ಸ್ಪರ್ಧೆಗಳ ಮೂಲಕ ವ್ಯಕ್ತಿತ್ವ ವಿಕಸನ ವೃದ್ಧಿ-ಡಾ| ಹೆರಾಲ್ಡ್ ಐವನ್ ಮೋನಿಸ್

ಶಿರ್ವ: ಪ್ರತಿಯೊಂದು ಕ್ಷೇತ್ರದಲ್ಲಿ ಕಂಪ್ಯೂಟರ್ ಬಳಕೆಯ ಎಚ್ಚೆತ್ತಿರುವ ಕಾರಣ ಕಂಪ್ಯೂಟರ್ ಕಲಿಕೆಯ ಅವಶ್ಯಕತೆ ಇಂದು ಅಗತ್ಯವಾಗಿದೆ ಜೊತೆಗೆ ಶೈಕ್ಷಣಿಕ ಪ್ರಗತಿಯನ್ನು ವಿದ್ಯಾರ್ಥಿಗಳು ಸಾಧಿಸಿ, ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಬೇಕು.

ಇತ್ತೀಚೆಗೆ ಬದಲಾದ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಉದ್ದೇಶಿಸಿ,ತಂತ್ರಜ್ಞಾನ ಯುಗದಲ್ಲಿ ವಿದ್ಯಾರ್ಥಿಗಳು ತಮ್ಮಲ್ಲಿರುವ ಕೌಶಲ್ಯಗಳನ್ನು ವೃದ್ಧಿಸಿಕೊಳ್ಳಲು ಕಂಪ್ಯೂಟರ್ಗಳನ್ನು ಹೆಚ್ಚಾಗಿ ಬಳಸಿಕೊಂಡು ಸಮಾಜಕ್ಕೆ ಬೇಕಾಗುವ ತಂತ್ರಜ್ಞಾನವನ್ನು ರೂಪಿಸಿ,ಸಂಶೋಧನಾ ಮನಸ್ಥಿತಿ ಬೆಳೆಸಿಕೊಂಡು ಉತ್ತಮ ಉದ್ಯೋಗ ಪಡೆಯಬೇಕೆಂದು ಶಿರ್ವ ಸಂತ ಮೇರಿ ಮಹಾವಿದ್ಯಾಲಯದ ಗಣಕ ವಿಜ್ಞಾನ ವಿಭಾಗ ಮತ್ತು ಐಟಿ  ಕ್ಲಬ್  ಸಂಯುಕ್ತವಾಗಿ   ಏರ್ಪಡಿಸಿದ್ದ   ಐಟಿ ಸ್ಪರ್ಧೆಗಳು-ಬಹುಮಾನ ವಿತರಣೆ ಸಮಾರಂಭದಲ್ಲಿ   ಕಾಲೇಜಿನ ಪ್ರಾಂಶುಪಾಲ ಡಾ| ಹೆರಾಲ್ಡ್ ಐವನ್ ಮೋನಿಸ್ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದರು.

ಪ್ರತಿಯೊಬ್ಬ ವಿದ್ಯಾರ್ಥಿ ಸ್ಪರ್ಧೆಗಳಲ್ಲಿ ಭಾಗವಹಿಸುವ ಮೂಲಕ  ತಮ್ಮಲ್ಲಿ ಅಡಗಿರುವ ಕೌಶಲ, ಸೃಜನಶೀಲತೆ, ಕ್ರಿಯಾಶೀಲತೆ, ತಮ್ಮ ವ್ಯಕ್ತಿತ್ವ ವಿಕಸನವನ್ನು ವೃದ್ಧಿಸಿಕೊಳ್ಳುವುದು ಮಾತ್ರವಲ್ಲದೆ  ಸ್ಪರ್ಧಾ ಜಗತ್ತಿನ ಸವಾಲುಗಳನ್ನು ಸುಲಭವಾಗಿ ನಿಭಾಯಿಸಲು ಹಾಗೂ ಉತ್ತಮ ಪ್ರಜೆಯಾಗಲು ಪ್ರತಿಯೊಂದು ಸ್ಪರ್ಧೆಯು ಸಹಾಯಕಾರಿ ಎಂದು ಕಾಲೇಜಿನ ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥ ಹಾಗೂ ಐಟಿ ಕ್ಲಬ್ ಡೈರೆಕ್ಟರ ಲೆಫ್ಟಿನೆಂಟ್ ಕೆ ಪ್ರವೀಣ್ ಕುಮಾರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.

ಇದೇ ಸಂದರ್ಭದಲ್ಲಿ ಕಾಲೇಜಿನ ಗಣಕ ವಿಜ್ಞಾನ ವಿಭಾಗದ ಐಟಿಕ್ಲಬ್ ವತಿಯಿಂದ  ಬಿಸಿಎ   ವಿದ್ಯಾರ್ಥಿಗಳಿಗೆ ಸೆಪ್ಟೆಂಬರ್ 14ರಿಂದ 18 ರವರೆಗೆ ವಿವಿಧ ಐಟಿ ಕಾಂಪಿಟೇಶನ್ಗಳನ್ನು ಆಯೋಜಿಸಲಾಯಿತು.

ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತ ವಿದ್ಯಾರ್ಥಿಗಳಾದ ಪ್ರಿಯಾಂಕಾ,ಸುರೇಖಾ, ಲಿಖಿತಾ ಶೆಟ್ಟಿ,  ಕ್ರಿಪಾ, ಶ್ರುತಿ, ಪ್ರಜ್ವಲ್, ಸನತ್ ಕುಮಾರ್ ಶೆಟ್ಟಿ, ಪ್ರೀತಿಕಾ, ದೀಕ್ಷಾ, ಸಾತ್ವಿಕ್ ,  ತರುಣ್ ರಮೇಶ್ ಶೆಟ್ಟಿ, ದೀಕ್ಷಿತ್, ಅಪೇಕ್ಷ, ಚಾಯ ಕರ್ಕೆರ,  ಹಾರ್ದಿಕ ಸಾಲಿಯಾನ್, ಡೆನ್ಸನ್ ಬ್ರೈನ್   ನಜರೆತ್, ರಿಯಾನ್ ರಿಷಿ ಅಲ್ಫೋನ್ಸೋ, ನಿವೇದಿತಾ ನಿಖಿಲ್ ಪೂಜಾರಿ,  ಬಂಗೇರ ತುಷಾರ್ ರಾಜೇಶ್,  ಸುಕೇಶ್ ಪೂಜಾರಿ, ಡೊನಾಲ್ಡ್ ಅಶ್ವಿನ್ ಡಿಸೋಜ, ಶೆಟ್ಟಿ ಸಾಯಿರಾಮ್ ಜಯರಾಮ್ ಇವರಿಗೆ ಪ್ರಮಾಣ ಪತ್ರದ ಜೊತೆಗೆ ಬಹುಮಾನಗಳನ್ನು ನೀಡಲಾಯಿತು.

ವಿವಿಧ ಕ್ಯಾಂಪಸ್ ಪ್ಲೇಸ್ಮೆಂಟ್ ನಲ್ಲಿ   ಭಾಗವಹಿಸಿ ಆಯ್ಕೆಯಾದ ಮೇಘ ಕುಲಾಲ್, ಮಹಿಮಾ ಭಟ್, ಲಿಖಿತಾ ಶೆಟ್ಟಿ,ಡಿಲ್ಸನ್ ನಿಜಾರ್,ರಿಯಾನ್ ರಿಷಿ ಅಲ್ಫೋನ್ಸೋ,ಭಟ್ ರಾಮದಾಸ ಸತೀಶ್, ಪ್ರಜ್ವಲ್ ಬಿಸಿಎ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.

ಉಪನ್ಯಾಸಕಿ ದಿವ್ಯ ಶ್ರೀ, ಸುಷ್ಮಾ,ಪ್ರಕಾಶ್, ಎಲ್ಲಾ ವಿದ್ಯಾರ್ಥಿಗಳು, ಶಿಕ್ಷಕ-ಶಿಕ್ಷಕೇತರ ವೃಂದದವರು ಉಪಸ್ಥಿತರಿದ್ದರು.  ಶ್ರೀ ಚೆನ್ನ ಬಸವಯ್ಯ ಬಹುಮಾನ ಪಟ್ಟಿಯನ್ನು ವಾಚಿಸಿದರು.
ವಿದ್ಯಾರ್ಥಿ ನಾಯಕರಾದ ದಾಕ್ಷಾಯಿಣಿ,ಭಟ್ ರಾಮದಾಸ ಸತೀಶ್, ಡಿಲ್ಸನ್ ನಿಜಾರ್, ಪ್ರತೀಕ್ ಪೂಜಾರಿ, ವಿಜ್ಞೇಶ್, ಅಭಿಷೇಕ್, ಮಹಿಮಾ, ರಿಯಾನ್ ರಿಷಿ ಅಲ್ಫೋನ್ಸೋ ಸ್ಪರ್ಧೆಯನ್ನು ನಡೆಸಲು ಸಹಕರಿಸಿದ್ದರು. ಶೃತಿ ಸಿ ಪುಜಾರಿ ಸ್ವಾಗತಿಸಿ,ಸಿಯಾನಾ ಬಾನು  ವಂದಿಸಿದರು.ಕ್ರಿಪಾ ಬಿ ಆಚಾರ್ಯ ನಿರೂಪಿಸಿದರು.

 
 
 
 
 
 
 
 
 
 
 

Leave a Reply