ಹೀಗೊಂದು ವಿನೂತನ ಯುವ ಸಂಘಟನೆ ಕೊಡಂಗಳ

ಮೊನ್ನೆಯಷ್ಟೆ ಒಂದು ವಾರ್ಷಿಕೋತ್ಸವ ಕಾರ್ಯಕ್ರಮದ ಅಭ್ಯಾಗತರಾಗಿ ಹೋಗಿದ್ದೆ. ನಮ್ಮದೇ ಪಕ್ಕದ ಊರು ಕೊಡಂಗಳ ಎನ್ನುವ ಊರು. ಸಣ್ಣ ಹಳ್ಳಿ. ಸುಂದರವಾದ ಪ್ರಕ್ರತಿಯನ್ನು ಹೊಂದಿರುವ ಊರು.

ಅಲ್ಲೊಂದು ಸಂಘಟನೆ ಕಳೆದ ಹಲವು ವರ್ಷಗಳಿಂದ ತನ್ನ ಊರಿನ ಅಭಿವ್ರಧ್ಧಿಗಾಗಿ ಸ್ಪಂದಿಸುವ ತುಡಿತದೊಂದಿಗೆ ಹತ್ತು ಹಲವು ಚಟುವಟಿಕೆ ನಡೆಸುತ್ತಿದೆ. ಸಂಘಟನೆಯ ಹೆಸರು ಯುವ ಸಂಘಟನೆ ಇದರಲ್ಲಿ ವಿಶೇಷತೆ ಏನೆಂದರೆ ನಾನು ಕಂಡುಕೊಂಡ ವಿಶೇಷತೆ ಇವರು ತನ್ನ ಊರಿನ ಶಾಲೆಗೆ ಹಾಗೂ ಅಂಗನವಾಡಿಗೆ ಬರುವ ಹೆಣ್ಣು‌ಮಕ್ಕಳ ಕಲ್ಯಾಣಕ್ಕಾಗಿ ಸುಕನ್ಯ ಸಮ್ರಧ್ಧಿ ಯೋಜನೆಯನ್ನು ಉಚಿತವಾಗಿ‌ಮಾಡಿಕೊಡುವುದು. ಇದರಲ್ಲಿ ವಿಶೇಷತೆ ಏನು ಅಂದುಕೊಳ್ಳಬಹುದು. ಒಂದು ಕಾಲದಲ್ಲಿ ಹಣ್ಣು ಮಕ್ಕಳು ಹುಟ್ಟುವುದೆಂದರೆ ಶಾಪ ಅಂದುಕೊಳ್ಳುತ್ತಿದ್ದರು. ಇಂದಿಗೂ ಕೆಲವು ಗ್ರಾಮೀಣ ಪ್ರದೇಶದಲ್ಲಿ ಪರಿಸ್ಥಿತಿ ವಿಪರೀತ ಸುಧಾರಿಲ್ಲ. ಅಂತಹ ಸನ್ನಿವೇಶದಲ್ಲಿ ನಮ್ಮ ದೇಶದ ನೆಚ್ಚಿನ ಪ್ರಧಾನಿಗಳಾದ ಮೋದೀಜಿಯವರು ಸುಕನ್ಯ ಸಮ್ರಧ್ಧಿ ಎನ್ನುವ ಯೋಜನೆ ತಂದು ಹೆಣ್ಣು ಮಕ್ಕಳ ಕಲ್ಯಾಣಕ್ಕಾಗಿ ಪಣ ತೊಟ್ಟರು. ಇದಕ್ಕೆ ವಾರ್ಷಿಕವಾಗಿ ಇಂತಿಷ್ಟು ಮೊತ್ತ ಭರಿಸಿದರೆ ಅವರಿಗೆ 18 ವರ್ಷ ತುಂಬುವಾಗ ವಿದ್ಯಾಭ್ಯಾಸವೋ ಅಥವಾ ಇನ್ನಿತರ ಚಟುವಟಿಕೆಗಳಿಗೆ ಗೌರವಯುತ ಮೊತ್ತ ಹಿಂದಿರುಗಿಸುವ ಯೋಜನೆ. ಮೋದೀಜಿ ರಾಷ್ಟ್ರೀಯ ಚಿಂತನೆ ಮಾಡುವಾಗ ನಾವು ನಮ್ಮೂರ ಚಿಂತನೆ ಮಾಡಿದಲ್ಲಿ ಮೋದೀಜಿಯವರ ಹಾಗೂ ನಮ್ಮೆಲ್ಲರ ಆಶಯದಂತೆ ಭಾರತ ಪರಮವೈಭವದತ್ತ ಸಾಗಬೇಕು ಎನ್ನುವುದು ಆ ತಂಡದ ಎಲ್ಲ ಸದಸ್ಯರ ಆಶಯ ಎನ್ನುವುದು ವಾರ್ಷಿಕೋತ್ಸವ ಸಾರಿ ಹೇಳಿದೆ‌. ಬಹಳ ಖುಷಿಯಾಯಿತು ಇಂತಹ ಒಂದು ಸಾರ್ಥಕ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿದುದಕ್ಕೆ. ಯಾಕೆಂದರೆ ಮೋದೀಜಿ ಒಬ್ಬರಿಂದ ದೇಶ ಸುಧಾರಿಸಲು ಸಾಧ್ಯವೇ? ನಾವೆಲ್ಲರೂ ಹೀಗೆ ದೇಶದ ಮೂಲೆ ಮೂಲೆಗಳಿಂದ ಒಟ್ಟಾಗಿ ಸಾಗಿದರೆ ಮಾತ್ರವಲ್ಲವೆ ದೇಶದ ಅಭಿವ್ರಧ್ಧಿ. ಒಟ್ಟು 22 ಮಕ್ಕಳಿಗೆ ರೂ.22000/- ವನ್ನು ಈ ಸಂದರ್ಭದಲ್ಲಿ ಮಕ್ಕಳ ಖಾತೆಗೆ ಹಾಕಲಾಗಿದೆ. ಕಳೆದ ಹಲವಾರು ವರ್ಷಗಳಿಂದ ಈ ಕಾರ್ಯಕ್ರಮ ನಡೆಸುತ್ತಿರುವ ಇಂತಹ ಸಂಘಟನೆಗಳು ಸಮಾಜಕ್ಕೆ ಮಾದರಿಯಲ್ಲವೆ? ಅವಕಾಶ ನೀಡಿದ ಸಂಘಟನೆಯ ಅಧ್ಯಕ್ಷರಾದ ರತ್ನಾಕರ್ ಮೂಲ್ಯ, ಪ್ರಮುಖರಾದ ಪದ್ಮನಾಭ ನಾಯಕ್, ಮೋಹನ್ ನಾಯ್ಕ್, ಗಣಪತಿ ನಾಯಕ್, ಶ್ರೀಪತಿ ಭಟ್ ಮತ್ತಿತರರಿಗೆ ಧನ್ಯವಾದಗಳು.

~ ಶ್ರೀಕಾಂತ ನಾಯಕ್
ಅಧ್ಯಕ್ಷರು ಬಿಜೆಪಿ ಕಾಪು ಕ್ಷೇತ್ರ

 
 
 
 
 
 
 
 
 
 
 

Leave a Reply