ಮಳೆಯಿಂದ ತತ್ತರಿಸಿದ ಉಡುಪಿ ಜನರಿಗೆ ಮೊದಲನೇ ಕಂತಿನಲ್ಲಿ 40 ಕೋಟಿ ರೂ ಪರಿಹಾರ

ಉಡುಪಿ: ಧಾರಾಕಾರ ಮಳೆಗೆ ತತ್ತರಿಸಿದ ಉಡುಪಿ ಜಿಲ್ಲೆಗೆ ಪ್ರಕೃತಿ ವಿಕೋಪದಡಿ ಪರಿಹಾರ ನೀಡಲು ಯಡಿಯೂರಪ್ಪ ಸೂಚಸಿದ್ದು, ಮೊದಲ ಕಂತಿನಲ್ಲಿ 40 ಕೋಟಿ ರೂಪಾಯಿ ಬಿಡುಗಡೆ ಮಾಡಲು ಶನಿವಾರ ಹೇಳಿದ್ದಾರೆ. ಹಿಂದಿನವಾರ ಉಡುಪಿ ಜಿಲ್ಲೆಯಲ್ಲಿ ವರುಣ ಆರ್ಭಟಕ್ಕೆ ನೂರಾರು ಮನೆಗಳು, ಆಸ್ತಿಪಾಸ್ತಿಗಳು ಹಾನಿಯಾಗಿತ್ತು. ಹಾಗಾಗಿ ಸಂತ್ರಸ್ತರಿಗೆ ಕೂಡಲೇ ಪರಿಹಾರ ನೀಡಲು ಮೊದಲ ಹಂತದಲ್ಲಿ 40 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲು ಜಿಲ್ಲಾಡಳಿತ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿತ್ತು.

ಉಡುಪಿ ಶಾಸಕ ಕೆ. ರಘುಪತಿ ಭಟ್ ಅವರು ಉಡುಪಿಯಲ್ಲಿ ಮಳೆಯಿಂದ ಸಂಭವಿಸಿದ ಅಪಾರ ಪ್ರಮಾಣದ ಆಸ್ತಿಪಾಸ್ತಿ ನಷ್ಟದ ಕುರಿತು ಶುಕ್ರವಾರ ಬೆಂಗಳೂರಿನಲ್ಲಿ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಹೇಳಿದ್ದರು. ಹಾಗೆ ಶೀಘ್ರ ಪರಿಹಾರಕ್ಕಾಗಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡುವಂತೆ ಸಿಎಂ ಅವರಲ್ಲಿ ಆಗ್ರಹಿಸಿದ್ದರು.

ಇಷ್ಟೇ ಅಲ್ಲದೆ ಶನಿವಾರ ಉಡುಪಿ ಜಿಲ್ಲೆಯ ಐವರು ಶಾಸಕರಾದ ಹಾಲಾಡಿ ಶ್ರೀನಿವಾಸ ಶೆಟ್ಟಿ, ಲಾಲಾಜಿ ಆರ್. ಮೆಂಡನ್, ವಿ. ಸುನೀಲ್ ಕುಮಾರ್, ಬಿ.ಎಂ. ಸುಕುಮಾರ್ ಶೆಟ್ಟಿ ಹಾಗೂ ಕೆ. ರಘುಪತಿ ಭಟ್ ಅವರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿಮಾಡಿ ಉಡುಪಿ ಜಿಲ್ಲೆಗೆ ವಿಶೇಷ ಪ್ಯಾಕೇಜ್ ಬಿಡುಗಡೆಗೊಳಿಸುವಂತೆ ಮನವಿ ಮಾಡಿದರು.ಸದ್ಯ ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಪ್ರಾಕೃತಿಕ ವಿಕೋಪದಡಿ ಮೊದಲನೇ ಕಂತನ್ನು ಘೋಷಿಸಿದೆ.

 
 
 
 
 
 
 
 
 
 
 

Leave a Reply