ರಾಕ್ ಕರ್ನಾಟಕ ಸಂಘ ರಾಸ್ ಅಲ್ ಖೈಮಾ ದಲ್ಲಿ ಮಕ್ಕಳ ಪ್ರತಿಭಾನ್ವೇಷಣೆ ಸ್ಪರ್ಧೆಯಲ್ಲಿ ಮಿಂಚಿದ ಪ್ರತಿಭೆಗಳು

ಅರಬ್ ಸಂಯುಕ್ತ ಸಂಸ್ಥಾನದ ರಾಸ್ ಅಲ್ ಖೈಮಾ ಏಮಿರೇಟ್ಸ್ ನಲ್ಲಿ ಕಳೆದ ಹಲವು ವರ್ಷಗಳಿಂದ ಕಾರ್ಯೋನ್ಮುಖವಾಗಿರುವ ರಾಕ್ ಕರ್ನಾಟಕ ಸಂಘ ರಾಸ್ ಅಲ್ ಖೈಮಾ ದ ಅಶ್ರಯದಲ್ಲಿ 2024 ಜೂನ್ 16ನೇ ತಾರೀಕಿನಂದು ರಾಸ್ ಅಲ್ ಖೈಮಾ ಇಂಡಿಯನ್ ಅಸೊಸಿಯೇಶನ್ ಸಭಾಂಗಣದಲ್ಲಿ ಅನಿವಾಸಿ ಕನ್ನಡಿಗರ ಮಕ್ಕಳಿಗಾಗಿ ಪ್ರತಿಭಾನ್ವೇಷಣೆ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಬೆಳಿಗ್ಗೆ 10 ಗಂಟೆಗೆ ರಾಕ್ ಕರ್ನಾಟಕ ಸಂಘ ರಾಸ್ ಅಲ್ ಖೈಮಾ ದ ಅಧ್ಯಕ್ಷರಾದ ಶ್ರೀ ಸಂತೋಷ್ ಹೆಗ್ಡೆ ಹಾಗೂ ಕಾರ್ಯಕಾರಿ ಸಮಿತಿಯ ಸಮ್ಮುಖದಲ್ಲಿ ಯು.ಎ ಇ. ಮತ್ತು ಭಾರತ ರಾಷ್ಟ್ರ ಗೀತೆ ಹಾಗೂ ಕರ್ನಾಟಕ ನಾಡ ಗೀತೆಯೊಂದಿಗೆ ಮುಖ್ಯ ಅತಿಥಿಗಳ ಸಮುಖದಲ್ಲಿ ಜ್ಯೋತಿ ಬೆಳಗಿಸಿ ಉದ್ಘಾಟಿಸಲಾಯಿತು.

ಅಬುಭಾಬಿ ಕರ್ನಾಟಕ ಸಂಘದ ಅಧ್ಯಕ್ಷರು ಶ್ರೀ ಸರ್ವೊತ್ತಮ ಶೆಟ್ಟಿಯವರು, ತೀರ್ಪುಗಾರರಾದ ಕರ್ನಾಟಕ ಸಂಘ ಶಾರ್ಜಾದ ಪೂರ್ವ ಅಧ್ಯಕ್ಷರು ಶ್ರೀ ಬಿ. ಕೆ. ಗಣೇಶ್ ರೈ, ಶ್ರೀಮತಿ ಸಂಜನಾ. ಸುಕನ್ಯಾ ಶರತ್, ಸೋನಿಯಾ ಲೋಬೊ, ಶ್ರೀಲತಾ ಹಾಗೂ ವಿವಿಧ ಸಂಘ ಸಂಸ್ಥೆಗಳ ಮುಖ್ಯಸ್ಥರು ಶ್ರೀಯುತರುಗಳಾದ ಅಶೋಕ್ ಬೈಲೂರ್, ಸಂತೋಷ ಶೆಟ್ಟಿ ಪೊಳಲಿ ಸಮಾರಂಭದಲ್ಲಿ ಭಾಗಿಯಾಗಿದ್ದರು.

ನಾಲ್ಕು ವಿಭಾಗದಲ್ಲಿ ವಿವಿಧ ವಯೋಮಿತಿಯ ಮಕ್ಕಳು ಭಾಗವಹಿಸಿ ಮಕ್ಕಳಿಗೆ ಚಿತ್ರಿಸಲು ನೀಡಲಾಗಿದ್ದ ವಿಷಯ “ಅಮ್ಮ” ಕರ್ನಾಟಕದ ಪ್ರಸಿದ್ದ ವ್ಯಕ್ತಿಗಳು, ಪರಿಸರ ಸಂರಕ್ಷಣೆ, ಸಹಿಷ್ಣುತೆ ಮತ್ತು ಸಹಬಾಳ್ವೆ ಯ ಬಗ್ಗೆ ಭಾಗವಹಿಸಿದ ಸ್ಪರ್ಧಿಗಳು ಅತ್ಯಂತ ಉತ್ಸಾಹದಿಂದ ಸುಂದರವಾದ ಚಿತ್ರಗಳನ್ನು ಮೂಡಿಸಿದ್ದರು. ತೀರ್ಪುಗಾರರಾಅಗಿ ಕ್ರಿಯಾತ್ಮಕ ಕಲಾ ನಿರ್ದೇಶಕರು ಶ್ರೀ ಬಿ. ಕೆ. ಗಣೇಶ್ ರೈ ಹಾಗೂ ರಾಸ್ ಅಲ್ ಖೈಮಾ ಪ್ರೌಢಶಾಲೆಯ ಚಿತ್ರಕಲಾ ಶಿಕ್ಷಕಿ ಶ್ರೀಮತಿ ಸಂಜನಾ ಭಾಗವಹಿಸಿದ್ದರು.

ಗಾಯನ ಸ್ಪರ್ಧೆಯಲ್ಲಿ ಹಲವು ಮಕ್ಕಳು ಭಾಗವಹಿಸಿದ್ದರು. ಶ್ರೀಮತಿ ಸುಕನ್ಯಾ ಶರತ್ ಮತ್ತು ಡಾ. ರವಿ ಶಂಕರ್ ತಾಳಿತ್ತಾಯ ತೀರ್ಪುಗಾರರಗಿದ್ದರು. ನೃತ್ಯ ಸ್ಪರ್ಧೆಯಲ್ಲಿ ಸ್ಪರ್ಧಿಗಳು ತಮ್ಮ ತಮ್ಮ ಆಕರ್ಷಕ ನೃತ್ಯ ಪ್ರದರ್ಶನಗಳ ಮೂಲಕ ಪ್ರೇಕ್ಷಕರ ಮನ ಸೆಳೆದರು ತೀರ್ಪುಗಾರರಾಗಿ ಶ್ರೀಮತಿ ಸೋನಿಯಾ ಲೋಬೊ ಮತ್ತು ಶ್ರೀಮತಿ ಶ್ರೀಲತಾ ತೀರ್ಪು ನೀಡಿದರು.

ಸಮಾರೋಪ ಸಮಾರಂಭದಲ್ಲಿ ಶ್ರೀ ಸರ್ವೋತಮ ಶೆಟ್ಟಿಯವರು ರಾಕ್ ಕರ್ನಾಟಕ ಸಂಘದ ಕನ್ನಡ ಕಾರ್ಯಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದನೆಗಳನ್ನು ಸಲ್ಲಿಸಿದರು.

ತೀರ್ಪುಗಾರರ ಪರವಾಗಿ ಶ್ರೀ ಬಿ.ಕೆ. ಗಣೇಶ್ ರೈಯವರು ಮಕ್ಕಳ ಪ್ರತಿಭೆಗಳ ಬಗ್ಗೆ ವ್ಯಕ್ತಪಡಿಸಿ ರಾಕ್ ಸಂಘಟನೆಯ ಕಾರ್ಯ ಯೋಜನೆಗಳನ್ನು ಶ್ಲಾಘಿಸಿದರು.

ಗೃಹ ಕನ್ನಡ ಪಾಠ ಶಾಲೆಯ ಮಕ್ಕಳಿಗೆ ಕನ್ನಡ ಪಥ್ಯ ಹಾಗೂ ಪರೈಕರಗಳನ್ನು ವಿತರಿಸಲಾಯಿತು.

ಚಿತ್ರ ರಚನೆ ಮಾಡಿರುವ ಮಕ್ಕಳ ಚಿತ್ರಗಳ ಪ್ರದರ್ಶನ ಮಾಡಲಾಗಿತ್ತು.

ವಿವಿಧ ವಿಭಾಗಳಲ್ಲಿ ಭಾಗವಹಿರುವ ಎಲ್ಲಾ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು.

ಎಲ್ಲಾ ಪ್ರಾಯೋಜಕರುಗಳನ್ನು ಹಾಗೂ ರಾಕ್ ಸಿರೆಮಿಕ್ಸ್ ಸಂಸ್ಥೆಯ ಶ್ರೀ ಎಲ್.ಎಸ್.ಪಾಟಿಲ್ ಮತ್ತು ಕನ್ನಡಿಗರ ತಂಡವನ್ನು ವೇದಿಕೆಯಲ್ಲಿ ಗೌರವಿಸಲಾಯಿತು.

ರಾಕ್ ಕರ್ನಾಟಕ ಸಂಘದ ಅಧ್ಯಕ್ಷರ ಜೊತೆಗೆ ಉಪಾಧ್ಯಕ್ಷರಾದ ಶ್ರೀ ರಮೇಶ್ ರಂಗಪ್ಪ, ಕಾರ್ಯದರ್ಶಿ ಶ್ರೀಮತಿ ಆಶಾ ಹೇಮಾದ್ರಿ, ಗೃಹಪಾಠ ಅಧ್ಯಕ್ಷರು ಡಾ. ಲೇಕಾ, ಸಾಂಸ್ಕೃತಿಕ ಕಾರ್ಯದರ್ಶಿ ಶ್ರೀ ಜಾನ್ ಇಮ್ಯಾನುವಲ್, ಹಾಗೂ ಶ್ರೀಮತಿ ದೀಪಾ ಮತ್ತು ಶ್ರೀಮತಿ ಇಂದೂ ರವರ ಹಲವು ದಿನಗಳ ಪೂರ್ವಭಾವಿ ತಯಾರಿಯೊಂದಿಗೆ ನಡೆದ ಪ್ರತಿಭಾನ್ವೇಷಣೆ ಸ್ಪರ್ಧೆ ಅತ್ಯಂತ ಯಶಸ್ವಿಯಾಯಿತು.

ಕಾರ್ಯಕ್ರಮದ ಯಶಸ್ಸಿಗೆ ಬೆಂಬಲ ಮತ್ತು ಪ್ರೋತ್ಸಾಹ ನೀಡಿರುವ ಎಲ್ಲಾ ಹಿತೈಷಿಗಳಿಗೆ ರಾಕ್ ಕರ್ನಾಟಕ ಸಂಘ ಸದಾ ಚಿರಋಣಿಯಾಗಿದೆ.

ಸಂತೋಷ್ ಹೆಗ್ಡೆ

ಅಧ್ಯಕ್ಷರು

ಮತ್ತು ಕಾರ್ಯಕಾರಿ ಸಮಿತಿ 

ರಾಕ್ ಕರ್ನಾಟಕ ಸಂಘ ರಾಸ್ ಅಲ್ ಖೈಮಾ

 
 
 
 
 
 
 
 

Leave a Reply