ಕರಾವಳಿ ಭಾಗದ ಸಂಸ್ಕೃತಿ ಆಚರಣೆಯನ್ನು ಹಾಡಿ ಹೊಗಳಿದ ಬಿಜೆಪಿ ಚಾಣಕ್ಯ!!

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಗರಕ್ಕೆ ಭೇಟಿ ನೀಡಿದ ಅಮಿತ್​ ಶಾ ಕ್ಯಾಂಪ್ಕೋ ಸಂಸ್ಥೆಯ ಸುರ್ವಣ ಮಹೋತ್ಸವದಲ್ಲಿ ಭಾಗಿಯಾದ್ರು. ಕೇರಳದ ಕಣ್ಣೂರಿನಿಂದ ಹೆಲಿಕಾಪ್ಟರ್​ ಮೂಲಕ ಗಜಾನನ ವಿದ್ಯಾಸಂಸ್ಥೆಯ ಹೆಲಿಪ್ಯಾಡ್​ಗೆ ಬಂದಿಳಿದ ಅಮಿತ್​ ಶಾ ಅಲ್ಲಿಂದ ನೇರವಾಗಿ ಪಂಚಮುಖಿ ಆಂಜನೇಯ ಹನುಮಗಿರಿಗೆ ವಿಸಿಟ್​ ನೀಡಿದ್ರು. ಆಂಜನೇಯನ ದರ್ಶನ ಪಡೆದು ಬಳಿಕ ಅಮರಗಿರಿ ಮಂದಿರ ಉದ್ಘಾಟನೆ ಮಾಡಿದ ಬಿಜೆಪಿ ಚಾಣಕ್ಯ ಬಳಿಕ ವಿವೇಕಾನಂದ ಕಾಲೇಜು ಮೈದಾನದಲ್ಲಿ ಆಯೋಜನೆಗೊಂಡ ಕ್ಯಾಂಪ್ಕೋ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾದ್ರು.

ಭಾರತ್​ ಮಾತಾ ಕಿ ಜೈ ಎಂಬ ಘೋಷ ವಾಕ್ಯದ ಮೂಲಕ ಭಾಷಣ ಆರಂಭಿಸಿದ ಅಮಿತ್​ ಶಾ ಕರಾವಳಿ ಭಾಗದ ಸಂಸ್ಕೃತಿ ಆಚರಣೆಯನ್ನು ಹಾಡಿ ಹೊಗಳಿದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಧಾರ್ಮಿಕ ಹಾಗೂ ಸಾಂಸ್ಕೃತಿಕ ಪರಂಪರೆ ಹಾಸು ಹೊಕ್ಕಾಗಿದೆ. ಪರಶುರಾಮ ಸೃಷ್ಟಿಸಿದ ನಾಡಿದು. ಕಾಂತಾರ ಸಿನಿಮಾವನ್ನು ನಾನೂ ವೀಕ್ಷಿಸಿದ್ದೇನೆ. ಆ ಬಳಿಕವೇ ನನಗೆ ದಕ್ಷಿಣ ಕನ್ನಡ ಜಿಲ್ಲೆಯ ಸಂಸ್ಕೃತಿ ಎಷ್ಟೊಂದು ಮೇರು ಮಟ್ಟದ್ದು ಎಂಬುದು ತಿಳಿಯಿತು ಎಂದು ಹೇಳಿದರು.

ಬಿಜೆಪಿ ಸರ್ಕಾರವು ಬಡವರಿಗೆ ಮನೆ, ಸಿಲಿಂಡರ್​ ಸೌಕರ್ಯ, ಶೌಚಾಲಯ ವ್ಯವಸ್ಥೆ, ಪ್ರತಿ ಮನೆಗೂ ವಿದ್ಯುತ್​ ಹೀಗೆ ಸಾಕಷ್ಟು ಸೌಕರ್ಯಗಳನ್ನು ನೀಡಿದೆ. ಪಿಎಂ ಕಿಸಾನ್​ ಯೋಜನೆ ಮೂಲಕ ಬಡ ರೈತರಿಗೆ ಆರ್ಥಿಕ ನೆರವನ್ನೂ ನೀಡಿದ್ದೇವೆ . ಗುಜರಾತ್​ನಲ್ಲಿ ಸುಪಾರಿ ತಿನ್ನುವ ಪ್ರತಿಯೊಬ್ಬರೂ ಮಂಗಳೂರನ್ನು ನೆನಪು ಮಾಡಿಕೊಳ್ಳುತ್ತಾರೆ. ಗುಜರಾತ್​ ಜನರು ತಿನ್ನುವ ಸುಪಾರಿ ತಯಾರಾಗಲು ಮಂಗಳೂರಿನ ಜನತೆ ಬೆಳೆದ ಅಡಿಕೆಯನ್ನೇ ಬಳಕೆ ಮಾಡಲಾಗುತ್ತೆ ಎಂದು ಅಮಿತ್​ ಶಾ ಹೇಳಿದರು.

ಕ್ಯಾಂಪ್ಕೋ ಸಂಸ್ಥೆಯು 50 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದೆ. ಇಲ್ಲಿನ ಜನರ ಸೇವೆಯಿಂದಾಗಿ ಕ್ಯಾಂಪ್ಕೋ ಇಷ್ಟು ವರ್ಷಗಳ ಕಾಲ ಬೆಳೆಯಲು ಸಾಧ್ಯವಾಯ್ತು. ಕ್ಯಾಂಪ್ಕೋ ಸಂಸ್ಥೆಯಲ್ಲಿ 1ಲಕ್ಷಕ್ಕೂ ಅಧಿಕ ಸದಸ್ಯರಿದ್ದಾರೆ. ಇದೊಂದು ಪ್ರಾಮಾಣಿಕತೆಯ ಸರ್ಟಿಫಿಕೇಟ್​ ಪಡೆದ ಸೊಸೈಟಿ ಆಗಿದೆ. ನಮ್ಮ ಬಜೆಟ್​ನಲ್ಲಿ ನಾವು ಸಹಕಾರಿ ಸಂಘಗಳ ಅಭಿವೃದ್ಧಿಗೆ ಹಣ ಮೀಸಲಿಟ್ಟಿದ್ದೇವೆ ಎಂದು ಹೇಳಿದರು.

 
 
 
 
 
 
 
 
 
 
 

Leave a Reply