ಬೆಂಗಳೂರಿನಲ್ಲಿ ಏಷ್ಯಾದ ಅತಿದೊಡ್ಡ ಏರೋ ಶೋ ಏರೋ ಇಂಡಿಯಾ 2023 ಉದ್ಘಾಟನೆ!

ಏಷ್ಯಾದ ಅತಿದೊಡ್ಡ ಏರೋ ಶೋ ಏರೋ ಇಂಡಿಯಾ 2023 (Aero India)ಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದ್ದಾರೆ. ಏರೋ ಇಂಡಿಯಾ 14 ನೇ ಆವೃತ್ತಿಯಲ್ಲಿ ವಿದೇಶಿ ಕಂಪೆನಿಗಳ ಪಾಲುದಾರಿಕೆಯೊಂದಿಗೆ ಏರ್ ಶೋ ಆಯೋಜಿಸಲಾಗುತ್ತಿದೆ. ಐದು ದಿನಗಳ ಕಾಲ ನಡೆಯಲಿರುವ ವೈಮಾನಿಕ ಪ್ರದರ್ಶನ ಪ್ರವಾಸಿಗರನ್ನು ಆಕರ್ಷಿಸುತ್ತಿದೆ.

ಯುನೈಟೆಡ್ ಸ್ಟೇಟ್ಸ್ ಏರ್ ಫೋರ್ಸ್‌ನ (USAF) ಪ್ರಮುಖ ಫೈಟರ್ ಜೆಟ್‌ಗಳಲ್ಲಿ ಒಂದಾದ F-16 ಫೈಟಿಂಗ್ ಫಾಲ್ಕನ್ ಜೋಡಿಯು ದೈನಂದಿನ ವೈಮಾನಿಕ ಪ್ರದರ್ಶನಗಳನ್ನು ನಡೆಸುತ್ತದೆ. F/A-18E ಮತ್ತು F/A-18F ಸೂಪರ್ ಹಾರ್ನೆಟ್, US ನೌಕಾಪಡೆಯ ಅತ್ಯಾಧುನಿಕ ಫ್ರಂಟ್‌ಲೈನ್ ಕ್ಯಾರಿಯರ್-ಆಧಾರಿತ, ಇಂದು ಲಭ್ಯವಿರುವ ಮಲ್ಟಿರೋಲ್ ಸ್ಟೈಕ್ ಫೈಟರ್ ಸ್ಥಿರ ಪ್ರದರ್ಶನದಲ್ಲಿರುತ್ತದೆ.98 ದೇಶಗಳ ಸುಮಾರು 809 ಕಂಪನಿಗಳು ಈ ಬಾರಿಯ ಏರ್ ಶೋನಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.

ಏರ್ ಶೋನಲ್ಲಿ ಮಿಲಿಟರಿ ವಿಮಾನಗಳು, ಜೆಟ್ ಗಳು ಪ್ರದರ್ಶನ ನೀಡಲಿವೆ. ಆದರೆ ಈ ಬಾರಿ ದೇಶೀಯಾ ಹಾಗೂ ವಿದೇಶಿ ನಿರ್ಮಿತ ವಿಮಾನಗಳು ಕೂಡ ಪ್ರದರ್ಶನವನ್ನು ನೀಡಲಿವೆ. ಪ್ರಧಾನಿ ನರೇಂದ್ರ ಮೋದಿ ಸರಕಾರ ತನ್ನ “ಮೇಕ್ ಇನ್ ಇಂಡಿಯಾ” ನೀತಿಯ ಅಡಿಯಲ್ಲಿ ಲಾಕ್‌ಹೀಡ್ ಮಾರ್ಟಿನ್ ಕಾರ್ಪ್, ಬೋಯಿಂಗ್ ಮತ್ತು ಏರ್‌ಬಸ್‌ನಂತಹ ತಯಾರಕರು ತಂತ್ರಜ್ಞಾನ ಪರಿಚಯಿಸಲು ಮುಂದಾಗಿವೆ. ಏರೋ ಇಂಡಿಯಾ ಶೋ ಮೂಲಕ ವಿವಿಧ ಭಾರತೀಯ ಮತ್ತು ವಿದೇಶಿ ರಕ್ಷಣಾ ಕಂಪೆನಿಗಳ ನಡುವೆ ಬರೋಬ್ಬರಿ 75,000 ಕೋಟಿ ರೂಪಾಯಿ ಹೂಡಿಕೆಯ ಜೊತೆಗೆ ಸುಮಾರು 251 ಒಪ್ಪಂದಗಳಿಗೆ ಸಹಿ ಹಾಕುವ ಸಾಧ್ಯತೆಯಿದೆ.

ಫೆ. 13 ರಂದು ಬೆಳಿಗ್ಗೆ 8 ರಿಂದ 11:30 ರವರೆಗೆ ಬಳ್ಳಾರಿ ರಸ್ತೆಯ ಎಸ್ಟೀಮ್ ಮಾಲ್ ನಿಂದ ಎಲಿವೇಟೆಡ್ ರಸ್ತೆಯಲ್ಲಿ ವಾಹನಗಳ ಚಾಲನೆಗೆ ನಿಷೇಧ ಹೇರಲಾಗಿದೆ. ಕಾರ್ಯಕ್ರಮದ ಪಾಸ್ ಹೊಂದಿರುವವರಿಗೆ ಮಾತ್ರ ಈ ರಸ್ತೆಯಲ್ಲಿ ಪ್ರವೇಶ ಇರುತ್ತದೆ. ಯಲಹಂಕ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೆ ಹೋಗಬೇಕಾದ ಜನರು ಎಲಿವೇಟೆಡ್ ರಸ್ತೆ ಬದಲು ಕೆಳಗಿನ ಸರ್ವಿಸ್ ರಸ್ತೆಯನ್ನು ಬಳಸಬೇಕು. ವಿಮಾನ ನಿಲ್ದಾಣಕ್ಕೆ ಹೋಗಬೇಕೆನ್ನುವವರು ಹೆಣ್ಣೂರು ಜಂಕ್ಷನ್ ಮೂಲಕ ಪರ್ಯಾಯ ಮಾರ್ಗ ಬಳಸಬೇಕು ಎಂದು ಬೆಂಗಳೂರು ಸಂಚಾರ ಪೊಲೀಸ್ ಇಲಾಖೆ ಪ್ರಕಟಣೆ ಹೊರಡಿಸಿದೆ. ಏರ್ ಪೋರ್ಟ್ ಗೆ ಹೋಗುವ ರಸ್ತೆಯಲ್ಲಿ ದೊಡ್ಡ ವಾಹನಗಳ ಸಂಚಾರಕ್ಕೆ ಐದು ದಿನಗಳ ಕಾಲ ಅವಕಾಶ ಇರುವುದಿಲ್ಲ. ಬೆಂಗಳೂರಿನ ಪೂರ್ವದಿಂದ ಏರ್ ಪೋರ್ಟ್ ಗೆ ಹೋಗುವ ಪ್ರಯಾಣಿಕರು ಕೆಆರ್ ಪುರಂ ಹೆಣ್ಣೂರು ಕ್ರಾಸ್, ಮ್ಯಾಲನಹಳ್ಳಿ, ಬೇಗೂರು ಬ್ಯಾಕ್ ಗೇಟ್ ಮೂಲಕ ಏರ್ ಪೋರ್ಟ್ ತಲುಪಬಹುದು. ಪಶ್ಚಿಮ ಕಡೆಯಿಂದ ಏರ್ ಪೋರ್ಟ್ ಗೆ ತಲುಪುವವರು ಗೊರಗುಂಟೆ ಪಾಳ್ಯ ಬಿಇಎಲ್ ಸರ್ಕಲ್, ಗಂಗಮ್ಮ ಸರ್ಕಲ್, ಮದರ್ ಡೈರಿ, ಉನ್ನೀಕೃಷ್ಣನ್ ಜಂಕ್ಷನ್, ದೊಡ್ಡಬಳ್ಳಾಪುರ ರಸ್ತೆ, ರಾಜಾನುಕುಂಟೆ, ಅದ್ದಿಗನಹಳ್ಳಿ, ಎಂವಿಐಟಿ, ವಿದ್ಯಾನಗರ್ ಕ್ರಾಸ್ ಮೂಲಕ ಹಾದು ಹೋಗಬಹುದು. ದಕ್ಷಿಣ ಭಾಗದಿಂದ ಏರ್ ಪೋರ್ಟ್ ಗೆ ಹೋಗಲು ಮೈಸೂರು ರಸ್ತೆ, ನಾಯಂಡನಹಳ್ಳಿ ಚಂದ್ರಲೇಔಟ್, ಗೊರಗುಂಟೆ ಪಾಳ್ಯ
ಬಿಇಎಲ್ ಸರ್ಕಲ್, ಗಂಗಮ್ಮ ಸರ್ಕಲ್, ಮದರ್ ಡೈರಿ, ಉನ್ನೀಕೃಷ್ಣನ್ ಜಂಕ್ಷನ್, ದೊಡ್ಡಬಳ್ಳಾಪುರ ರಸ್ತೆ, ರಾಜಾನುಕುಂಟೆ, ಅದ್ದಿಗನಹಳ್ಳಿ, ಎಂವಿಐಟಿ ಕ್ರಾಸ್ ಹಾಗೂ ವಿದ್ಯಾನಗರ್ ಕ್ರಾಸ್ ಮಾರ್ಗ ಬಳಸಬಹುದು. ಇನ್ನೂ ದೊಡ್ಡ ವಾಹನಗಳಿಗೂ ಕೂಡ ಫೆ.
17 ರವರೆಗೆ ಸಂಚಾರವನ್ನು ತಡೆಯಲಾಗಿದ್ದು, ಪ್ರತ್ಯೇಕ ಮಾರ್ಗಗಳನ್ನು ಸೂಚಿಸಲಾಗಿದೆ.

 
 
 
 
 
 
 
 
 
 
 

Leave a Reply