ಸಿ.ಪಿ.ಯೋಗೇಶ್ವರ್ ರನ್ನು ಸಚಿವ ಸಂಪುಟದಿಂದ ಹೊರ ಹಾಕ್ತಾರ ಬಿ ಎಸ್ ವೈ!!

ಬೆಂಗಳೂರು : ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಸದ್ದು ಜೋರಾಗಿದೆ.ಅದರಲ್ಲೂ ಸ್ವತಹ ಸಚಿವ ಸಂಪುಟದ ಸಿ.ಪಿ.ಯೋಗೇಶ್ವರ್ ಯಡಿಯೂರಪ್ಪ ವಿರುದ್ಧ ಸಚಿವ ಸಮರ ಸಾರಿದ್ದಾರೆ ಎನ್ನಲಾಗಿತ್ತು.

ಹೀಗಾಗಿ ಸಿಎಂ ಯಡಿಯೂರಪ್ಪ ಬದಲಾವಣೆಯನ್ನು ವಿರೋಧಿಸಿ, ಅವರ ಬೆಂಬಲಕ್ಕೆ 18 ಬಿಜೆಪಿ ಶಾಸಕರು ನಿಂತಿದ್ದಾರೆ. ಇದರಿಂದಾಗಿ ಸಚಿವ ಸಂಪುಟದಿಂದ ಸಚಿವ ಸಿ.ಪಿ.ಯೋಗೇಶ್ವರ್ ಹೊರಬಿಳ್ತಾರ ಎಂಬ ಕುತೂಹಲವೂ ಮೂಡಿದೆ.

ರಾಜ್ಯ ರಾಜಕೀಯದಲ್ಲಿ ಸಿಎಂ ಬದಲಾವಣೆಯ ಬಗ್ಗೆ ದಿನಕ್ಕೊಂದು ವಿದ್ಯಮಾನಗಳಿಗೆ ಕಾರಣವಾಗುತ್ತಿದೆ. ಸಿಎಂ ಬದಲಾವಣೆ ಪ್ರಶ್ನೆಯೇ ಇಲ್ಲ ಎಂಬುದಾಗಿ ಅನೇಕ ಸಚಿವರು, ಶಾಸಕರು ಸಿಎಂ ಪರವಾಗಿ ಬ್ಯಾಟ್ ಬೀಸಿದ್ದಾರೆ. ಅಲ್ಲದೇ ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ, ನಾವಿದ್ದೇವೆ ಎಂಬುದಾಗಿಯೂ ಹೇಳಿದ್ದಾರೆ.

ಭಾನುವಾರ 18 ಶಾಸಕರು ಸಿಎಂ ಯಡಿಯೂರಪ್ಪ ಅವರ ಜೊತೆಗೆ ಕೋವಿಡ್ ಪರಿಸ್ಥಿತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿದ್ದಾರೆ. ಈ ಮೂಲಕ ಸಿಎಂ ಯಡಿಯೂರಪ್ಪ ಅವರ ಬೆಂಬಲಕ್ಕೆ ತಮ್ಮ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.ಇದೇ ಸಂದರ್ಭದಲ್ಲಿ ಸಚಿವ ಸಿಪಿ ಯೋಗೇಶ್ವರ್ ಅವರ ವಿರುದ್ಧ ಸಿಎಂ ಎದುರಲ್ಲೇ ವಾಗ್ದಾಳಿ ನಡೆಸಿರುವಂತ ಶಾಸಕರು, ಯೋಗೇಶ್ವರ್ ಪಕ್ಷಕ್ಕೆ ಆಮದು ಸರಕು. ಅವರ ಮೇಲೆ ಪಕ್ಷ ಅವಲಂಬಿತವಾಗಿಲ್ಲ. ನಿಮ್ಮನ್ನು ಬದಲಾವಣೆ ಮಾಡಲು ಅವರು ಯಾರು. ಏನೇ ಆದ್ರೂ ನಿಮ್ಮ ಪರವಾಗಿದ್ದೇವೆ ಎಂಬುದಾಗಿ ಶಾಸಕರು ಸಿಎಂಗೆ ತಿಳಿಸಿದ್ದಾರೆ ಎನ್ನಲಾಗಿದೆ.

ಯೋಗೇಶ್ವರ್ ವಿರುದ್ಧ ಹರಿಹಾಯ್ದಿರುವಂತ ಶಾಸಕರನ್ನು, ಸಿಎಂ ಯಡಿಯೂರಪ್ಪ ಅವರು, ಸದ್ಯ ಆತುರ ಬೇಡ. ರಾಜ್ಯದಲ್ಲಿ ಕೋವಿಡ್ ಪರಿಸ್ಥಿತಿಯ ನಿಯಂತ್ರಣದ ಬಗ್ಗೆ ಮಾತ್ರ ಚರ್ಚಿಸೋಣ ಎಂಬುದಾಗಿ ಸಮಾಧಾನಿಸಿದ್ದಾರೆ ಎನ್ನಲಾಗಿದೆ. ಈ ಎಲ್ಲಾ ಕಾರಣದಿಂದಾಗಿ ಸಚಿವ ಸಂಪುಟದಿಂದ ಸಚಿವ ಸಿಪಿ ಯೋಗೇಶ್ವರ್ ಅವರನ್ನು ಕೈಬಿಡುವ ಬಗ್ಗೆ ಅನೇಕರು ಸಿಎಂ ಮೇಲೆ ಒತ್ತಡ ಹೇರಿದ್ದಾರೆ ಎಂದು ಕೂಡ ಹೇಳಲಾಗುತ್ತಿದೆ. ಹೀಗಾಗಿ ಸಚಿವ ಯೋಗೇಶ್ವರ್ ಬಗ್ಗೆ ಸಿಎಂ ಯಡಿಯೂರಪ್ಪರ ನಿರ್ಧಾರ ಏನು ಎನ್ನುವುದೇ ಈಗ ಬಹು ದೊಡ್ಡ ಪ್ರಶ್ನೆಯಾಗಿದೆ.

 
 
 
 
 
 
 
 
 
 
 

Leave a Reply