ಅಜೆಕಾರು ಮಾರಿಗುಡಿಯಲ್ಲಿ ಸ್ವರ ಸೋಣಾರತಿ : ಮಕ್ಕಳ ಭಕ್ತಿ ಸಂಗೀತ ಕಾರ್ಯಕ್ರಮ

ಅಜೆಕಾರು: ಅಜೆಕಾರು ಬಂಡಸಾಲೆ  ಶ್ರೀ ಮಾರಿಗುಡಿಯಲ್ಲಿ ಪ್ರತಿಭಾನ್ವಿತ ಮಕ್ಕಳ ಭಕ್ತಿ ಸಂಗೀತ ಪ್ರಸ್ತುತಿ ಸ್ವರ ಸೋಣಾರತಿ ಆಡಳಿತ ಮೊಕ್ತೇಸರ ಶಿವಕುಮಾರ್ ಕುರ್ಪಾಡಿ ಮತ್ತು ಅರ್ಚಕ ರವಿ ಸಹಕಾರದೊಂದಿಗೆ ಸಂಕ್ರಾಂತಿಯಂದು ನಡೆಯಿತು.

ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿ ಮತ್ತು ಆದಿಗ್ರಾಮೋತ್ಸವ ಸಮಿತಿ ಸಂಯುಕ್ತವಾಗಿ ಬಾಲ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಒಂದೂವರೆ ಗಂಟೆಗಳ ಕಾರ್ಯಕ್ರಮ ಆಯೋಜಿಸಿತ್ತು.

ಸಮಿತಿಯ ರಾಜ್ಯಾಧ್ಯಕ್ಷ ಡಾ.ಶೇಖರ ಅಜೆಕಾರು ಮಾತನಾಡಿ ದೇವಿಯ ಸನ್ನಿಧಿಯಲ್ಲಿ ಮಕ್ಕಳ ಸಂಗೀತ ಸೇವೆಯನ್ನು ಸಮರ್ಪಿಸಿ ಅವರ ಬೆಳವಣಿಗೆಗೆ ಶುಭ ಹಾರೈಸುವುದು ಈ ಕಾರ್ಯಕ್ರಮದ ಉದ್ದೇಶ ಎಂದರು.

3 ವರ್ಷದ ಬಾಲ ಪ್ರತಿಭೆ ಸಾನ್ನಿಧ್ಯ ಕವತ್ತಾರು, ಹಿತೇಶ್ ಕಾಮತ್, ವೃದ್ಧಿ ವಿ.ಎನ್, ಸುನಿಧಿ ಅಜೆಕಾರು, ಸುನಿಜ ಅಜೆಕಾರು ಹಾಡುಗಳನ್ನು ಹಾಡಿದರು.

ಮರ್ಣೆ ಗ್ರಾಮ ಪಂಚಾಯತ್‌ನ ಮಾಜಿ ಅಧ್ಯಕ್ಷೆ ಯಶೋದಾ ಶೆಟ್ಟಿ, ಮಹಮ್ಮಾಯಿ ಭಜನಾ ಮಂಡಳಿಯ ಅಧ್ಯಕ್ಷೆ ವಿಮಲಾ ನಾಯ್ಕ್, ಸದಸ್ಯೆ ಕುಶಲ , ಯುವ ಕಾಷ್ಟ ಶಿಲ್ಪಿ ಉಮಾದರ ವಿಶ್ವಕರ್ಮ, ಶಂಕರ ಆಚಾರ್ಯ ಕುರ್ಪಾಡಿ, ಮಾರಿಗುಡಿಯ  ರವಿ ಮತ್ತು ಸಂಜೀವ, ಸಮಿತಿಯ ಮಕ್ಕಳ ವಿಭಾಗದ ಸಹರ್ಷ ಜೈನ್, ಆಶಿಕಾ, ಆಶಿತಾ, ಶ್ರಾವ್ಯ, ಅದಿತಿ,  ಸುಶೀಲಾ ಸುಂದರ್ ನಾಯ್ಕ್,  ಜ್ಯೋತಿ ಕವತ್ತಾರು ಮತ್ತಿತರರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply