ಜೇಮ್ಸ್ ಎತ್ತಂಗಡಿ ವಿಷಯ: ಶಿವರಾಜ್ ಕುಮಾರ್ ದಂಪತಿ ಸಿಎಂ ಭೇಟಿ

ಬೆಂಗಳೂರು- ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಅವರ ಪತ್ನಿ ಗೀತಾ ಅವರು ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ್ದರು.

ಬೊಮ್ಮಾಯಿ ಅವರ ರೇಸ್ ವೀವ್ ನಿವಾಸದಲ್ಲಿ ಭೇಟಿ ಮಾಡಿದ ಶಿವರಾಜ್ ಕುಮಾರ್ ದಂಪತಿಗಳು ಜೇಮ್ಸ್ ಸಿನಿಮಾವನ್ನು ಥಿಯೇಟರ್ ಗಳಿಂದ ಎತ್ತಂಗಡಿ ಮಾಡಿಸದಂತೆ ಮನವಿ ಮಾಡಿದರು. ಇದಕ್ಕೆ ಬೊಮ್ಮಾಯಿ ಅವರು ಸಕರಾತ್ಮಕವಾಗಿ ಸ್ಪಂದಿಸಿದರು.

ಕರ್ನಾಟಕದ 111 ಥಿಯೇಟರ್ ಗಳಲ್ಲಿ ಜೇಮ್ಸ್ ಸಿನಿಮಾವನ್ನು ಎತ್ತಂಗಡಿ ಮಾಡಲಾಗುತ್ತಿದೆ. ಜೇಮ್ಸ್ ಬದಲು ಆರ್ ಆರ್ ಆರ್ ಹಾಗೂ ದಿ ಕಾಶ್ಮೀರ್ ಫೈಲ್ಸ್ ಸಿನಿಮಾವನ್ನು ಹಾಕಲಾಗುತ್ತಿದೆ.

ಇದು ಸಹಜವಾಗಿಯೇ ಪುನೀತ್ ರಾಜ್ ಕುಮಾರ್ ಅವರ ಅಭಿಮಾನಿಗಳನ್ನು ಕೆರಳಿಸಿತು. ಬೆಂಗಳೂರಿನ ತ್ರಿವೇಣಿ ಥಿಯೇಟರ್ ಸೇರಿದಂತೆ ಇತರೆಡೆ ರಿಲೀಸ್ ಗೆ ಸಿದ್ಧವಾಗಿರುವ ಆರ್ ಆರ್ ಆರ್ ಹಾಗೂ ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಪೋಸ್ಟರ್ ಗಳನ್ನು ಹರಿದು ಹಾಕಿದರು.

ಜೇಮ್ಸ್ ಸಿನಿಮಾವನ್ನು ಎತ್ತಂಗಡಿ ಮಾಡಿದ್ರೆ ತೀವ್ರ ರೀತಿಯ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಇದೇ ವೇಳೆ ಶಿವರಾಜ್ ಕುಮಾರ್ ಅವರು ಇಂದು ಬೆಂಗಳೂರಿನ ಫಿಲ್ಮ್ ಛೇಂಬರ್ ಗೆ ಬಂದು ನಿರ್ಮಾಪಕರು ಹಾಗೂ ನಿರ್ದೇಶಕರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು. ಜೇಮ್ಸ್ ಸಿನಿಮಾ ಎತ್ತಂಗಡಿ ಕುರಿತಂತೆ ಯಾರನ್ನು ದೂಷಿಸುವುದು ಬೇಡ ಎಂದು ಹೇಳಿದರು.

ಶಿವರಾಜ್ ಕುಮಾರ್ ಸಂಧಾನದ ಫಲವಾಗಿ ಜೇಮ್ಸ್ ಸಿನಿಮಾದ ಥಿಯೇಟರ್ ಸಮಸ್ಯೆ ಪರಿಹಾರವಾಗಿದೆ. ಸಿಎಂ ಸೂಚನೆ ಮೇರೆಗೆ 111 ಥಿಯೇಟರ್ ಗಳಲ್ಲಿ ಬೇರೆ ಸಿನಿಮಾ ಪ್ರದರ್ಶನಕ್ಕೆ ಅವಕಾಶ ಕೊಡಲಾಗಿದೆ. ಉಳಿದಂತೆ 386 ಥಿಯೇಟರ್ ಗಳಲ್ಲಿ 176 ಥಿಯೇಟರ್ ಗಳಲ್ಲಿ ಜೇಮ್ಸ್ ಸಿನಿಮಾ ಪ್ರದರ್ಶನಕ್ಕೆ ಅವಕಾಶ ನೀಡಲಾಗಿದೆ.

 
 
 
 
 
 
 
 
 
 
 

Leave a Reply