Janardhan Kodavoor/ Team KaravaliXpress
25.6 C
Udupi
Saturday, July 2, 2022
Sathyanatha Stores Brahmavara

ವಿಶ್ವ ಆರೋಗ್ಯ ದಿನ – ಜೆಸಿಐ ಕಲ್ಯಾಣಪುರದ ವತಿಯಿಂದ ಎಲ್ ವಿ ಪಿ ಶಾಲೆಯ ಮಕ್ಕಳಿಗೆ ಆರೋಗ್ಯ ಮಾಹಿತಿ

ವಿಶ್ವ ಆರೋಗ್ಯ ದಿನದ ಅಂಗವಾಗಿ ಜೆಸಿಐ ಕಲ್ಯಾಣಪುರದ ವತಿಯಿಂದ ಎಲ್ ವಿ ಪಿ ಶಾಲೆಯ ಮಕ್ಕಳಿಗೆ ಆರೋಗ್ಯ ಮಾಹಿತಿ ನೀಡಲಾಯಿತು. ಈ ಕಾರ್ಯಕ್ರಮದ ಉದ್ಘಾಟನೆಯನು Dr. ಅರುಣ್ ವರ್ಣಿಕರ್ ಮಕ್ಕಳ ತಜ್ಞರು ಮೀರಾ ಕ್ಲಿನಿಕ್ ಸಂತೆಕಟ್ಟೆ ಇವರು ದೀಪ ಬೆಳಗಿಸಿ ಉದ್ಘಾಟಿಸಿ, ಮಕ್ಕಳಿಗೆ ಆರೋಗ್ಯದಾಯಕ ಆಹಾರ ಸೇವನೆ, ಹಾಗೂ ಆರೋಗ್ಯದಾಯಕ ಜೀವನಕೆ ಬೇಕಾದ ಮಾಹಿತಿಯನ್ನು ಮಕ್ಕಳಿಗೆ ನೀಡಿದರು.

ಮುಖ್ಯ ಅಥಿತಿಯಾಗಿ ಶಾಲಾ ಮುಖ್ಯೋಪಾಧ್ಯಾಯಿನಿಯವರಾದ ಲೂಸಿ ಡಿಸೋಜಾ ಯವರು ಜೆಸಿಐ ಸಂಸ್ಥೆಯು 20 ವರ್ಷಗಳಿಂದ ನಮ್ಮ ಶಾಲೆಯಲ್ಲಿ ಅತ್ಯುತ್ತಮ ಕಾರ್ಯಕ್ರಮವನ್ನು ನೀಡುತ್ತಾ ಬಂದಿರುತ್ತಾರೆ ಎಂದು ತಿಳಿಸಿ ಈ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಸಭಾಧ್ಯಕ್ಷತೆಯನ್ನು ಜೆಸಿಐ ಕಲ್ಯಾಣಪುರದ ಅಧ್ಯಕ್ಷರಾದ ಜೆಸಿ ಜಯಶ್ರೀ ಮಿತ್ರ ವಹಿಸಿ ವೇದಿಕೆಯಲ್ಲಿರುವ ಗಣ್ಯರನ್ನು ಸ್ವಾಗತಿಸಿದರು.ಧನ್ಯವಾದವನ್ನು ಅಧ್ಯಾಪಕರಾದ ಪ್ರಕಾಶ್ ರ ವರು ನೆರವೇರಿಸಿದರು. ವೇದಿಕೆಯಲ್ಲಿ ಕಾರ್ಯದರ್ಶಿ ಅನುಸೂಯಾ ಅನಿಲ್, ಲವೀನಾ ಲೂವಿಸ್, ಸವಿತಾ ರವೀಂದ್ರ, ಮಹಿಳಾ ನಿರ್ದೇಶಕಿ ಅನಿತಾ ನರೇಂದ್ರ ಉಪಸ್ಥಿತರಿದ್ದರು.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!