Janardhan Kodavoor/ Team KaravaliXpress
24.6 C
Udupi
Sunday, September 25, 2022
Sathyanatha Stores Brahmavara

ಮಂಗಳೂರು ವಿಶ್ವವಿದ್ಯಾನಿಲಯದ ಸಿಬ್ಬಂದಿಗಳ ಲಾನ್ ಟೆನ್ನಿಸ್ ಟೂರ್ನ್ಮೆಂಟ್

ಮಂಗಳೂರು ವಿಶ್ವದ್ಯಾನಿಲಯ, ದೈಹಿಕ ಶಿಕ್ಷಣ ವಿಭಾಗ ಹಾಗೂ ಡಾ.ಜಿ.ಶಂಕರ್ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ, ಅಜ್ಜರಕಾಡು ಉಡುಪಿ ಇವುಗಳ ಸಂಯುಕ್ತ ಆಶ್ರಯದಲ್ಲಿ ೨೦೨೧-೨೨ ನೇ ಸಾಲಿನ ಮಂಗಳೂರು ವಿಶ್ವವಿದ್ಯಾನಿಲಯದ ಸಿಬ್ಬಂದಿಗಳ ಟೆನ್ನಿಸ್ ಟೂರ್ನ್ಮೆಂಟ್ ದಿನಾಂಕ ೧೬-೦೭-೨೦೨೨ ರಂದು ಉಡುಪಿಯ ಅಜ್ಜರಕಾಡು ಟೆನ್ನಿಸ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಿತು. ಮುಕ್ತ ವಿಭಾಗದ ಸಿಂಗಲ್ಸ್ ಪಂದ್ಯಾಟದಲ್ಲಿ ಡಾ. ರಾಮಚಂದ್ರ ಪಾಟ್ಕರ್ ವಿಜೇತರಾದರೆ, ಡಾ.ಕಿಶೋರ್ ಕುಮಾರ್ ಸಿ.ಕೆ ರನ್ರ‍್ಸ್ ಅಪ್ ಪ್ರಶಸ್ತಿ ಪಡೆದರು. ಡಬಲ್ಸ್ ವಿಭಾಗದಲ್ಲಿ ಡಾ. ರಾಮಚಂದ್ರ ಪಾಟ್ಕರ್‌ಮತ್ತು ಡಾ.ವೆಂಕಟೇಶ ಎಚ್.ಕೆ. ವಿಜೇತರಾದರೆ, ಡಾ. ಕಿಶೋರ್ ಕುಮಾರ್ ಸಿ.ಕೆ. ಮತ್ತು ರಂಜಿತ್‌ಜೋಡಿಯು ರನ್ರ‍್ಸ್ ಅಪ್ ಆದರು. ೪೫ ವರ್ಷ ಮೇಲ್ಪಟ್ಟವರ ಸಿಂಗಲ್ಸ್ ವಿಭಾಗದಲ್ಲಿ ಡಾ. ಕಿಶೋರ್ ಕುಮಾರ್ ಸಿ.ಕೆ. ವಿಜೇತರಾದರೆ, ಡಾ. ರಾಮಚಂದ್ರ ಪಾಟ್ಕರ್ ರನ್ನರ್ ಅಪ್ ಆದರು.

ಸಮರೋಪ ಸಮಾರಂಭದಲ್ಲಿ ಪ್ರಭಾರ ಪ್ರಾಂಶುಪಾಲರಾದ ಶ್ರೀ ರಾಮಚಂದ್ರ ಅಡಿಗ ಜಿ., ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಡಾ. ವಿನೋದ್ ಹೆಗ್ಡೆ, ಶ್ರೀ ಬಿಜು ಜಾಕಬ್, ತರಬೇತಿದಾರರಾದ ಶ್ರೀ ನಿಖಿಲ್ ರವರು ಭಾಗವಹಿಸಿದ್ದರು.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!