ಉಡುಪಿಯಲ್ಲಿ ಡಾ ಬನ್ನಂಜೆ ಸಂಸ್ಮರಣೋತ್ಸವ~ ಪುತ್ಥಳಿ ಅನಾವರಣ .

ಬಹುಶ್ರುತ ವಿದ್ವಾಂಸ, ಪದ್ಮಶ್ರೀ ಪುರಸ್ಕೃತ ವಿದ್ಯಾವಾಚಸ್ಪತಿ ಡಾ ಬನ್ನಂಜೆ ಗೋವಿಂದಾಚಾರ್ಯರ ಪ್ರಥಮ ಪುಣ್ಯಸಂಸ್ಮರೋತ್ಸವದ ಅಂಗವಾಗಿ ಅಂಬಲಪಾಡಿಯಲ್ಲಿರುವ ಆಚಾರ್ಯರ ಸ್ವಗೃಹ ಈಶಾವಾಸ್ಯಮ್ ನಲ್ಲಿ ಬನ್ನಂಜೆಯವರ ಅಭಿಮಾನಿಗಳು ಶಿಷ್ಯರು ಮುಂಜಾನೆಯಿಂದ ಸಂಜೆಯವರೆಗೆ ಎಂಬ ಶೀರ್ಷಿಕೆಯಲ್ಲಿ ದಿನಪೂರ್ತಿ ಹಮ್ಮಿಕೊಂಡ ಕಾರ್ಯಕ್ರಮ ಶುಕ್ರವಾರ ಉದ್ಘಾಟನೆಗೊಂಡಿತು.

ಉಡುಪಿ ಶಾಸಕ ಹಾಗೂ ಆಚಾರ್ಯರ ಅಭಿಮಾನಿಯೂ ಆಗಿರುವ ಕೆ ರಘುಪತಿ ಭಟ್ಟರು ಉದ್ಘಾಟಿಸಿ ,ರಾಜ್ಯ ಸರ್ಕಾರವು ಶ್ರೀಯುತ ಆಚಾರ್ಯರ ಶ್ರೇಷ್ಠವಾದ ಬಹುಮುಖಿ ವಾಙ್ಮಯ ಕೊಡುಗೆಗಳನ್ನು ಗೌರವಿಸುವ ನಿಟ್ಟಿನಲ್ಲಿ ಉಡುಪಿಯಲ್ಲಿ ನಿರ್ಮಾಣಗೊಂಡಿರುವ ಜಿಲ್ಲಾ ಗ್ರಂಥಾಲಯಕ್ಕೆ ಅವರ ಹೆಸರಿಡಲು ನಿರ್ಧರಿಸಿದೆ.‌ ಈ ಗರಂಥಾಲಯದ ಎರಡನೇ ಮಹಡಿಯಲ್ಲಿ ಆಚಾರ್ಯರ ಕೃತಿಗಳ ಅಧ್ಯಯನ, ಪ್ರವಚನ ಉಪನ್ಯಾಸಗಳ ಶ್ರವಣಕ್ಕಾಗಿ ಹಾಗೂ ತತ್ತ್ವ ಶಾಸ್ತ್ರಗಳ ಅಧ್ಯಯನಕ್ಕೆ ಮುಡುಪಾಗಿಡಲಾಗುವುದು .

ಸರ್ಕಾರದ ಈ ನಿರ್ಧಾರದಿಂದ ಆಚಾರ್ಯರಿಗೂ ಉತ್ತಮ ಗೌರವ ಮತ್ತು ಗ್ರಂಥಾಲಯದ ಶ್ರೇಷ್ಠತೆ ಹೆಚ್ಚಿದಂತಾಗಿದೆ ಎಂದರು. ನೂತನವಾಗಿ ನಿರ್ಮಿಸಲಾದ ಡಾ ಆಚಾರ್ಯರ ಸುಂದರ ಪ್ರತಿಮೆಯನ್ನು ಅವರ ಅಧ್ಯಾತ್ಮ ಶಿಷ್ಯ ರಷ್ಯಾ ದೇಶದ ನಾರಸಿಂಹ ನಿಕೋಲಾಯ್ ಲೋಕಾರ್ಪಣೆಗೊಳಿಸಿ, ಸಂಸ್ಕೃತ ಭಾಷೆಯಲ್ಲೇ ಭಾವುಕರಾಗಿ ಮಾತನಾಡಿ, ಆಚಾರ್ಯರು ತಮ್ಮ ನೇಲೆ ವಿಶರಷ ಕಾರುಣ್ಯದಿಂದ ಅಧ್ಯಾತ್ಮದ ಬಗ್ಗೆ ತೋರಿದ ಮಾರ್ಗದರ್ಶನವನ್ನು ಸ್ಮರಿಸಿಕೊಂಡರು .

ಪ್ರತಿಮೆ ನಿರ್ಮಿಸಿಕೊಟ್ಟ ಕಲಾವಿದ ಜನಾರ್ದನ ಹಾವಂಜೆಯವರನ್ನು ಸಂಮಾನಿಸಲಾಯಿತು. ಈಶಾವಾಸ್ಯ ಪ್ರತಿಷ್ಠಾನದ ವಿಶ್ವಸ್ಥರಾದ ಉದ್ಯಮಿ ಬಾಲಾಜಿ ರಾಘವೇಂದ್ರಾಚಾರ್ಯರು ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು .ಮಹಿತೋಷ್ ಆಚಾರ್ಯ ಕಾರ್ಯಕ್ರಮ‌ ನಿರೂಪಿಸಿದರು .

 
 
 
 
 
 
 
 
 
 
 

Leave a Reply