ಡಾ.ಅಜೆಕಾರು ಅವರಿಗೆ ಮಾಧ್ಯಮ ಕಲಾ ರತ್ನ ಪ್ರಶಸ್ತಿ

ಅಜೆಕಾರು/ಕಾರ್ಕಳ/ ಹೆಬ್ರಿ: ತುಳುವ ಮಾಧ್ಯಮ ಸಿರಿ, ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್‌ನ ಮಾಧ್ಯಮ ಸೇವಾ ರತ್ನ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸಹಿತ ನೂರಾರು ಗೌರವಗಳಿಗೆ ಪಾತ್ರರಾದ ಹಿರಿಯ ಪತ್ರಕರ್ತರಾದ ಡಾ.ಶೇಖರ ಅಜೆಕಾರು ಅವರ ಮಾಧ್ಯಮ ಕ್ಷೇತ್ರದ ಸಾಧನೆಯನ್ನು ಗುರುತಿಸಿ ಶಾಂತಾ ಪ್ರತಿಷ್ಠಾನವು ಮಾಧ್ಯಮ ಕಲಾ ರತ್ನ ರಾಜ್ಯಮಟ್ಟದ ಗೌರವ ನೀಡಿ ಸನ್ಮಾನಿಸಿತು.
ಬಿ.ವಿ ಅರ್ತಿಕಜೆ, ಬಿ.ಕೆ. ಮಾಧವ ರಾವ್, ಭೀಮರಾವ್ ವಸ್ತಾರ್, ಪಿವಿ. ಪ್ರದೀಪ್ ಕುಮಾರ್, ಎಮ್.ಸಿ ರಾಜಣ್ಣ ಅವರಿಗೆ ಅವರವರ ಕ್ಷೇತ್ರದ ಸಾಧನೆಗಾಗಿ ಪ್ರಶಸ್ತಿಯನ್ನು ಪ್ರದಾನಿಸಲಾಯಿತು.

ಭಾನುವಾರ ಉಪ್ಪಿನಂಗಡಿ ಶಾಂತಾ ಸಭಾಭವನದಲ್ಲಿ ನಡೆದ ಭಗವದ್ಗೀತಾ ವಿಶ್ವ ವೈಭವ ಕಾರ್ಯಕ್ರಮದಲ್ಲಿ ವಿಶ್ರಾಂತ ನ್ಯಾಯಮೂರ್ತಿ ಅರಳಿ ನಾಗರಾಜ್, ಕನ್ನಡ ಸಾಹಿತ್ಯ ಪರಿಷತ್‌ನ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಅವರು ಗೌರವ ಪ್ರದಾನಿಸಿದರು.

ನಾವು ಎಲ್ಲಿ ರಾಜಿ ಮಾಡಬೇಕೋ ಅಲ್ಲಿ ರಾಜಿ ಮಾಡಿಕೊಳ್ಳುತ್ತಿಲ್ಲ, ಎಲ್ಲಿ ರಾಜಿ ಮಾಡಬಾರದೋ ಅಲ್ಲಿ ರಾಜಿ ರಾಜಿ ಮಾಡಿಕೊಳ್ಳತ್ತೇವೆ ಅದು ಇಂದಿನ ದುರಂತಕ್ಕೆ ಕಾರಣ. ಪ್ರತಿಭಾನ್ವಿತರನ್ನು ಹೀಗೆ ನ್ಯಾಯೋಚಿತವಾಗಿ ಗುರುತಿಸಿ ಗೌರವಿಸುವುದು ಸತ್ಕಾರ್ಯ ಎಂದು ಅರಳಿ ನಾಗರಾಜ್ ಹೇಳಿದರು.
ಓಡಿಯೂರು ಶ್ರೀ ಗುರು ದೇವದತ್ತ ಸಂಸ್ಥಾನಮ್‌ನ ಶ್ರೀ ಗುರುದೇವಾನಂದ ಸ್ವಾಮಿಜಿ ಮತ್ತು ಶ್ರೀ ಕ್ಷೇಥ್ರ ಕಟೀಲಿನ ಆನುವಂಶಿಕ ಅರ್ಚಕ ಕಮಲಾದೇವಿ ಅಸ್ರಣ್ಣ , ಪುತ್ತೂರು ಕ.ಸಾ.ಪ ಅಧ್ಯಕ್ಷ ಉಮೇಶ್ ನಾಯಕ್, ಯುಗಪುರುಷದ ಭುವನಾಭಿರಾಮ ಉಡುಪ, ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷೆ ಶಾಂತಾ ಕುಂಠಿನಿ, ಕಾರ್ಯದರ್ಶಿ ಡಾ.ಸೌರಭಾ ಜಯರಾಮ್ ಅವರು ಉಪಸ್ಥಿತರಿದ್ದರು. ಶಾಂತಾ ಪುತ್ತೂರು ಮತ್ತು ಅಪೂರ್ವ ಕಾರಂತ್ ಪುತ್ತೂರು ಪ್ರಶಸ್ತಿ ಪುರಸ್ಕೃತರನ್ನು ಸನ್ಮಾನಿತರನ್ನು ಪರಿಚಯಿಸಿದರು.

 
 
 
 
 
 
 
 
 
 
 

Leave a Reply