ದೊಡ್ಡಣ್ಣ ಗುಡ್ಡೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ ಪಂಚಮಹಾ ಚಂಡಿಕಾಯಾಗ ಸಂಪನ್ನ

ಉಡುಪಿ ದೊಡ್ಡನ ಗುಡ್ಡೆಯ ಶ್ರೀ ಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದಲ್ಲಿ ವಿಜಯದಶಮಿಯ ಪರ್ವಕಾಲದಲ್ಲಿ ಪಂಚಮಹಾ ಚಂಡಿಕಾಯಾಗ ಸಂಪನ್ನಗೊಂಡಿತು. ಕ್ಷೇತ್ರದ ಧರ್ಮದರ್ಶಿ ಶ್ರೀ ಶ್ರೀ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ಕೃಷ್ಣಮೂರ್ತಿ ತಂತ್ರಿಕ ನೇತೃತ್ವದಲ್ಲಿ ನೆರವೇರಿದ ಅಸಂಖ್ಯಾತ ಭಕ್ತರುಗಳು ಪಾಲ್ಗೊಂಡರು.

ಪ್ರಾತಕ್ಕಾಲಾ ಸಾಮೂಹಿಕ ಪ್ರಾರ್ಥನೆಯೊಂದಿಗೆ ಕ್ಷೇತ್ರ ಉಸ್ತುವಾರಿ ಶ್ರೀಮತಿ ಕುಸುಮ ನಗರ ದೀಪ ಪ್ರಜ್ವಲಿಸಿ ಯಾಗಕ್ಕೆ ಚಾಲನೆ ನೀಡಿದರು. ವಿಶೇಷವಾಗಿ ಅಲಂಕೃತಗೊಂಡ ಯಜ್ಞ ಮಂಟಪಕ್ಕೆ ಶ್ರೀ ದುರ್ಗಾ ಆದಿಶಕ್ತಿ ದೇವಿಯ ಉತ್ಸವ ಬಿಂಬವನ್ನು ಚೆಂಡೆ ಕೊಂಬು ಕಹಳೆ ಶೃಂಗಾರ ವಾದ್ಯ ನಾಗಸ್ವರವಾದ್ಯ ಹಾಗೂ ಪಂಚ ವಾದ್ಯಗಳ ನಾದದೊಂದಿಗೆ ಮೆರವಣಿಗೆಯಲ್ಲಿ ತರಲಾಯಿತು.

ಏಕಕಾಲದಲ್ಲಿ ಐದು ಕುಂಡಗಳಲ್ಲಿ ಯಾಗ ಆರಂಭಗೊಂಡು ಏಕಕಾಲದಲ್ಲಿ 5 ಕುಂಡಗಳಲ್ಲಿ ಯಾಗ ಪೂರ್ಣಹುತಿ ಕಂಡಿತು.
ನಾಲ್ಕು ಯಾಗಗಳು ಭಕ್ತರ ಪರವಾಗಿ ಪ್ರಾಯಶ್ಚಿತ ಪೂರ್ವಕವಾಗಿ ಸಮರ್ಪಿಸಲ್ಪಟ್ಟರೆ ಒಂದು ಮಹಾ ಯಾಗವು ಕ್ಷೇತ್ರದ ಸಮಸ್ತ ಭಕ್ತರುಗಳ ಪರವಾಗಿ ಸಾಮೂಹಿಕವಾಗಿ ಸಮರ್ಪಿತಗೊಂಡಿತು.
ಸಾಮೂಹಿಕ ಚಂಡಿಕಾಯಾಗದ ಪೂರ್ಣಹುತಿಯಲ್ಲಿ ಭಕ್ತರುಗಳು ದಾಖಲೆ ಪ್ರಮಾಣದ ದ್ರವ್ಯಗಳನ್ನು ಸಮರ್ಪಿಸಿದರು.
ತಾವರೆ ಎಳ್ಳು ಕಬ್ಬು ಹಾಲು, ಮೊಸರು, ಪಚ್ಚಕರ್ಪೂರ ತೆಂಗಿನಕಾಯಿ ತುಪ್ಪ ಸೀರೆ ರವಚಕಣ ಬಿಲ್ವಪತ್ರೆ ಗಂಧ ಬಾಳೆಹಣ್ಣು ಕೇಸರಿ ಕಲ್ಲು ಸಕ್ಕರೆ ಹರಳು ಮುಂತಾದ ಮಂಗಳ ದ್ರವ್ಯಗಳನ್ನು ಸಮರ್ಪಿಸಿದರು.
ಯಾಗದ ಅಂಗವಾಗಿ ನೆರವೇರಿದ ಬ್ರಾಹ್ಮಣ ಸುವಾಸಿನಿ ಕನ್ನಿಕರಾಧನೆಯ್ಲಿ ದಾಖಲೆ ಪ್ರಮಾಣದ ಬ್ರಾಹ್ಮಣ ಬಾಂಧವರು ಪಾಲ್ಗೊಂಡರು.

ವಿಜಯ ದಶಮಿಯ ಪರ್ವಕಾಲದಲ್ಲಿ ಕ್ಷೇತ್ರಕ್ಕೆ ಪ್ರಾತಃಕಾಲದಿಂದರೇ ಭಕ್ತರ ದಂಡು ಹರಿದು ಬರುತ್ತಿತ್ತು. ಸರಿಸುಮಾರು 20 ಸಾವಿರಕ್ಕೂ ಅಧಿಕ ಭಕ್ತರು ಕ್ಷೇತ್ರ ಸಂದರ್ಶಿಸಿದ್ದರು ಹಾಗೂ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಭಕ್ತರುಗಳು ಪಂಚಭಕ್ಷ ಸಹಿತವಾದ ಮೃಷ್ಟಾನ್ನ ಸಂತರ್ಪಣೆಯನ್ನು ಸ್ವೀಕರಿಸಿದರು.

ಅಚ್ಚುಕಟ್ಟಾದ ವ್ಯವಸ್ಥೆ

ಅಸಂಖ್ಯಾತ ಭಕ್ತರುಗಳು ಭಕ್ತರುಗಳು ಸಂದರ್ಶಿಸುವ ನಿರೀಕ್ಷೆ ಮೊದಲೇ ಇದ್ದು ಭಕ್ತರಿಗೆ ಅನುಕೂಲ ವಾಗುವಂತೆ ಉತ್ತಮವಾದ ಪಾರ್ಕಿಂಗ್ ವ್ಯವಸ್ಥೆ,ಹಾಗೂ ಅನ್ನಪ್ರಸಾದಕ್ಕಾಗಿ ಏಕಕಾಲದಲ್ಲಿ ಕ್ಷೇತ್ರದ ಅನ್ನಪೂರ್ಣ ಭೋಜನಾಲಯ ಆದಿಶಕ್ತಿ ಸಭಾಭವನ ಸರಸ್ವತಿ ಭವನ ಹಾಗೂ ವಿಶಾಲವಾದ ಮೈದಾನದಲ್ಲಿ ವ್ಯವಸ್ಥೆ ಕಲ್ಪಿಸಲಾಗಿತ್ತು. ಏಕಕಾಲದಲ್ಲಿ ಸಹಸ್ರ ಸಂಖ್ಯೆ ಗೂ ಮಿಕ್ಕಿದ ಭಕ್ತರುಗಳಿಗೆ ಅನ್ನ ಪ್ರಸಾದ ವಿತರಿಸುವ ವ್ಯವಸ್ಥೆ ಕಲ್ಪಿಸಲಾಗಿತ್ತು. ತುದಿ ಬಾಳೆ ಎಲೆಯಲ್ಲಿ ಪಂಚಪಕ್ಷ ಸಹಿತವಾಗಿ ವಿಧವಿಧ ಖಾದ್ಯಗಳೊಂದಿಗೆ ಶಿಸ್ತುಬದ್ಧವಾಗಿ ರುಚಿಕಟ್ಟಾಗಿ ಪ್ರಸಾದ ಬಡಿಸಲಾಯಿತು.
ಕ್ಷೇತ್ರದಲ್ಲಿ ನೆರವೇರಿದ ಯಾಗ ಹಾಗೂ ವ್ಯವಸ್ಥೆ ಪ್ರಸಂಶಗೆ ಕಾರಣವಾಯಿತು.
ಸರ್ವರ ಸಹಕಾರದಿಂದ ನವರಾತ್ರಿ ಮಹೋತ್ಸವ ಬಹು ವಿಜೃಂಭಣೆಯಿಂದ ಸಂಪನ್ನಗೊಂಡಿತು ಎಂದು ಕ್ಷೇತ್ರ ಉಸ್ತುವಾರಿ ಶ್ರೀಮತಿ ಕುಸುಮ ನಾಗರಾಜ್ ತಿಳಿಸಿರುತ್ತಾರೆ

 
 
 
 
 
 
 
 
 
 
 

Leave a Reply