ನಿಟ್ಟೂರು ಪ್ರೌಢ ಶಾಲಾ ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಯೋಗೀಶ್ಚಂದ್ರಾಧರ

ಉಡುಪಿ : ರಜತ ಪರ್ವವನ್ನಾಚರಿಸುತ್ತಿರುವ ನಿಟ್ಟೂರು ಪ್ರೌಢ ಶಾಲೆಯ ಹಳೆವಿದ್ಯಾರ್ಥಿ ಸಂಘದ ವಾರ್ಷಿಕ ಮಹಾಸಭೆ ಭಾನುವಾರ ಯೋಗೀಶ್ಚಂದ್ರಾಧರ ಇವರ ಅಧ್ಯಕ್ಷತೆಯಲ್ಲಿ ಜರಗಿತು. ಕಾರ್ಯದರ್ಶಿ ಪ್ರದೀಪ್ ಜೋಗಿಯ ವಾರ್ಷಿಕ ವರದಿ ಮಂಡಿಸಿದರು. ಕೋಶಾಧಿಕಾರಿ ಮುರಲಿ ಕಡೆಕಾರ್ ವಾರ್ಷಿಕ ಲೆಕ್ಕಪತ್ರ ಮಂಡಿಸಿದರು. ಬಳಿಕ ಮುಖ್ಯೋಪಾಧ್ಯಾಯರು ಹಳೆವಿದ್ಯಾರ್ಥಿಗಳು ಶಾಲೆಯ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡ ಪರಿಯನ್ನು ಮುಖ್ಯವಾಗಿ ಹಡಿಲುಗದ್ದೆ ಬೇಸಾಯದಲ್ಲಿ ಕಾರ್ಯನಿರ್ವಹಿಸಿದ ರೀತಿಯನ್ನು ವಿವರಿಸಿದರು.

ಹಳೆವಿದ್ಯಾರ್ಥಿಗಳು ಶಾಲೆಯ ಹೆಮ್ಮೆಯ ಸಂಪತ್ತು ಎಂದು ನುಡಿದರು. ಈ ವರ್ಷದ ಡಿಸೆಂಬರ್ ಒಳಗಾಗಿ ಕನಿಷ್ಟ 50 ಲಕ್ಷ ರೂಪಾಯಿ ನಿಧಿಯನ್ನು ಶಾಲೆಗಾಗಿ ಸ್ಥಾಪಿಸಿ ಸುವರ್ಣ ಪರ್ವವನ್ನು ಅರ್ಥಪೂರ್ಣಗೊಳಿಸಬೇಕಾಗಿ ಯೋಗೀಶ್ಚಂದ್ರಾಧರ ತಿಳಿಸಿದರು. ನಿಟ್ಟೂರು ಎಜುಕೇಶನಲ್ ಸೊಸೈಟಿಯ ಕಾರ್ಯದರ್ಶಿ ಭಾಸ್ಕರ ಡಿ. ಸುವರ್ಣ ಹಳೆವಿದ್ಯಾರ್ಥಿ ಸಂಘವನ್ನು ಅಭಿನಂದಿಸಿದರು. ಆರಂಭದಲ್ಲಿ ಶಾಲಾ ಆಡಳಿತ ಮಂಡಳಿಯ ಸ್ಥಾಪಕ ಸದಸ್ಯ ಪಿ. ರಾಮ್ ಭಟ್, ದೀರ್ಘಕಾಲ ಆಡಳಿತ ಮಂಡಳಿಯಲ್ಲಿ ಸೇವೆಗೈದ ಪಿ.ಎಂ.ಆರ್ ಆಚಾರ್,  ಹಳೆವಿದ್ಯಾರ್ಥಿ ಶಶಿಕಾಂತ ಶಿವತ್ತಾಯ, ಶ್ರೀಶ ಭಟ್ ಇವರ ನಿಧನಕ್ಕೆ ಸಂತಾಪ ಸೂಚಿಸಲಾಯಿತು.

2020-21/ ನೂತನ ಆಡಳಿತ ಮಂಡಳಿ. ಗೌರವಾಧ್ಯಕ್ಷ : ಕೆ. ರಘುಪತಿ ಭಟ್, ಅಧ್ಯಕ್ಷ : ಯೋಗೀಶ್ಚಂದ್ರಾಧರ, ಉಪಾಧ್ಯಕ್ಷ : ಪಿ. ದಿನೇಶ್ ಪೂಜಾರಿ, ಕಾರ್ಯದರ್ಶಿ : ಸಿ.ಎ ಪ್ರದೀಪ್ ಜೋಗಿ, ಜತೆಕಾರ್ಯದರ್ಶಿ : ಹರೀಶ್ ಆಚಾರ್ಯ, ಶಶಿಪ್ರಭಾ ಕಾರಂತ್, ಕೋಶಾಧಿಕಾರಿ : ಮುರಲಿ ಕಡೆಕಾರ್, ಅನಸೂಯ, ಅಧ್ಯಾಪಕ ಸಲಹೆಗಾರ : ಎಚ್.ಎನ್ ಶೃಂಗೇಶ್ವರ, ಸದಸ್ಯರು : ದಿನೇಶ್ ಶೆಟ್ಟಿ, ರಂಜನ್ ಶೆಟ್ಟಿ, ಸಂದೀಪ್ ಎಸ್.ಕೆ, ಕೃಷ್ಣಮೂರ್ತಿ ಭಟ್, ಡಾ. ಪ್ರತಿಮಾ ಜಯಪ್ರಕಾಶ್, ಅಂಬಾ ಪಾಲನ್, ಸದಾನಂದ ನಾಯಕ್, ಸಂತೋಷ್ ಕರ್ನೇಲಿಯೋ, ಲೋಕೇಶ್ ಪಾಲನ್, ಜಯಕರ ಸುವರ್ಣ, ಪ್ರಭಾತ್ ಹೆಗ್ಡೆ, ಸುಧಾಕರ, ವಿನಯ್ ಕುಮಾರ್, ಮಂಜುನಾಥ, ರಾಘವೇಂದ್ರ ಪ್ರಭು, ದಿವ್ಯ ಭಟ್

Leave a Reply