ತೆಂಕನಿಡಿಯೂರು ಕಾಲೇಜು : ವಾರ್ಷಿಕ ಸಂಚಿಕೆ ಮತ್ತು ಸಂಶೋಧನಾ ಗ್ರಂಥ ಬಿಡುಗಡೆ

ಮಲ್ಪೆ : ಕಾಲೇಜುಗಳಲ್ಲಿ ಅಧ್ಯಾಪಕರಿಂದ ನಿರಂತರ ಸಂಶೋಧನೆಗಳಾಗುತ್ತಿರಬೇಕು. ಇದರಿಂದ ಅಧ್ಯಾಪಕರುಗಳ ಕೌಶಲ್ಯ ಬೆಳೆಯುವುದಲ್ಲದೆ ಅದರ ಲಾಭವನ್ನು ವಿದ್ಯಾರ್ಥಿಗಳು ಪಡೆಯಲು ಸಾಧ್ಯ. ವಿದ್ಯಾರ್ಥಿಗಳ ಸೃಜನಶೀಲ ಚಟುವಟಿಕೆಗಳಿಗೆ ಕಾಲೇಜು ಸಂಚಿಕೆ ಪೂರಕ ಎಂದು ಶಾಸಕ ಕೆ ರಘುಪತಿ ಭಟ್ ಹೇಳಿದರು. ಅವರು ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು ಇಲ್ಲಿನ ವಾರ್ಷಿಕ ವಿಶೇಷ ಸಂಚಿಕೆ ಸುದರ್ಶನ ಹಾಗೂ ಅಧ್ಯಾಪಕರ ವರ್ಷದ ಸಂಶೋಧನಾ ಕೃತಿ ‘ವೆವ್ಸ್’ ನ್ನು ಬಿಡುಗಡೆ ಮಾಡಿ ಅವರು ಮಾತನಾಡುತ್ತಿದ್ದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ. ಗಣನಾಥ ಶೆಟ್ಟಿ ಎಕ್ಕಾರು ಕಾಲೇಜಿನ ಸಂಶೋಧನಾ ಚಟುವಟಿಕೆಗೆಳ ಬಗ್ಗೆ ಮಾಹಿತಿ ನೀಡಿದರು.
ಸಂಶೋಧನಾ ಕೃತಿಯ ಬಗ್ಗೆ ಮಾತನಾಡಿದ ಅರ್ಥಶಾಸ್ತ್ರ  ವಿಭಾಗದ ಮುಖ್ಯಸ್ಥ ಸಂಪಾದಕ ಡಾ. ಗೋಪಾಲಕೃಷ್ಣ ಎಂ ಗಾಂವ್ಕರ್ ವಿವಿಧ ವಿಷಯಗಳಿಗೆ ಸಂಬoಧಿಸಿದ ವೈವಿದ್ಯಮಯ ಲೇಖನ ಸಂಚಿಕೆಯಲ್ಲಿದೆ ಎಂದರು. ಸುದರ್ಶನ ಸಂಚಿಕೆ ಸಂಪಾದಕ ಡಾ. ಎಚ್. ಕೆ. ವೆಂಕಟೇಶ್ ಮಾತನಾಡಿ ಇದೊಂದು ಸಂಗ್ರಹಯೋಗ್ಯ ಸಂಚಿಕೆಯಾಗಿದ್ದು ರೂಪುಗೊಂಡ ರೀತಿಯನ್ನು ವಿವರಿಸಿದರು. ನಿವೃತ್ತ ಪ್ರಾಂಶುಪಾಲ ಪ್ರೊ. ಗಣಪತಿ ಭಟ್ ಕುಳಮರ್ವ, ಐ.ಕ್ಯೂ.ಎ.ಸಿ ಸಂಚಾಲಕ ಡಾ. ಸುರೇಶ್ ರೈ ಕೆ, ವಿದ್ಯಾರ್ಥಿ ಸಂಘದ ಸಂಚಾಲಕರಾದ ಡಾ. ದುಗ್ಗಪ್ಪ ಕಜೆಕಾರ್ ಉಪಸ್ಥಿತರಿದ್ದರು. ಸಂಚಾಲಕ ಪ್ರೊ. ರಾಧಾಕೃಷ್ಣ ಸ್ವಾಗತಿಸಿದರೆ ವಿದ್ಯಾರ್ಥಿ ಸಂಘದ ನಾಯಕ ಸುಬ್ರಹ್ಮಣ್ಯ ವಂದಿಸಿದರು. ಇಂಗ್ಲೀಷ್ ವಿಭಾಗ ಮುಖ್ಯಸ್ಥೆ ಶ್ರೀಮತಿ ಶರ್ಮಿಳಾ ಹಾರಾಡಿ ನಿರೂಪಿಸಿದರು.

 
 
 
 
 
 
 
 
 
 
 

Leave a Reply