ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಅವರ ಮೇಲೆ ತಮಿಳು ನಟಿ ಆರೋಪ

ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಅವರ ಮೇಲೆ ತಮಿಳು ನಟಿಯೊಬ್ಬರು ಗುರುತರ ಆರೋಪ ಮಾಡಿದ್ದು ಎರಡು ದಿನಗಳ ಹಿಂದೆಯಷ್ಟೇ ಟ್ವೀಟ್ ಕೂಡ ಮಾಡಿದ್ದರು.ಈಗ ತಾವು ಮಾಡಿದ ಆರೋಪಕ್ಕೆ ಸಾಕ್ಷಿಯಾಗಿ ಆಡಿಯೋ ಮತ್ತು ವಿಡಿಯೋ ಇರುವುದಾಗಿ ಹೇಳಿಕೊಂಡಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷರಾಗಿ ಅಣ್ಣಮಲೈ ಕೆಲಸ ಮಾಡುತ್ತಿದ್ದು ತಮ್ಮದೇ ಆದ ರೀತಿಯಲ್ಲಿ ಪಕ್ಷವನ್ನು ಕಟ್ಟಿಕೊಂಡು ಮುಂದಿನ ಚುನಾವಣೆಗೆ ಬಾರಿ ಸಿದ್ಧತೆಯನ್ನು ಮಾಡಿಕೊಂಡಿದ್ದಾರೆ.

ಈ ವೇಳೆಯಲ್ಲಿ ಬಿಜೆಪಿ ಸೇರಿಕೊಂಡಿದ್ದ ನಟಿ ಗಾಯತ್ರಿ ರಘುರಾಮ್ ಅಣ್ಣಮಲೈ ಅವರ ಮೇಲೆ ಹಲವು ಆರೋಪಗಳನ್ನು ಮಾಡಿದ್ದು, ತನ್ನ ಬಳಿ ಅಣ್ಣಮಲೈ ಯವರ ಇನ್ನೊಂದು ಮುಖವನ್ನು ಬಹಿರಂಗಪಡಿಸುವ ಸಾಕ್ಷಿ ನನ್ನಲ್ಲಿದ್ದು ಅವುಗಳನ್ನು ಪೊಲೀಸರಿಗೆ ನೀಡಲು ನಾನು ತಯಾರಿದ್ದೇನೆ. ಅವರಿಂದಾಗಿ ತಾನು ಸಾಕಷ್ಟು ನೊಂದುಕೊಂಡಿರುವುದಾಗಿ ಹೇಳಿರುವ ನಟಿ ಈ ಹಿಂಸೆಯನ್ನು ಅನುಭವಿಸುವುದಕ್ಕಿಂತ ಪಕ್ಷದ ಕೆಲಸ ಬಿಟ್ಟು ಹೊರಬರುವುದೇ ಒಳ್ಳೆಯದು ಎಂದಿದ್ದಾರೆ.

ಅಣ್ಣ ಮಲೈಯವರ ನಾಯಕತ್ವದಲ್ಲಿ ಮಹಿಳೆಯರಿಗೆ ಸುರಕ್ಷತೆ ಇಲ್ಲ ಎನ್ನುವ ಗಂಭೀರ ಆರೋಪವನ್ನು ಮಾಡಿರುವ ಈ ನಟಿಯು ತಾವು ಪಕ್ಷ ಬಿಟ್ಟರೂ ನರೇಂದ್ರ ಮೋದಿಯವರು ಯಾವಾಗಲೂ ತಮಗೆ ಮಾದರಿಯಾಗಿಯೇ ಇರುತ್ತಾರೆ ಎಂದು ಹೇಳಿಕೊಂಡಿದ್ದಾರೆ.
ಈ ತಮಿಳು ನಟಿಯು ಅಣ್ಣಮಲೈಯವರ ವಿರುದ್ಧ ದೂರ ನೀಡುವುದಕ್ಕೆ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಅದಕ್ಕೆ ಬೇಕಾದ ಎಲ್ಲಾ ಸಾಕ್ಷಿಗಳನ್ನು ತನ್ನ ಬಳಿ ಇದ್ದು ಸದ್ಯದಲ್ಲೇ ಅವುಗಳನ್ನು ಪೊಲೀಸರ ಮುಂದೆ ಇಡುವುದಾಗಿಯೂ ಮತ್ತು ಇದರಿಂದ ಯಾವುದೇ ಕಾರಣಕ್ಕೂ ಹಿಂದೆ ಸರಿಯದೆ ದೊಡ್ಡಮಟ್ಟದಲ್ಲಿ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

 
 
 
 
 
 
 
 
 
 
 

Leave a Reply