ಸುಪ್ತ ಪ್ರತಿಭೆಯ ಅನಾವರಣಕ್ಕೆ ಬೇಸಿಗೆ ಶಿಬಿರ ಸಹಕಾರಿ – ಅಶೋಕ್ ಕಾಮತ್

ವಿದ್ಯಾರ್ಥಿಗಳಲ್ಲಿರುವ ಸುಪ್ತ ಪ್ರತಿಭೆಗಳು ಸೂಕ್ತ ವೇದಿಕೆ ಮತ್ತು ಪ್ರೋತ್ಸಾಹ ಇದ್ದಲ್ಲಿ ಮಾತ್ರ ಅನಾವರಣ ಗೊಳ್ಳುತ್ತವೆ. ಮುಜುಗರ ಮತ್ತು ಕೀಳರಿಮೆಯ ಭ್ರಮೆ ಯಿಂದ ಹೊರಬಂದರೆ ವಿದ್ಯಾರ್ಥಿಗಳಿಗೆ ತಮ್ಮಲ್ಲಿರುವ ಪ್ರತಿಭೆಯ ಬಗ್ಗೆ ಆತ್ಮವಿಶ್ವಾಸ ಬೆಳೆಯುತ್ತದೆ ಮತ್ತು ಆ ಪ್ರತಿಭೆಯ ವಿಕಾಸ ಸಾಧ್ಯವಾಗುತ್ತದೆ. ಈ ದಿಸೆಯಲ್ಲಿ ಬೇಸಿಗೆ ಶಿಬಿರಗಳು ಹೆಚ್ಚು ಸಹಕಾರಿ ಎಂದು ಜಿಲ್ಲಾ ಶಿಕ್ಷಕ ತರಬೇತಿ ಸಂಸ್ಥೆಯ ಹಿರಿಯ ಉಪನ್ಯಾಸಕ ಅಶೋಕ್ ಕಾಮತ್ ಅಭಿಪ್ರಾಯ ಪಟ್ಟರು. ಅವರು ಉಡುಪಿ ಬಾಲಕಿಯರ ಪದವಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ನಡೆದ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದ ಅತಿಥಿಗಳಾಗಿ ಮಾತನಾಡುತ್ತಿದ್ದರು. ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ರುದ್ರೇ ಗೌಡರು ಕರೋನಾದ ಈ ಸಂದರ್ಭದಲ್ಲಿ ಶಾಲೆಯಲ್ಲಿ ಆಟೋಟ, ಸ್ಪರ್ಧೆಗಳು ಇಲ್ಲದೇ ಕೇವಲ ಪಾಠ ಬೋಧನೆಯಿಂದ ವಿದ್ಯಾರ್ಥಿಗಳು ಏಕತಾನತೆಯನ್ನು ಅನುಭವಿಸುತ್ತಿದ್ದರು. ಈ ಶಿಬಿರ ವಿದ್ಯಾರ್ಥಿಗಳಿಗೆ ಹೊಸ ಉತ್ಸಾಹ ತುಂಬಲು ಸಹಕಾರಿ ಆಗಿದೆ ಎಂದು ಹೇಳಿದರು.

ದೈಹಿಕ ಶಿಕ್ಷಕ ವಸಂತ್ ಜೋಗಿ ಮತ್ತು ವೃತ್ತಿ ಶಿಕ್ಷಕಿ ಮಂಜುಳಾ ಸಂಯೋಜಿಸಿದ ಈ ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಯೋಗಾ ನರಸಿಂಹಸ್ವಾಮಿ, ದಯಾನಂದ್, ಸುಧಾ ಆಡುಕಳ, ಗಣೇಶ್ ಭಾಗ್ವತ್ ಮತ್ತು ಶಾಲೆಯ ಶಿಕ್ಷಕರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು. ನಗರಸಭಾ ಸದಸ್ಯೆ ರಶ್ಮಿ ಸಿ. ಭಟ್, ನಿವೃತ್ತ ಪ್ರಾಂಶುಪಾಲೆ ಯರಾದ ಹಂಸವತಿ, ತಾರಾದೇವಿ, ಸಾಧಕಿ ಹಳೇ ವಿದ್ಯಾರ್ಥಿನಿ ಸಮತಾ ಸಂವಾದ ನಡೆಸಿ ಶುಭ ಹಾರೈಸಿದರು.

ಎಸ್. ಡಿ. ಎಂ.ಸಿ ಯ ಶೇಖರ್ ಕೋಟ್ಯಾನ್ ಉಪಸ್ಥಿತರಿದ್ದರು. ಹಿರಿಯ ಶಿಕ್ಷಕಿ ಜಯಲಕ್ಷ್ಮೀ ಸ್ವಾಗತಿಸಿದರು. ಶಿಕ್ಷಕಿ ಇಂದಿರಾ ಕಾರ್ಯಕ್ರಮ ನಿರೂಪಿಸಿ, ಶೇಖರ್ ಬೋವಿ ವಂದಿಸಿದರು. ಅನಿಸಿಕೆ ಹಂಚಿಕೆ ಮತ್ತು ಬಹುಮಾನ ವಿತರಣೆ ಯೊಂದಿಗೆ ಕಾರ್ಯಕ್ರಮ ಸಂಪನ್ನವಾಯಿತು.

 
 
 
 
 
 
 
 
 
 
 

Leave a Reply