್ನು ನಡೆಸಲಾಯಿತು. ಸುಮಾರು 145 ಸ್ಕೌಟ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಈ ಪರೀಕ್ಷೆಯ, ಗೈಡ್ ಪರೀಕ್ಷಾ ಸಂಯೋಜಕಿ ಶ್ರೀಮತಿ ಅಶ್ವಿನಿ ಉಪಾಧ್ಯಾಯ ಮತ್ತು ಸ್ಕೌಟ್ ಪರೀಕ್ಷಾ ಸಂಯೋಜಕರಾಗಿ ಶ್ರೀ ಪ್ರಕಾಶ್ , ಪರೀಕ್ಷೆಯನ್ನು ನಡೆಸಿ ಕೊಟ್ಟರು. ಅವರೊಂದಿಗೆ ಶ್ರೀಮತಿ ಸಪ್ನಾ ಟೀಚರ್, ಶ್ರೀಮತಿ ಅನುಸೂಯ ಟೀಚರ್ ,ಶ್ರೀಮತಿ ಪುಷ್ಪ ಟೀಚರ್ ,ಶ್ರೀಮತಿ ಸುಜಾತ, ಶ್ರೀಮತಿ ಸತ್ಯಾವತಿ ಟೀಚರ್ ,ಶ್ರೀಮತಿ ಶೀಲಾ ಟೀಚರ್, ಶ್ರೀಮತಿ ಅನಿತಾ ಟೀಚರ್, ಶ್ರೀ ಪ್ರಕಾಶ್ ಸರ್,ಪರೀಕ್ಷೆಯನ್ನು ನಡೆಸಿಕೊಟ್ಟರು .

 
 
 
 
 
 
 
 
 
 
 

Leave a Reply