ಬಂಟಕಲ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಯುನಿಕೋರ್ಟ್ ದಿನ 2023

ಶ್ರೀ ಮಧ್ಯ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದಲ್ಲಿ ದಿನಾಂಕ 21 ಮಾರ್ಚ್ 2023 ರಂದು ಯುನಿಕೋರ್ಟ್ ದಿನವನ್ನು ಪೂಜ್ಯ ಶ್ರೀಪಾದರಾದ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಆಯೋಜಿಸಲಾಗಿತ್ತು. ಮಂಗಳೂರಿನ ಇನ್ಫೋಟೆಕ್ ಸೊಲ್ಯೂಷನ್‌ನ (ಯುನಿಕೋರ್ಟ್ ಇಂಡಿಯಾ) ಸಹ ಸಂಸ್ಥಾಪಕರಾದ ಶ್ರೀ ಪ್ರಶಾಂತ್ ಶೆಣೈ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಶ್ರೀ ಪ್ರಶಾಂತ್ ಶೆಣೈ ಇವರು ಮಾತನಾಡಿ ನಾವು ಈಗ ಐಟಿ ಸವಾಲಿನ ಯುಗದಲ್ಲಿದ್ದೇವೆ ಎಂದು ತಿಳಿಸಿದರು. ಆಧುನಿಕ ಸವಾಲುಗಳನ್ನು ಎದುರಿಸಲು ನಮ್ಮನ್ನು ನಾವು ಸಜ್ಜುಗೊಳಿಸಬೇಕು. ಈ ಕಾರ್ಯಕ್ರಮದ ಮುಖ್ಯ ಉದ್ದೇಶ ವಿದ್ಯಾರ್ಥಿಗಳಿಗೆ ತಂತ್ರಜ್ಞಾನದ ಬಗ್ಗೆ ಜಾಗೃತಿ ಮೂಡಿಸುವುದಾಗಿದೆ. ಯುನಿಕೋರ್ಟ್ ಇಂಡಿಯಾ ಸಂಸ್ಥೆಯ ಈ ಕಾರ್ಯಕ್ರಮವನ್ನು ವಿದ್ಯಾರ್ಥಿಗಳಿಗಾಗಿ ಆಯೋಜಿಸಲು ಅವಕಾಶ ಕಲ್ಪಿಸಿದಕ್ಕಾಗಿ ಧನ್ಯವಾದ ತಿಳಿಸಿದರು. ಎಂದು ತಿಳಿಸಿದರು.

ಶ್ರೀ ಸೋದೆ ಮಠದ ಶ್ರೀಪಾದರು ಮಾತನಾಡಿ ಇಂದಿನ ಸಮಾಜದ ಸ್ಮಾರ್ಟ್‌ಸ್ ಕುರಿತು ಮಾತನಾಡಿದರು. ಮತ್ತು ಕಂಪ್ಯೂಟರ್ ಜಗತ್ತಿನಲ್ಲಿ “ಬಗ್ಸ್” ಎಂಬ ಪದವು ಹೇಗೆ ಬಂದಿತು ಎಂಬುದರ ಬಗ್ಗೆ ತಿಳಿಸಿದರು. ವಿದ್ಯಾರ್ಥಿಗಳು ಕಾಲೇಜು ನೀಡಿರುವ ಇಂತಹ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ನಾಳಿನ ಬಲಿಷ್ಠ ಸಾಧಕರಾಗಿ ಬೆಳೆಯಬೇಕು ಎಂದು ತಿಳಿಸಿದರು. ಕಾಲೇಜಿನಲ್ಲಿ ಇಂತಹ ಅರ್ಥಪೂರ್ಣ ಕಾರ್ಯಕ್ರಮವನ್ನು ಆಯೋಜಿಸಿದ್ದಕ್ಕಾಗಿ ಯುನಿಕೋರ್ಟ್ ತಂಡಕ್ಕೆ
ಧನ್ಯವಾದ ತಿಳಿಸಿದರು.

ಈ ಸಂದರ್ಭದಲ್ಲಿ ಪರಮಪೂಜ್ಯ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಯುನಿಕೋರ್ಟ್ ಸಂಸ್ಥೆಯೊಂದಿಗೆ ಕಾಲೇಜಿನ ಪ್ರಾಂಶುಪಾಲರಾದ ಡಾ. ತಿರುಮಲೇಶ್ವರ ಭಟ್ ಒಡಂಬಡಿಕೆ ಸಹಿ ಹಾಕಲಾಯಿತು.

 
 
 
 
 
 
 
 
 
 
 

Leave a Reply