ಸಹಕಾರಿ ಸಂಘದ ಮೂಲಕ ಮೀನುಗಾರ ಮಹಿಳೆಯರಿಗೆ ಕಡಿಮೆ ಬಡ್ಡಿಯಲ್ಲಿ ಸಾಲ ವಿತರಣೆ – ಬೇಬಿ ಎಚ್.ಸಾಲ್ಯಾನ್

ಉಡುಪಿ: ಉಡುಪಿ ಜಿಲ್ಲೆಯಲ್ಲಿ ಮೀನುವ್ಯಾಪಾರ ಕುಲಕಸುಬು ನಡೆಸುವ ಎಲ್ಲಾ ಮಹಿಳೆಯರು ಸಹಕಾರಿ ಸಂಘದ ಸದಸ್ಯರಾಗಿ ಸಂಘಟನೆಯ ಆರ್ಥಿಕ ಬಲ ಹೆಚ್ಚಿಸಬೇಕು. ಸಹಕಾರಿ ಸಂಘದ ಮೂಲಕ ಸ್ವಸಹಾಯ ಗುಂಪು ಸಾಲ, ಮೀನುಗಾರಿಕಾ ನೇರಸಾಲ ಸೌಲಭ್ಯಗಳನ್ನು ಅತೀ ಕಡಿಮೆ ಬಡ್ಡಿದರದಲ್ಲಿ ವಿತರಿಸಲಾಗುವುದು ಎಂದು ಉಡುಪಿ ಮೀನು ಮಾರಾಟಗಾರರ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷೆ ಬೇಬಿ ಎಚ್.ಸಾಲ್ಯಾನ್ ತಿಳಿಸಿದ್ದಾರೆ.

ಉಡುಪಿಯ ಕಿನ್ನಿಮೂಲ್ಕಿ ಶ್ರೀ ವೀರಭದ್ರ ದೇವಸ್ಥಾನದ ಸಭಾಭವನ ಸಭಾಂಗಣದಲ್ಲಿ ನಡೆದ ಉಡುಪಿ ಮೀನು ಮಾರಾಟಗಾರರ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ೧೨ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಹಕಾರಿ ಸಂಘವು ೭.೨೧ಕೋಟಿ ದುಡಿಯುವ ಬಂಡವಾಳವನ್ನು ಹೊಂದಿದ್ದು, ಪ್ರತೀ ವರ್ಷ ಸಂಸ್ಥೆಯು ತನ್ನ ಲಾಭಾಂಶದಲ್ಲಿ ಸದಸ್ಯರಿಗೆ ಡಿವಿಡೆಂಡ್ ವಿತರಣೆ ಮಾಡುತ್ತಿದೆ. ಮಹಿಳೆಯರಿಂದ ಸ್ಥಾಪನೆಯಾದ ಆರ್ಥಿಕ ಸಂಸ್ಥೆಯಲ್ಲಿ ಹೆಚ್ಚು ಹೆಚ್ಚು ಮಹಿಳೆಯರು ವ್ಯವಹಾರ ನಡೆಸಿದಾಗ ಸಂಘದ ಲಾಭಾಂಶವನ್ನು ನೇರವಾಗಿ ಸದಸ್ಯರಿಗೆ ವಿನಿಯೋಗಿಸಲು ಸಾಧ್ಯವಿದೆ ಎಂದರು.
ಈ ಸಂದರ್ಭ ಕರ್ನಾಟಕ ರಾಜ್ಯ ಸಂಯುಕ್ತ ಸೌಹಾರ್ದ ಫೆಡರೇಶನ್ ಬೆಂಗಳೂರು ಇದರ ನೂತನ ನಿರ್ದೇಶಕರಾಗಿ ದ್ವಿತೀಯ ಬಾರಿಗೆ ಆಯ್ಕೆಯಾದ ಸಂಸ್ಥೆಯ ಕಾನೂನು ಸಲಹೆಗಾರರಾದ ನ್ಯಾಯವಾದಿ ಮಂಜುನಾಥ್ ಎಸ್.ಕೆ.ಸಾಲಿಗ್ರಾಮ ಅವರನ್ನು ಮಹಾಸಭೆಯಲ್ಲಿ ಸನ್ಮಾನಿಸಲಾಯಿತು. ಉಡುಪಿ ಐಡಿಬಿಐ ಬ್ಯಾಂಕಿನ ಎಜಿಎಂ ಗಣೇಶ್ ತಿಂಗಳಾಯ ಅವರು, ಸದಸ್ಯರಿಗೆ ಬ್ಯಾಂಕಿAಗ್ ಮಾಹಿತಿ ಹಾಗೂ ಸಹಕಾರಿ ಸಂಘಗಳಲ್ಲಿ ಸದಸ್ಯರ ತೊಡಗುವಿಕೆ ಬಗ್ಗೆ ಮಾರ್ಗದರ್ಶನ ನೀಡಿದರು. ಈ ಸಂದರ್ಭ ಗಣೇಶ್ ತಿಂಗಳಾಯ ಹಾಗೂ ಕೈಪುಂಜಾಲ್ ಮೀನುಗಾರರ ಸಹಕಾರಿ ಸಂಘದ ಅಧ್ಯಕ್ಷರಾದ ಜನಾರ್ಧನ ತಿಂಗಳಾಯ ಅವರನ್ನು ಗೌರವಿಸಲಾಯಿತು. ಪ್ರತೀ ವರ್ಷದಂತೆ ಈ ಬಾರಿ ಕೂಡಾ ಸಂಘದ ಸದಸ್ಯರ ೪೮ಮಂದಿ ಮಕ್ಕಳಿಗೆ ವಿವಿಧ ವಿಭಾಗಗಳಲ್ಲಿ ಪ್ರತಿಭಾ ಪುರಸ್ಕಾರ ವಿತರಣೆ ಮಾಡಲಾಯಿತು. ವಿದ್ಯಾರ್ಥಿಗಳ ಪರವಾಗಿ ಬಿಂದಿಯಾ ಹಾಗೂ ಅಭಿಲಾಷ್ ಅನಿಸಿಕೆ ವ್ಯಕ್ತಪಡಿಸಿದರು.
ಮಹಾಸಭೆಯಲ್ಲಿ ಸಂಘದ ಉಪಾಧ್ಯಕ್ಷೆ ಜಯಂತಿ ಗುರುದಾಸ್ ಬಂಗೇರ ಕಿದಿಯೂರ್, ನಿರ್ದೇಶಕರುಗಳಾದ ಯಶ್‌ಪಾಲ್ ಎ.ಸುವರ್ಣ, ಸುರೇಶ್ ಬಿ.ಕುಂದರ್ ಮಲ್ಪೆ, ನಾರಾಯಣ ಪಿ ಕುಂದರ್ ಕಲ್ಮಾಡಿ, ಹರೀಶ್ ಜಿ. ಕರ್ಕೇರ ಕಲ್ಮಾಡಿ, ಲಕ್ಷಿö್ಮÃ ಆನಂದ್ ಪಿತ್ರೋಡಿ, ಸರೋಜ ಕಾಂಚನ್ ಬ್ರಹ್ಮಾವರ, ಸುನೀತ ಜೆ.ಬಂಗೇರ ಉಚ್ಚಿಲ, ಇಂದಿರಾ ವಿ.ಕಾಂಚನ್ ಮಲ್ಪೆ, ಭಾನುಮತಿ ವಿ. ಮೆಂಡನ್ ಕಾಪು ಉಪಸ್ಥಿತರಿದ್ದರು. ಲಾವಣ್ಯ ಜಿ.ಮೇಸ್ತ ಪ್ರಾರ್ಥಿಸಿದರು. ಮುಖ್ಯಕಾರ್ಯನಿರ್ವಹಣಾಧಿಕಾರಿ ಪ್ರಕಾಶ ಸುವರ್ಣ ಕಟಪಾಡಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

 
 
 
 
 
 
 
 
 
 
 

Leave a Reply