ಉಡುಪಿಯಲ್ಲಿ ದಂತ ಸ್ಕಾನಿಂಗ್ ಸೌಲಭ್ಯ ಕೇಂದ್ರ ಶುಭಾರಂಭ

 ಉಡುಪಿ ಅಜ್ಜರಕಾಡು ಲಾಲ್ ಬಹದ್ದೂರ್ ಶಾಸ್ತ್ರಿ ರಸ್ತೆಯಲ್ಲಿರುವ  ವಯೋಲೆಟ್ ತೀರ್ಥ ಸಂಕೀರ್ಣದಲ್ಲಿ ನೂತನ ಸುಸಜ್ಜಿತ ದಂತ ಸ್ಕಾನಿಂಗ್ ಸೌಲಭ್ಯ ಕೇಂದ್ರ ಶುಭಾರಂಭ ಗೊಂಡಿತು. 
ಉದ್ಘಾಟನೆಯನ್ನು ಉಡುಪಿಯ ಹಿರಿಯ ದಂತವೈದ್ಯರಾದ ಡಾ. ರಾಮಾನಂದ ಸೂಡಾ, ಕಾರ್ಕಳದ ಹಿರಿಯ ದಂತವೈದ್ಯರಾದ ಡಾ. ರಮೇಶ್ ಶೆಣೈ, ಅಖಿಲ ಭಾರತೀಯ ದಂತವೈದ್ಯ ಸಂಘದ ಉಡುಪಿಯ  ಅಧ್ಯಕ್ಷರೂ,ಕುಂದಾಪುರದ ಹಿರಿಯ ದಂತವೈದ್ಯರಾದ ಡಾ.ಪ್ರಮೋದ್ ಶೆಟ್ಟಿಯವರು ನೆರವೇರಿಸಿದರು.
ಬ್ರಹ್ಮಾವರದ ಡಾ. ಮನೋಜ್ ಡಿಲಿಮಾ, ಶಿರ್ವದ ಡಾ. ಗುರುರಾಜ್, ಮಲ್ಪೆಯ ಡಾ. ಸುಧೀರ್ ರಾವ್, ಬ್ರಹ್ಮಾವರದ ಡಾ. ಕಿರಣ್ ಶೆಟ್ಟಿ, ಮುಂಬಯಿಯ ಡಾ. ನವೀನ್ ಶೆಟ್ಟಿ, ಕಾರ್ಕಳದ ಡಾ. ಮುರಳೀಧರ ಭಟ್, ಉಡುಪಿಯ ಡಾ.ಸೈಯದ್  ಫಯಾಜ್ , ಪೆರ್ಡೂರಿನ ಶ್ರೀ ಸುಧೀರ್, ಡಾ. ನಿತೇಶ್ ಶೆಟ್ಟಿ, ಡಾ. ಮನೋಜ್ ಶೆಟ್ಟಿ, ಡಾ. ಪ್ರಕೃತಿ ಶೆಟ್ಟಿ, ಡಾ.ಅನಿತಾ ಸೂಡಾ  ಮತ್ತಿತರರು ಉಪಸ್ಥಿತರಿದ್ದರು.

ಉಡುಪಿ ಜಿಲ್ಲೆಯಲ್ಲಿ ಪ್ರಪ್ರಥಮವಾಗಿ ಆಧುನಿಕ ತಂತ್ರಜ್ಞಾನದ Dental – CBCT (Cone Beam Computed Tomography System) Scanning Centre ಆಗಿದ್ದು,ಇಲ್ಲಿ OPG, Lateral Cephalogram ಅಂತಹ 2D/ 3D ಸ್ಕಾನಿಂಗ್ ಗಳ ಸೌಲಭ್ಯಗಳು ಲಭ್ಯವಿರುವುದು.ಉಡುಪಿ ಜಿಲ್ಲೆಯ ಜನತೆ ಈ ಸೌಲಭ್ಯದ ಸದುಪಯೋಗ ಪಡೆದುಕೊಳ್ಳಬೇಕಾಗಿ ವಿನಂತಿ.

ಅಲ್ಲದ್ದೇ  ಈ ಕೇಂದ್ರವು ದಂತ ವೈದ್ಯರ ಕೌಶಲ ಅಭಿವೃದ್ಧಿಗೆ ಪೂರಕವಾಗಿ ನಿರಂತರ ಮುಂದುವರಿಕಾ ಶಿಕ್ಷಣ ಕೇಂದ್ರವಾಗಿಯೂ ಕಾರ್ಯ ನಿರ್ವಹಿಸುವ ಉದ್ದೇಶವನ್ನು ಹೊಂದಿದೆ.
 
 
 
 
 
 
 
 
 

Leave a Reply