ವಿಕಲ ಚೇತನರಿಗೆ ಸಲಕರಣೆ ವಿತರಣೆ

ಉಡುಪಿ: ವಿಕಲಚೇತನರಿಗೆ ಸಹಾನುಭೂತಿ ತೋರುವ ಬದಲು ಅವರಿಗೆ ಸಹಾಯ ಹಸ್ತ ನೀಡುವುದರ ಮೂಲಕ ಅವರು ಸಮಾಜದ ಮುಖ್ಯವಾಹಿನಿಯಲ್ಲಿ ಕಾಣಿಸಿಕೊಂಡು, ಉತ್ತಮ ಸಾಧನೆ ನೀಡಲು ಪ್ರೇರೆಪಿಸಬೇಕು ಎಂದು ಶಾಸಕ ರಘುಪತಿ ಭಟ್ ಹೇಳಿದರು.

ಅವರು ಇಂದು ಮಿಷನ್ ಕಂಪೌoಡ್‌ನ ಆಶಾ ನಿಲಯ ವಿಶೇಷ ಶಾಲೆಯಲ್ಲಿ. ವಿಕಲ ಚೇತನರಿಗೆ ತ್ರಿಚಕ್ರ ವಾಹನ, ಟಾಕಿಂಗ್ ಲ್ಯಾಪ್‌ಟಾಪ್, ಹೊಲಿಗೆ ಯಂತ್ರ ವಿತರಿಸಿ ಮಾತನಾಡಿದರು. ಎಲ್ಲಾ ಇಲಾಖೆಗಳಲ್ಲಿ ವಿಕಲಚೇತನರಿಗೆ ಮೀಸಲಿಟ್ಟ ಅನುದಾನದ ಸದ್ಭಳಕೆ ಆಗಬೇಕು ಎಂದ ಶಾಸಕರು, ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ವಿಕಲಚೇತನರಿಗೆ ಹೇಳಿದರು.

ಕಾರ್ಯಕ್ರಮದಲ್ಲಿ ಶ್ರವಣದೋಷವುಳ್ಳ 6 ಮಂದಿಗೆ ಹೊಲಿಗೆ ಯಂತ್ರ, 5 ಮಂದಿ ಅಂಧ ವಿದ್ಯಾರ್ಥಿಗಳಿಗೆ ಟಾಕಿಂಗ್ ಲ್ಯಾಪ್ ಟಾಪ್, 35 ಮಂದಿಗೆ ಯಂತ್ರ ಚಾಲಿತ ದ್ವಿಚಕ್ರ ವಾಹನಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್‌ನ ಉಪಕಾರ್ಯದರ್ಶಿ ಕಿರಣ್ ಫಡ್ನೇಕರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಶೇಷಪ್ಪ, ಜಿಲ್ಲಾ ವಿಕಲಚೇತನ ಕಲ್ಯಾಣಾಧಿಕಾರಿ ರತ್ನಾ , ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಅಧ್ಯಕ್ಷ ತಲ್ಲೂರು ಶಿವರಾಂ ಶೆಟ್ಟಿ ಹೇಳಿದರು.
ಕಾರ್ಯದರ್ಶಿ ಕೆ.ಜಯರಾಂ ಆಚಾರ್ಯ ಸಾಲಿಗ್ರಾಮ, ಹಾಗೂ ಜಿಲ್ಲೆಯ ವಿವಿಧ ವಿಕಲಚೇತನರು ಉಪಸ್ಥಿತರಿದ್ದರು.
 
 
 
 
 
 
 
 
 
 
 

Leave a Reply