ಅಖಿಲ ಭಾರತ ಅಂಚೆ ನೌಕರರ ದ್ವೈವಾರ್ಷಿಕ ಸಮ್ಮೇಳನ

ಅಖಿಲ ಭಾರತ ಅಂಚೆ ನೌಕರರ ಸಂಘ ಗ್ರೂಪ್ ಸಿ, ಮತ್ತು ಪೋಸ್ಟ್ ಮ್ಯಾನ್ /ಎಂ ಟಿ ಎಸ್ . ಉಡುಪಿ ವಿಭಾಗ ಇದರ ದ್ವೈವಾರ್ಷಿಕ ಸಮ್ಮೇಳನ  ಶುಕ್ರವಾರ ಬ್ರಹ್ಮಾವರದ ಮದರ್ ಪ್ಯಾಲೇಸ್ ನ ಅತಿಥಿ ಸಭಾಂಗಣದಲ್ಲಿ ನಡೆಯಿತು.ಸಮ್ಮೇಳನವನ್ನು ಉದ್ಘಾಟಿಸಿದ ಕರ್ನಾಟಕ ಪಿ 3 ವಲಯ ಕಾರ್ಯದರ್ಶಿ ಜಿ ಜಾನಕಿರಾಮ್ ಅಂಚೆ ನೌಕರರ ಸಮಸ್ಯೆಗಳನ್ನು ಮತ್ತು ಸಂಘಟನೆಯಿಂದ ಮಾಡಿದ ವಿವಿಧ ಸಾಧನೆಗಳನ್ನು ತಿಳಿಸಿದರು.

ವೇದಿಕೆಯಲ್ಲಿ ಮುಖ್ಯ ಅತಿಥಿಗಳಾದ ಶ್ರೀ ನವೀನ್ ಚಂದರ್ ಅಂಚೆ ಅಧೀಕ್ಷಕರು ಉಡುಪಿ ವಿಭಾಗ, ಚಂದ್ರ ಸ್ವಾಮಿ. ಕರ್ನಾಟಕ ವಲಯ ಅಧ್ಯಕ್ಷರು ಪಿ 3, ಕೃಷ್ಣಮೂರ್ತಿ ಎಸ್ಸಿಎಸ್ಟಿ ಕರ್ನಾಟಕ ವಲಯ ಕಾರ್ಯದರ್ಶಿ, ಶ್ರೀ ದಯಾನಂದ ಎ ಎಸ್ ಪಿ,ಬಿಪಿಸಿ ಮಣಿಪಾಲ್, ಬಾಸ್ಕರ್ ಶೆಟ್ಟಿ ವಲಯ ಸಂಘಟನಾ ಕಾರ್ಯದರ್ಶಿ,  ಶೈಲೇಶ್ ಮಂಗಳೂರು, ಲಕ್ಷ್ಮಣ್ ,ಶ್ರೀ ಎಂಕೆ ರಾಜೇಶ್,  ಪುರಂದರ್ ಉಪಸ್ಥಿತರಿದ್ದರು.

ಸಾಧನೆಗೈದ ಅಂಚೆ ನೌಕರರಿಗೆ ಹಾಗೂ ನಿವೃತ್ತರಾದ ನೌಕರರನ್ನು ಸನ್ಮಾನಿಸಿದರು. ಸಭೆಯ ಅಧ್ಯಕ್ಷತೆಯನ್ನು ಕಾಂ.ಉಮೇಶ್ ನಾಯಕ್ ವಹಿಸಿದ್ದರು ಕಾಂ. ಸುಬ್ಬ ಮರಕಾಲ ಪ್ರಸ್ತಾವಿಕವಾಗಿ ಮಾತನಾಡಿದರು. ಕರ್ನಾಟಕ ಪಿ 4 ಅಂಚೆ ನೌಕರರ ರಾಜ್ಯಾಧ್ಯಕ್ಷರಾದ ಕಾಂ. ವಿಜಯ ನಾಯರಿ ಸ್ವಾಗತಿಸಿದರು. ನರಸಿಂಹ ನಾಯಕ್ ಧನ್ಯವಾದ ನೀಡಿದರು.

 
 
 
 
 
 
 
 
 
 
 

Leave a Reply