ರಾಷ್ಟ್ರಧ್ವಜದ ಗೌರವ ಕಾಪಾಡಿಕೊಂಡು ಮನೆ-ಮನಗಳಲ್ಲಿ ರಾಷ್ಟ್ರ ಪ್ರೇಮವನ್ನು ಮೆರೆಯಿರಿ – ಅಂಪಾರು ದಿನಕರ ಶೆಟ್ಟಿ

ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಉಡುಪಿ ಜಿಲ್ಲಾ ಶಾಖೆಯ ವತಿಯಿಂದ ಮಾನ್ಯ ರಾಜ್ಯಾದ್ಯಕ್ಷರಾದ ಸಿ.ಎಸ್.ಷಡಾಕ್ಷರೀ ಅವರ ಸೂಚನೆಯ ಮೇರೆಗೆ ಜಿಲ್ಲೆಯ ವಿವಿಧ ಇಲಾಖೆಗಳಿಗೆ ತೆರಳಿ 1500 ಕ್ಕೂ ಅಧಿಕ ರಾಷ್ಟ್ರಧ್ವಜ ಗಳನ್ನು ಜಿಲ್ಲಾದ್ಯಕ್ಷರಾದ ಅಂಪಾರು ಕೆ.ದಿನಕರ ಶೆಟ್ಟಿಯವರ ನೇತೃತ್ವದಲ್ಲಿ ನೀಡಲಾಯಿತು. 

ಅಜಾದಿ ಅಮೃತಮಹೋತ್ಸವದ 75ನೇ ವರ್ಷದ ಸ್ವಾತಂತ್ರೋತ್ಸವದ ಅಂಗವಾಗಿ ಕೇಂದ್ರ ಸರ್ಕಾರದ ಸೂಚನೆ ಅನ್ವಯ ಈ ದೇಶದ ಎಲ್ಲಾ ರಾಜ್ಯಗಳಿಗೆ ‘ಹರ್ ಗರ್ ತಿರಂಗಾ’ ಎನ್ನುವ ಕಲ್ಪನೆಯಡಿಯಲ್ಲಿ ದೇಶದ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಶಾಲೆ,ಕಾಲೇಜು, ಅಂಗನವಾಡಿ ಗಳಲ್ಲಿಯೂ ಕೂಡ ರಾಷ್ಟ್ರ ಪ್ರೇಮ ಪ್ರತಿಕವಾಗಿಧ್ವಜ ರಾರಾಜಿಸಲಿ ಎನ್ನುವ ಪರಿಕಲ್ಪನೆಯೊಂದಿಗೆ ಕರ್ನಾಟಕ ರಾಜ್ಯ ಸರ್ಕಾರದ ಮುಖ್ಯಮಂತ್ರಿಗಳ ಮತ್ತು ಮುಖ್ಯ ಕಾರ್ಯದರ್ಶಿಯವರ ಸೂಚನೆಯಂತೆ ಜಿಲ್ಲೆಯ ಎಲ್ಲಾ ನೌಕರರು ತಮ್ಮ ತಮ್ಮ ಮನೆಗಳಲ್ಲಿ, ಮತ್ತು ಕೆಲಸಮಾಡುವ ಕಚೇರಿಗಳಲ್ಲಿ ಶಾಲೆಗಳಲ್ಲಿ, ಕಾಲೇಜುಗಳಲ್ಲಿ,ಧ್ವಜವನ್ನು ಹಾರಾಡಿಸುವುದು ಕರ್ತವ್ಯ ಮತ್ತು ಜವಾಬ್ದಾರಿ ಆಗಿರುತ್ತದೆ.

ರಾಷ್ಟ್ರಧ್ವಜದ ಗೌರವ ಕಾಪಾಡಿಕೊಂಡು ಕಚೇರಿ ಮತ್ತು ಮನೆಗಳಲ್ಲಿಯೂ ಕೂಡಾ ಈ ರಾಷ್ಟ್ರ ಪ್ರೇಮವನ್ನು ಮೆರೆಯುವಂತೆ ಜಿಲ್ಲಾಧ್ಯಕ್ಷ ಅಂಪಾರು ದಿನಕರ ಶೆಟ್ಟಿ ವಿನಂತಿಸಿದ್ದಾರೆ.

 
 
 
 
 
 
 
 
 
 
 

Leave a Reply