Janardhan Kodavoor/ Team KaravaliXpress
30.6 C
Udupi
Sunday, October 2, 2022
Sathyanatha Stores Brahmavara

ತೆಂಕನಿಡಿಯೂರು: ದುಶ್ಚಟ ಮುಕ್ತ ಸಮಾಜವೇ ದೇಶದ ಅಭಿವೃದ್ಧಿಗೆ ಮೂಲ-ಡಾ.ಸುರೇಶ್ ರೈ

ದಿನಾಂಕ 19.07.2022 ರಂದು ಸರಕಾರಿ ಪ್ರಥಮ ರ‍್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ, ತೆಂಕನಿಡಿಯೂರು ಮತ್ತು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಇವರ ಸಂಯುಕ್ತ ಆಶ್ರಯದಲ್ಲಿ ಸ್ವಾಸ್ಥ್ಯ ಸಂಕಲ್ಪ ಕರ‍್ಯಕ್ರಮ ಜರುಗಿತು. ಕರ‍್ಯಕ್ರಮದ ಉದ್ಘಾಟನೆಯನ್ನು ಪ್ರಾಂಶುಪಾಲರಾದ ಡಾ. ಸುರೇಶ್ ರೈ ನೆರವೇರಿಸಿ ಮಾತನಾಡುತ್ತಾ ಮಾನವನನ್ನು ದಾನವನನ್ನಾಗಿ ಮಾಡುವುದೇ ಮಾದಕ ವ್ಯಸನ. ಇಂತಹ ಮಾದಕ ವ್ಯಸನದಿಂದ ಸಮಾಜ ಮುಕ್ತವಾಗಬೇಕಾದರೆ ಮೊದಲು ತನ್ನನ್ನು ತಾನು ವ್ಯಸನದಿಂದ ದೂರವಿರುವಂತೆ ಮನಸ್ಸನ್ನು ಹತೋಟಿಯಲ್ಲಿಡಬೇಕು. ಇದರಿಂದ ಮಾತ್ರ ಇಡೀ ಸಮಾಜವನ್ನು ಸ್ವಾಸ್ಥ್ಯ ಸಮಾಜವನ್ನಾಗಿಸಬಹುದು ಎಂದು ಅವರು ಈ ಸಂರ‍್ಭದಲ್ಲಿ ಹೇಳಿದರು. ದುಶ್ಚಟ ಮುಕ್ತ ಸಮಾಜವೇ ನಮ್ಮ ದೇಶದ ಅಭಿವೃದ್ಧಿಗೆ ಮೂಲ ಮಂತ್ರ. ಈ ಕನಸನ್ನು ಮಹಾತ್ಮ ಗಾಂಧೀಜಿಯವರು ಕಂಡರು. ಆದರೂ ಸ್ವಾತಂತ್ರ ದೊರೆತು ಇಷ್ಟು ರ‍್ಷವಾದರೂ ನಾವುಗಳು ದುಶ್ಚಟ ಮುಕ್ತ, ಮದ್ಯವ್ಯಸನಮುಕ್ತ ಸಮಾಜವನ್ನು ನರ‍್ಮಿಸುವಲ್ಲಿ ಯಶಸ್ವಿಯಾಗಿಲ್ಲ. ಸಮಾಜದ ಸ್ವಾಸ್ಥ್ಯಕ್ಕಾಗಿ ವಿದ್ಯರ‍್ಥಿ ದೆಶೆಯಲ್ಲಿಯೇ ವ್ಯಾಪಕ ಅರಿವು ಮೂಡಿಸುವ ಅಗತ್ಯವಿದೆ ಎಂದು ಡಾ.ರೈ ತಿಳಿಸಿದರು. ಕರ‍್ಯಕ್ರಮದಲ್ಲಿ SಏಆಖP ಉಡುಪಿ ಜಿಲ್ಲಾ ಮಟ್ಟದ ಸಂನ್ಮೂಲ ವ್ವಕ್ತಿ ನವೀನ್ಕುಮಾರ್ ಮಾತನಾಡಿ ವಿದ್ಯರ‍್ಥಿಗಳು ಮಾನಸಿಕ ವಾಗಿ ಮತ್ತು ದೈಹಿಕವಾಗಿ ಸದೃಢರಾದಾಗ ಮಾತ್ರ ಕಲಿಕೆಯತ್ತ ಆಸಕ್ತಿ ವಹಿಸಬಹುದು ಎಂದು ಸಲಹೆ ನೀಡಿದರು.ಯುವ ಜನತೆ ದೇಶದ ಶಕ್ತಿಯಾಗಿದ್ದು, ಒಳ್ಳೆಯ ಮರ‍್ಗರ‍್ಶನದಲ್ಲಿ ವಿದ್ಯಾ ವಂತರಾದರೆ ಮಾತ್ರ ಉತ್ತಮ ಸಮಾಜ ನರ‍್ಮಾಣ ಸಾಧ್ಯ ಎಂದು ಅವರು ಹೇಳಿದರು. ಕರ‍್ಯ ಕ್ರಮದಲ್ಲಿ ಐಕ್ಯೂಎಸಿ ಸಂಚಾಲಕರಾದ ಡಾ.ಮೇವಿ ಮಿರಾಂದ, ಮಲ್ಪೆ ವಲಯ ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ಪ್ರಶಾಂತ ಸಾಲಿಯಾನ್ ಮತ್ತು ಆಶಾಲತ ಉಪಸ್ಥಿತರಿದ್ದರು.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!