ಚೇಂಪಿಯಲ್ಲಿ ವೈಕುಂಠ ಏಕಾದಶಿ ಮಹೋತ್ಸವ

ಚೇಂಪಿ ಶ್ರೀ ಲಕ್ಷ್ಮೀ ವೆಂಕಟರಮಣ ದೇವಾಲಯದಲ್ಲಿ ದ್ವಿತೀಯ ವರ್ಷದ ತಿರುಪತಿ ದೇವರ ಪ್ರತಿರೂಪವಾದ ಶ್ರೀಲಕ್ಷ್ಮೀವೆಂಕಟರಮಣ ದರ್ಶನವನ್ನು ಉತ್ತರ ದ್ವಾರದಿಂದಲೇ ನೋಡುವ ಸೌಭಾಗ್ಯವನ್ನು ಕಲ್ಪಿಸುವ ಮೂಲಕ ಮಾರ್ಗಶಿರ ಶುದ್ಧ ಏಕಾದಶಿ 23.12.2023ರ ಶನಿವಾರದಂದು ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದಲ್ಲಿ “ವೈಕುಂಠ ಏಕಾದಶಿ” ವಿಶೇಷ ಆಚರಣೆಯನ್ನು ಏರ್ಪಡಿಸಲಾಗಿದೆ. ಭಕ್ತಾದಿಗಳು ಕುಟುಂಬ ಸಮೇತರಾಗಿ ಆಗಮಿಸಿ ಪುಣ್ಯಪ್ರದ ದಿನ ಸಪ್ತದ್ವಾರದ ಮೂಲಕ ಶ್ರೀ ದೇವರ ದರ್ಶನ ಪಡೆದು ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿ.

ಬೆಳಿಗ್ಗೆ ಗಂಟೆ 09.00 ರಿಂದ ದೀಪ ಸ್ಥಾಪನಾಪೂರ್ವಕ ವಿವಿಧ ಭಜನಾ ಮಂಡಳಿಗಳಿಂದ ಅಹೋರಾತ್ರಿ ಏಕಾಹ ಭಜನೆ ದೇವರಿಗೆ ವಿಶೇಷ ಹೂವಿನ ಅಲಂಕಾರದೊಂದಿಗೆ ಹೂವಿನ ಪೂಜೆ ರಾತ್ರಿ ಪೂಜೆಯ ನಂತರ ಫಲಹಾರ ವಿತರಣೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ

 
 
 
 
 
 
 
 
 
 
 

Leave a Reply