ವಿಜಯಾ ಬ್ಯಾಂಕ್ ಪ್ರಸ್ತುತ ಬ್ಯಾಂಕ್ ಆಪ್ ಬರೋಡ ದೊಂಡೇರಂಗಡಿ ಶಾಖೆಯ ಶಾಖಾಧಿಕಾರಿ ಯವರು ಸುಮಾರು 39 ವರ್ಷಗಳ ಸೇವೆ ಸಲ್ಲಿಸಿದ ಹಿನ್ನಲೆಯಲ್ಲಿ ಬ್ಯಾಂಕ್ ಹಾಗೂ ಗ್ರಾಹಕರ ವತಿಯಿಂದ ಸನ್ಮಾನಿಸಿ ಬೀಳ್ಕೊಡಲಾಯಿತು. ನಿವೃತ್ತ ಶಾಖಾದಿ ಕಾರಿ ಯವರು ತಾವು ಬ್ಯಾಂಕಿನಲ್ಲಿ ಉದ್ಯೋಗ ಪ್ರಾರಂಭಿಸಲು ಸರ್ವರ ಸಹಕಾರ ಹಾಗೂ ತಾನು ಬ್ಯಾಂಕಿನಲ್ಲಿ ಪಡೆದ ಜವಾಬ್ದಾರಿ, ಸ್ಥಾನ ಇವೆಲ್ಲವನ್ನೂ ಹಂತ ಹಂತವಾಗಿ ವಿವರಿಸಿ ತನಗೆ ಸಹಕರಿಸಿದ ಎಲ್ಲರಿಗೂ ಶುಭ ಹಾರೈಸಿದರು.
ಗ್ರಾಹಕರ ವತಿಯಿಂದ ಉದ್ಯಮಿ ದಯಾನಂದ ಹೆಗ್ಡೆಯವರು ಮಾತನಾಡಿ ಬ್ಯಾಂಕಿನ ಮ್ಯಾನೇಜರ್ ಹಾಗೂ ಸಿಬ್ಬಂದಿ ಮತ್ತು ಗ್ರಾಹಕರ ನಡುವೆ ಇರಬೇಕಾದ ಸಂಬಂಧಗಳು ಬ್ಯಾಂಕಿನ ಪ್ರಗತಿಗೆ ಪೂರಕವಾಗುತ್ತದೆ. ಬ್ಯಾಂಕ್ ನ ನಿವೃತ್ತ ಅಧಿಕಾರಿ ರಂಗನಟ ಪೆರ್ಡೂರ್ ಪ್ರಭಾಕರ ಕಲ್ಯಾಣಿ ಸ್ವಾಗತಿಸಿ ವಂದಿಸಿದರು..ಬ್ಯಾಂಕಿನ ಪ್ರಸ್ತುತ ಶಾಖಾಧಿಕಾರಿ ಈಶ್ವರ್ ಶೆಟ್ಟಿ ಹಾಗೂ ಸಹಾಯಕ ಅಧಿಕಾರಿ ಪ್ರವೀಣ್ ಕುಮಾರ್ ಗ್ರಾಹಕರಾದ ನಾರಾಯಣ ಕಿಣಿ ,ಚಂದು ದೇವಾಡಿಗ, ರವಿ ಶೆಟ್ಟಿ ರತ್ನಾಕರ ನಾಯಕ್, ಕರುಣಾಕರ ಶೆಟ್ಟಿ, ಅಶೋಕ್ ಕುಮಾರ್, ಗುರುಪ್ರಸಾದ್ ಕಿಣಿ, ಅಶೋಕ್ ಶೆಟ್ಟಿ ಬ್ಯಾಂಕಿನ ಪ್ರಕಾಶ್ ವಿಶ್ವನಾಥ್ ಮಾಲತಿ, ಕೃಷ್ಣ ರತ್ನಾಕರ ಆಚಾರ್ ಪೆರ್ಡೂರ್ ಹಾಗೂ ಹೆಬ್ರಿ ಬ್ಯಾಂಕ್ ಅಪ್ ಬರೋಡ ಬ್ಯಾಂಕಿನ ಶಾಖಾದಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು






