ಜೀವನ ಮೌಲ್ಯ ಕಲಿಸುವ ಶಿಕ್ಷಕರು ಸರ್ವತ್ರ ಗೌರವಕ್ಕೆ ಪಾತ್ರರು – ಉಪನ್ಯಾಸಕಿ ಅರ್ಪಿತಾ ಶೆಟ್ಟಿ

ಕೊಡವೂರು :  ಶಿಕ್ಷಕರು ಪುಸ್ತಕದ ಪಾಠದೊಂದಿಗೆ ಜೀವನ ಮೌಲ್ಯವನ್ನು ಭೋದಿಸಿದಾಗ ಸರ್ವತ್ರ ಗೌರವಕ್ಕೆ ಪಾತ್ರರಾಗುತ್ತಾರೆ.ಜೀವನ ಮೌಲ್ಯವನ್ನು ಮೈಗೂಡಿಸಿಕೊಂಡ ವಿದ್ಯಾರ್ಥಿಗಳು ಸಧ್ರಡ ಹಾಗು ಸುಶಿಕ್ಷಿತ ಸಮಾಜವನ್ನು ನಿರ್ಮಾಣ ಮಾಡಬಲ್ಲರು.

ಈ  ದಾರಿಯಲ್ಲಿ ಸಾಗಿದ ನಿವೃತ್ತ ಶಿಕ್ಷಕಿ ಮಲ್ಲಿಕಾ ದೇವಿಯವರ ಅನುಪಮ ಸೇವೆಯನ್ನು  ಗೌರವಿಸಿ  ಸಮಾಜಕ್ಕೆ ಮಾದರಿಯಾಗಬಲ್ಲ ರೀತೀಯಲ್ಲಿ ಅಭಿನಂದಿಸುತ್ತಿರುವುದು ಶ್ಲಾಘನೀಯ ಎಂದು ಉಡುಪಿ ಗ್ರೂಪ್ ಆಫ್ ಇನ್ಸ್ಟಿಟ್ಯೂಶನ್ ನ ಉಪನ್ಯಾಸಕಿ ಅರ್ಪಿತಾ ಶೆಟ್ಟಿ ಹೇಳಿದರು.

ಕೊಡವೂರಿನ ಮಲ್ಲಿಕಾ ಟೀಚರ್ ಅಭಿನಂದನಾ ಸಮಿತಿಯ ಆಶ್ರಯದಲ್ಲಿ ಕೊಡವೂರು ಶಾಲೆಯಲ್ಲಿ ಶಿಕ್ಷಕಿಯಾಗಿ 36 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಮಲ್ಲಿಕಾ ಟೀಚರ್ ರನ್ನು ಅಭಿನಂದಿಸುವ ಹಾಗೂ ಆ ಪ್ರಯುಕ್ತ ಹಮ್ಮಿಕೊಂಡ ವಿವಿಧ ಜನೋಪಯುಕ್ತ ಯೋಜನೆಗಳನ್ನು ಲೋಕಾರ್ಪಣೆಗೊಳಿಸುವ ಪ್ರತಿಫಲನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ದ.ಕ.ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ರವಿರಾಜ ಹೆಗ್ಡೆ, ನಗರಸಭಾ ಸದಸ್ಯ ವಿಜಯ ಕೊಡವೂರು, ಶ್ರೀಶ ಭಟ್ ಮೂಡಬೆಟ್ಟು, ಕೊಡವೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ನಾರಾಯಣ ಬಲ್ಲಾಳ್, ಮತ್ಸ್ಯೋದ್ಯಮಿಗಳಾದ ಸಾಧು ಸಾಲ್ಯಾನ್,ಆನಂದ.ಪಿ.ಸುವರ್ಣ, ನಾಗರಾಜ ಸುವರ್ಣ,ಪರಿಸರ ಪ್ರೇಮಿ ಶಶಿಧರ್ ಪುರೋಹಿತ್, ಸಾಮಾಜಿಕ ಮುಂದಾಳು ಪ್ರಕಾಶ್. ಜಿ.ಕೊಡವೂರು, ಅಭಿನಂದನಾ ಸಮಿತಿಯ ಸಂಚಾಲಕರಾದ ಮಹಮ್ಮದ್ ಶರೀಫ್,ಅರುಣ್ ಕುಮಾರ್,ಬಾಲಕ್ರಷ್ಣಕೊಡವೂರು ಉಪಸ್ಥಿತರಿದ್ದರು.

ನಿವೃತ್ತ ಶಿಕ್ಷಕಿಯ ಸಾರ್ಥಕ ಸೇವೆ ಪ್ರತಿಫಲನಗೊಳ್ಳುತ್ತಿರಬೇಕೆಂಬ ಉದ್ದೇಶದಿಂದ ಹಮ್ಮಿಕೊಂಡ 2 ಲಕ್ಷ ರೂಪಾಯಿ ವೆಚ್ಚದ ಶಾಶ್ವತ ಕುಡಿಯುವ ನೀರಿನ ಯೋಜನೆಯ ಲೋಕಾರ್ಪಣೆ, ಆರ್ಥಿಕ ಅಶಕ್ತ ವಿದ್ಯಾರ್ಥಿಗಳ ದತ್ತು ಸ್ವೀಕಾರ,ಸಸಿ ವಿತರಣೆ,ಬಾಲಕ್ರಷ್ಣ ಕೊಡವೂರು ಸಂಪಾದಕತ್ವದ ಅಭಿನಂದನಾ ಗ್ರಂಥದ ಬಿಡುಗಡೆ ಮತ್ತು ಊರಿನ ವಿವಿಧ ಸಂಘ ಸಂಸ್ಥೆಯವರಿಂದ ನೆಚ್ಚಿನ ಶಿಕ್ಷಕಿಗೆ  ಅಭಿನಂದನೆ ಸಲ್ಲಿಕೆ ನಡೆಯಿತು.
ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲ, ಪ್ರಾಧ್ಯಾಪಕರು,ಶಿಕ್ಷಕರು ಮತ್ತು ಅಂಗನವಾಡಿ ಕಾರ್ಯಕರ್ತೆಯರನ್ನು ಗೌರವಿಸಲಾಯಿತು. ಸತೀಶ್ ಕೊಡವೂರು ಸ್ವಾಗತಿಸಿ, ಪ್ರವೀಣ್.ಜಿ.ಕೊಡವೂರು ವಂದಿಸಿದರು. ಶಿಕ್ಷಕಿ ರಾಧಿಕಾ ದಿವಾಕರ್ ಹಾಗೂ ಅಕ್ಷತ ನಿರೂಪಿಸಿದರು

 
 
 
 
 
 
 
 
 
 
 

Leave a Reply