ರಾಕ್ ಕನ್ನಡ ಸಂಘ, ರಾಸ್ ಅಲ್ ಖೈಮಾ, ಯುಎಇ ಅರ್ಪಿಸುವ ಕರ್ನಾಟಕ ರಾಜ್ಯೋತ್ಸವ -2023

ರಾಸ್ ಅಲ್ ಖೈಮಾ, ಯುನೈಟೆಡ್ ಅರಬ್ ಎಮಿರಟ್ಸ್: ರಾಕ್ ಕನ್ನಡ ಸಂಘ, ರಾಸ್ ಅಲ್ ಖೈಮಾ, ಯು. ಎ. ಇ. ಯು ದಿನಾಂಕ 4.11.2023 ಶನಿವಾರದಂದು 2023ನೆಯ ಸಾಲಿನ ಕರ್ನಾಟಕ ರಾಜ್ಯೋತ್ಸವವನ್ನು ಇಂಡಿಯನ್ ಅಸೋಸಿಯೇಷನ್ ರಾಸ್ ಅಲ್ ಖೈಮಾ,ಯು. ಎ. ಇ. ಇಲ್ಲಿ ಆಚರಿಸಲಾಗುವುದು ಎಂದು ಸಂಘದ ಅಧ್ಯಕ್ಷ ಶ್ರೀ ಸಂತೋಷ್ ಹೆಗ್ಡೆ, ಕಡ್ತಲ ಹಾಗೂ ಕಾರ್ಯದರ್ಶಿ ಶ್ರೀ ಜಾನ್ ಇಮ್ಯಾನುಯೆಲ್ ಇವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಯಕ್ಷಗುರು “ಯಕ್ಷ ಮಯೂರ” ಶ್ರೀ ಶೇಖರ ಡಿ. ಶೆಟ್ಟಿಗಾರ್ ಕಿನ್ನಿಗೋಳಿ ರವರ ಧಕ್ಷ ನಿರ್ದೇಶನದಲ್ಲಿ, ಶ್ರೀ ದಿನೇಶ್ ಶೆಟ್ಟಿ ಕೊಟ್ಟಿಂಜ ರವರ ಧಕ್ಷ ಸಂಚಾಲಕತ್ವದಲ್ಲಿ,
“ಇಂದ್ರಜಿತು ಕಾಳಗ” ಕನ್ನಡ ಪೌರಾಣಿಕ ಯಕ್ಷಗಾನ, ಹಾಗೂ ಸಂಘದ ನಿರ್ದೇಶನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಿವೆ. ಯುಎಇ ಯಲ್ಲಿ ವಾಸಿಸುತ್ತಿರುವ ಎಲ್ಲಾ ಕನ್ನಡಿಗರು ಭಾಗವಹಿಸಿ ಕರ್ನಾಟಕ ರಾಜ್ಯೋತ್ಸವ ಆಚರಣೆಯನ್ನು ಯಶಸ್ವಿ ಗೊಳಿಸಬೇಕೆಂದು ರಾಕ್ ಕನ್ನಡ ಸಂಘದ ವತಿಯಿಂದ ವಿನಂತಿಸಲಾಗಿದೆ.

 
 
 
 
 
 
 
 
 
 
 

Leave a Reply